ಶುಕ್ರವಾರ, ಆಗಸ್ಟ್ 9, 2024
ರಾಜ್ಯಮಟ್ಟದ ಮೂರು ದಿನಗಳ ‘ಪಿ.ಲಂಕೇಶ್ ಕೃತಿಗಳ ಅಧ್ಯಯನ ಶಿಬಿರ’; ನೋಂದಣಿಗೆ ಆಹ್ವಾನ
ಬಳ್ಳಾರಿ,ಆ.09(ಕರ್ನಾಟಕ ವಾರ್ತೆ):
ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ಕನ್ನಡ ಜಾಣೆ-ಜಾಣೆಯರ ವೇದಿಕೆ, ಬೆಂಗಳೂರು ಇವರ ಸಹಯೋಗದಲ್ಲಿ 2024ರ ಸೆಪ್ಟೆಂಬರ್ ಕೊನೆಯ ವಾರದಲ್ಲಿ ಹಾಸನ ಜಿಲ್ಲೆಯಲ್ಲಿ ರಾಜ್ಯಮಟ್ಟದ ಮೂರು ದಿನಗಳ ‘ಪಿ.ಲಂಕೇಶ್ ಕೃತಿಗಳ ಅಧ್ಯಯನ ಶಿಬಿರ’ವನ್ನು ಆಯೋಜಿಸಲು ಉದ್ದೇಶಿಸಲಾಗಿದ್ದು, ಅಭ್ಯರ್ಥಿಗಳು ಭಾಗವಹಿಸಲು ನೋಂದಣಿಗೆ ಆಹ್ವಾನಿಸಲಾಗಿದೆ.
ಆಸಕ್ತಿಯಿರುವ 20 ರಿಂದ 40 ವರ್ಷದೊಳಗಿನವರು ರಾಜ್ಯದ ಎಲ್ಲಾ ಭಾಗದ ಅಭ್ಯರ್ಥಿಗಳು ನೋಂದಾಯಿಸಿಕೊಳ್ಳಬಹುದು.
ನೋಂದಾಯಿಸಿಕೊಳ್ಳಲು ಆ.17 ಕೊನೆಯ ದಿನವಾಗಿರುತ್ತದೆ. ಅರ್ಜಿ ನಮೂನೆ ಹಾಗೂ ವಿವರಗಳಿಗಾಗಿ ಆನ್‌ಲೈನ್ ವೆಬ್‌ಸೈಟ್ http://karnatakasahithyaacademy.org ಗೆ ಭೇಟಿ ನೀಡಬಹುದು ಎಂದು ಕನ್ನಡ ಸಾಹಿತ್ಯ ಅಕಾಡೆಮಿಯ ರಿಜಿಸ್ಟಾçರ್ ಕರಿಯಪ್ಪ.ಎನ್ ಅವರು ತಿಳಿಸಿದ್ದಾರೆ.
---------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ