ಮಂಗಳವಾರ, ಡಿಸೆಂಬರ್ 10, 2024

ಅನಾಮಧೇಯ ಮೃತ ದೇಹ ಪತ್ತೆ: ವಾರಸುದಾರರ ಪತ್ತೆಗೆ ಮನವಿ

ಬಳ್ಳಾರಿ,ಡಿ.10(ಕರ್ನಾಟಕ ವಾರ್ತೆ): ನಗರದ ಕೆಎಸ್‌ಆರ್‌ಟಿಸಿ ನಿಲ್ದಾಣದಲ್ಲಿ ಅಸ್ವಸ್ಥ ಅನಾಮಧೇಯ ವ್ಯಕ್ತಿಯನ್ನು ಚಿಕಿತ್ಸೆಗಾಗಿ ವಿಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕರಿಯಾಗದೇ ಡಿ.09 ರಂದು ಮೃತಪಟ್ಟಿದ್ದು, ಈ ಕುರಿತು ಬ್ರೂಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತನ ವಾರಸುದಾರರ ಬಗ್ಗೆ ಪತ್ತೆಗೆ ಸಹಕರಿಸಬೇಕೆಂದು ಠಾಣಾಧಿಕಾರಿ ಮನವಿ ಮಾಡಿದ್ಧಾರೆ. ಚಹರೆ ಗುರುತು: ಅಂದಾಜು ಎತ್ತರ 5.7 ಅಡಿ, ಕೋಲು ಮುಖ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ತಲೆಯಲ್ಲಿ ಸುಮಾರು ಮೂರು ಇಂಚು ಕಪ್ಪು ಕೂದಲು, ಮೀಸೆ ಮತ್ತು ಗಡ್ಡ ಇರುತ್ತದೆ. ಬಲಗೈಯಲ್ಲಿ ಸುಜಾತ, ಐಶ್ವರ್ಯ, ಎಂದು ಕನ್ನಡದಲ್ಲಿ ಅಚ್ಚೆ ಗುರುತು ಹಾಕಿಸಿಕೊಂಡಿರುತ್ತಾನೆ. ಮೃತನ ಮೈಮೇಲೆ ಕಪ್ಪು ಬಣ್ಣದ ಅಂಗಿ, ಕ್ರೀಮ್ ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ. ಮೃತನ ವಾರಸುದಾರರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಬಳ್ಳಾರಿ ಪೊಲೀಸ್ ಕಂಟ್ರೋಲ್ ರೂಂ.08392-258100, ಬ್ರೂಸ್‌ಪೇಟೆ ಪೊಲೀಸ್ ಠಾಣೆ ದೂ.08392-272022, ಪಿಎಸ್‌ಐ ಮೊ.9480803081, ಪಿಐ ಮೊ.9480803045 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ----------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ