ಸೋಮವಾರ, ಡಿಸೆಂಬರ್ 9, 2024

ಡಿ.17 ರಂದು ಅಕ್ಕಿ, ಗೋಧಿ ಬಹಿರಂಗ ಹರಾಜು

ಬಳ್ಳಾರಿ,ಡಿ.09(ಕರ್ನಾಟಕ ವಾರ್ತೆ): ಆಹಾರ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿಗಳೊAದಿಗೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಜಪ್ತಿ ಮಾಡಲಾದ 4128.44 ಕ್ವಿಂಟಾಲ್ ಅಕ್ಕಿ ಮತ್ತು 63.20 ಕ್ವಿಂಟಾಲ್ ಗೋಧಿಯನ್ನು ಡಿ.17ರಂದು ಬೆಳಿಗ್ಗೆ 11 ಗಂಟೆಗೆ ನಗರದ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ, ಸಗಟು ಗೋದಾಮು ಇಲ್ಲಿ ಬಹಿರಂಗ ಹರಾಜು ಮಾಡಲಾಗುತ್ತದೆ. ಆಸಕ್ತಿಯುಳ್ಳ ಬಿಡ್ಡುದಾರರು ಷರತ್ತುಗಳೊಂದಿಗೆ ಪಾಲ್ಗೊಳ್ಳಬಹುದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ. *ಷರತ್ತುಗಳು:* ಪ್ರತಿಯೊಬ್ಬ ಬಿಡ್ಡುದಾರರು ರೂ.200.000/- ಮುಂಗಡ ಭದ್ರತಾ ಠೇವಣಿ ಮೊತ್ತವನ್ನು ಸಹಾಯಕ ನಿರ್ದೇಶಕರು, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಅನೌಪಚಾರಿಕ ಪಡಿತರ ಪ್ರದೇಶ, ಬಳ್ಳಾರಿ ಇವರ ಹೆಸರಲ್ಲಿ ಡಿಡಿಯನ್ನು ಡಿ.16 ರಂದು ಸಂಜೆ 05.30 ರೊಳಗೆ ಪಾವತಿಸಿ, ಹರಾಜಿನಲ್ಲಿ ಭಾಗವಹಿಸಬೇಕು. ಈ ಹರಾಜಿನಲ್ಲಿ ಸರ್ಕಾರ ಖರೀದಿ ಮಾಡುವ ಓ.ಎಂ.ಎಸ್.ಎಸ್.(ಡಿ) ದರ ಅಕ್ಕಿ ಕ್ವಿಂಟಾಲ್ ಒಂದಕ್ಕೆ ರೂ,2300.00/-ನ್ನು ನಿಗಧಿಪಡಿಸಲಾಗಿದೆ. ಈ ಮೊತ್ತಕ್ಕಿಂತ ಕಡಿಮೆ ಮೊತ್ತ ಕೂಗಿದಲ್ಲಿ ಹಾಗೂ ಹರಾಜು ಸಮಯದಲ್ಲಿ ಬಿಡ್ಡುದಾರರ ಸಂಖ್ಯೆ ಕಡಿಮೆ ಇದ್ದಲ್ಲಿ ಹರಾಜು ಮಾಡುವ ಅಥವಾ ಹರಾಜು ಮಾಡುವ ಪ್ರಕ್ರಿಯೆಯನ್ನು ಮುಂದೂಡುವ ಅಧಿಕಾರ ಹೊಂದಿರುತ್ತದೆ. ಸವಾಲುದಾರರು ಹರಾಜಿನಲ್ಲಿ ಗೊತ್ತುಪಡಿಸಿದ ದಿನಾಂಕದAದು ಅರ್ಧಗಂಟೆ ಮುಂಚಿತವಾಗಿ ಭಾಗವಹಿಸಬೇಕು. ಅಗತ್ಯ ವಸ್ತುಗಳು ಸಗಟು/ಚಿಲ್ಲರೆ ವ್ಯಾಪಾರಸ್ಥರು ಮತ್ತು ಕಮಿಷನ್ ಏಜೆಂಟರು ಹಾಗೂ ಅಕ್ಕಿ ಗಿರಣಿ ಮಾಲಿಕರು ಹಾಗೂ ದೊಡ್ಡ ಪ್ರಮಾಣದ ಬಳಿಕೆದಾರರ ಸಂಸ್ಥೆಗಳು ಹರಾಜಿನಲ್ಲಿ ಭಾಗವಹಿಸಬಹುದು. ಪಧಾರ್ಥಗಳನ್ನು ಎಲ್ಲಿದಿಯೋ ಅಲ್ಲೆ ಹಾಗೂ ಹೇಗಿವೆಯೋ ಹಾಗೇ ಷರತ್ತಿನಡಿ ಹರಾಜು ಮಾಡಲಾಗುತ್ತಿರುವದರಿಂದ ಹರಾಜಿನಲ್ಲಿ ಭಾಗವಹಿಸುವವರು ಅದಕ್ಕೂ ಮುನ್ನ ಡಿ.16ರಂದು 10 ಗಂಟೆಗೆ ಕೆಎಫ್‌ಸಿಎಸ್‌ಸಿ ಸಗಟು ಕೇಂದ್ರಕ್ಕೆ ಭೇಟಿ ನೀಡಿ ಅಕ್ಕಿಯ ಪರಿಶೀಲನೆ ಮಾಡಿಕೊಳ್ಳಬಹುದು. ಹರಾಜಿನಲ್ಲಿ ಭಾಗವಹಿಸುವವರು ತಮ್ಮ ವ್ಯಾಪಾರ ನೊಂದಣಿಪತ್ರ/ಸAಸ್ಥೆಯ ನೋಂದಾವಣೆ ಪತ್ರ ಮತ್ತು ಆಧಾರ/ಜಿಎಸ್‌ಟಿ ದಾಖಲೆಗಳನ್ನು ನೋಂದಾವಣಿ ಸಮಯದಲ್ಲಿ ಹಾಜರುಪಡಿಸತಕ್ಕದ್ದು ಹಾಗೂ ಇಲಾಖೆಯ ಕಾನೂನಿಗೆ ಒಳಪಟ್ಟಿರಬೇಕು. ಬಿಡ್‌ನಲ್ಲಿ ನಮೂದು ಆಗುವ ದರಗಳನ್ನು ಜಿಲ್ಲಾಧಿಕಾರಿಗಳ ಬಳ್ಳಾರಿ ಇವರು ಅನುಮೋದಿಸಿದ ನಂತರ ಬಿಡ್ ಒಟ್ಟು ಮೌಲ್ಯವನ್ನು ಸರ್ಕಾರದ ಲೆಕ್ಕ ಶಿರ್ಷಿಕೆಗೆ ನಿಗಧಿತ ಅವಧಿ ಒಳಗಾಗಿ ಜಮಾ ಮಾಡಿ ಚಲಾನನ್ನು ಹಾಜರು ಪಡಿಸಿದ ನಂತರ ಹರಾಜಾದ ಅಕ್ಕಿಯನ್ನು ಎತ್ತುವಳಿಗೆ ಅವಕಾಶ ನೀಡಲಾಗುವುದು. ಅಂತಿಮ ಹರಾಜನ್ನು ಒಪ್ಪಿಕೊಳ್ಳುವುದು ಅಥವಾ ತಿರಸ್ಕರಿಸುವ ಹಕ್ಕನ್ನು ಅಧಿಕಾರಿಗಳು ಹೊಂದಿರುತ್ತಾರೆ. ಬಹಿರಂಗ ಹರಾಜು ಆದ ಅಕ್ಕಿಯನ್ನು ತಮ್ಮ ಸ್ವಂತ ಖರ್ಚಿನಲ್ಲಿ ಆದೇಶ ನೀಡಿದ ಮೂರು ದಿನಗಳಲ್ಲಿ ಕೆಎಫ್‌ಸಿಎಸ್‌ಸಿ, ಬಳ್ಳಾರಿ ಇವರರಿಂದ ಎತ್ತುವಳಿ ಮಾಡಬೇಕು. *ವಿಶೇಷ ಸೂಚನೆ:* ಅಗತ್ಯ ವಸ್ತುಗಳ ಕಾಯ್ದೆ 1955ರ ಕಲಂ 3, 6(ಎ) ಮತ್ತು 7 ರಡಿಯಲ್ಲಿ ಯಾವುದೇ ಬಿಡ್ಡುದಾರರ ಹೆಸರಿನಲ್ಲಿ ಪೊಲೀಸ್ ಪ್ರಕರಣ ದಾಖಲಾಗಿರಬಾರದು. ಒಂದು ವೇಳೆ ಪೊಲೀಸ್ ಪ್ರಕರಣ ದಾಖಲಾಗಿದ್ದಲ್ಲಿ ಅಂತಹ ಬಿಡ್ಡುದಾರರು (ವ್ಯಕ್ತಿ)/ಸಂಸ್ಥೆ ಹಾಗೂ ಸಾರ್ವಜನಿಕ ವಿತರಣ ವ್ಯವಸ್ಥೆ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವವರು ಹರಾಜಿನಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ. ಒಂದು ವೇಳೆ ಅಂತಹ ವ್ಯಕ್ತಿಗಳು/ಟ್ರೇಡ್‌ಗಳ ಭಾಗವಹಿಸಿದ್ದು ಕಂಡು ಬಂದಲ್ಲಿ ಅಂತವರ ಇಎಂಡಿ ಮೊತ್ತವನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಅನೌಪಚಾರಿಕ ಪಡಿತರ ಪ್ರದೇಶ, ಬಳ್ಳಾರಿ ಇವರನ್ನು ಸಂರ್ಪಕಿಸಬಹುದು. ---------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ