ಬಳ್ಳಾರಿ,ಫೆ.01(ಕರ್ನಾಟಕ ವಾರ್ತೆ):
ನಗರದ ಶ್ರೀ ಕೋಟೆ ಮಲ್ಲೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವವು ಮತ್ತು ಶಿವರಾತ್ರಿ ಉತ್ಸವವು ಫೆ.06 ರಿಂದ 26 ರ ವರೆಗೆ ಜರುಗಲಿದ್ದು, ಇದರ ಅಂಗವಾಗಿ ಜ.31 ರಂದು ಬೆಳಿಗ್ಗೆ 11 ಗಂಟೆಗೆ ಪೂರ್ವಭಾವಿ ಸಿದ್ಧತೆ ಸಭೆ ನಿಗದಿಪಡಿಸಲಾಗಿತ್ತು, ಕಾರಣಾಂತರಗಳಿAದ ಸಭೆಯನ್ನು ಫೆ.02 ರಂದು ಬೆಳಿಗ್ಗೆ 11 ಗಂಟೆಗೆ ದೇವಸ್ಥಾನದ ಆವರಣದಲ್ಲಿ ನಿಗದಿಪಡಿಸಲಾಗಿದೆ ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗಳು ತಿಳಿಸಿದ್ದಾರೆ.
----------
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ