ಮಂಗಳವಾರ, ಡಿಸೆಂಬರ್ 10, 2024

ಸಿರುಗುಪ್ಪ: ಡಿ.12 ರಂದು ವಿದ್ಯುತ್ ವ್ಯತ್ಯಯ

ಬಳ್ಳಾರಿ,ಡಿ.10(ಕರ್ನಾಟಕ ವಾರ್ತೆ): ಸಿರುಗುಪ್ಪ ಜೆಸ್ಕಾಂ ವ್ಯಾಪ್ತಿಯಲ್ಲಿ ತ್ರೆöÊಮಾಸಿಕ ನಿರ್ವಹಣೆ ಕಾಮಗಾರಿ ಕೈಗೊಳ್ಳುತ್ತಿರುವುದರಿಂದ ಡಿ.12 ರಂದು ಬೆಳಿಗ್ಗೆ 09 ಗಂಟೆಯಿAದ ಸಂಜೆ 06 ಗಂಟೆಯವರೆಗೆ ಮಣ್ಣೂರು ಸೂಗೂರು, ನಿಟ್ಟೂರು, ನಡವಿ, ಕರೂರು, ದರೂರು, ಉತ್ತನೂರು, ತಾಳೂರು ಮತ್ತು ಉಳೂರು ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಹಾಗೂ ತೆಕ್ಕಲಕೋಟೆ ನಗರದಲ್ಲಿ ವಿದ್ಯುತ್ ಸರಬರಾಜಿಲ್ಲಿ ವ್ಯತ್ಯಯವಾಗಲಿದೆ. ತ್ರೆöÊಮಾಸಿಕ ನಿರ್ವಹಣೆ ಕಾಮಗಾರಿ ಮುಗಿಯುವವರೆಗೂ ಅಥವಾ ಮುಗಿದ ತಕ್ಷಣ ಯಾವುದೇ ಸಂದರ್ಭದಲ್ಲಿ ವಿದ್ಯುತ್ ಸಂಪರ್ಕ ಚಾಲನೆ ಮಾಡುವ ಸಾಧ್ಯತೆ ಇರುವುದರಿಂದ ವಿದ್ಯುತ್ ಗ್ರಾಹಕರು ಮತ್ತು ಸಾರ್ವಜನಿಕರು ವಿದ್ಯುತ್ ಮಾರ್ಗಗಳ ಹತ್ತಿರ ಯಾವುದೇ ತರಹದ ಕೆಲಸಗಳನ್ನು ಕೈಗೊಳ್ಳಬಾರದು ಎಂದು ಸಿರುಗುಪ್ಪ ಜೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ------------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ