ಗುರುವಾರ, ಜನವರಿ 2, 2025

ಜ.03 ರಂದು ಒಂದು ದಿನದ ವಿಶೇಷ ಅತಿಥಿ ಉಪನ್ಯಾಸ ಕಾರ್ಯಕ್ರಮ

ಬಳ್ಳಾರಿ,ಜ.02(ಕರ್ನಾಟಕ ವಾರ್ತೆ): ನಗರದ ತಾರಾನಾಥ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಜ.03 ರಂದು ಮಧ್ಯಾಹ್ನ 12 ಗಂಟೆಗೆ ವಿದ್ಯಾಲಯದ ಮಂಥನ ಹಾಲ್‌ನಲ್ಲಿ ‘ಲಂಡನ್ ಮತ್ತು ಯೂರೋಪನಲ್ಲಿ ಆಯುರ್ವೇದ” ಎಂಬ ವೈದ್ಯಕೀಯ ಶಿಕ್ಷಣದ ಕುರಿತು ಒಂದು ದಿನದ ವಿಶೇಷ ಅತಿಥಿ ಉಪನ್ಯಾಸ ಸಿಎಂಇ ಕಾರ್ಯಕ್ರಮ ಆಯೋಜಿಸಲಾಗಿದೆ. ತಾರಾನಾಥ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಸಂಘ ಮತ್ತು ತಾರಾನಾಥ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಇವರ ಸಹಯೋಗದೊಂದಿಗೆ ಆಯೋಜಿಸಲಾಗಿದೆ. ಯುಕೆ, ಯುರೋಪ್ ಆಯುರ್ವೇದ ಅಕಾಡೆಮಿಯ ಅಧ್ಯಕ್ಷರಾದ ಡಾ. ವೆಂಕಟ್ ಜೋಷಿ ಅವರು ಅತಿಥಿ ಉಪನ್ಯಾಸ ನೀಡುವರು. ತಾರಾನಾಥ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಡಾ.ಮರಿದೇವ ಶರ್ಮ, ನಿವೃತ್ತ ಜಂಟಿ ನಿರ್ದೇಶಕರಾದ ಡಾ.ಎನ್.ಎ.ಮೂರ್ತಿ, ನಿವೃತ್ತ ಪ್ರಾಚಾರ್ಯರಾದ ಡಾ.ಜಿ.ಆರ್.ವಸ್ತçದ್ ಸೇರಿದಂತೆ ಸುಮಾರು 90 ಜನ ಸ್ನಾತಕೋತ್ತರ ವಿದ್ಯಾರ್ಥಿಗಳು, ಬೋಧಕ ಸಿಬ್ಬಂದಿಗಳು ಭಾಗವಹಿಸುವರು. -----------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ