ಸೋಮವಾರ, ಫೆಬ್ರವರಿ 10, 2025
ಅನಾಮಧೇಯ ಮೃತ ವ್ಯಕ್ತಿ ವಾರಸುದಾರರ ಪತ್ತೆಗೆ ಮನವಿ
ಬಳ್ಳಾರಿ,ಫೆ.10(ಕರ್ನಾಟಕ ವಾರ್ತೆ):
ನಗರದ ರೈಲ್ವೆ ನಿಲ್ದಾಣ ರಸ್ತೆಯ ನಿಲ್ದಾಣದ ಮುಂಭಾಗ ಫೆ.07 ರಂದು ಸುಮಾರು 40 ರಿಂದ 45 ವರ್ಷದ ಅನಾಮಧೇಯ ವ್ಯಕ್ತಿಯು ರಸ್ತೆಯಲ್ಲಿ ಹೋಗುತ್ತಿರುವಾಗ ಖಾಸಗಿ ಮಿನಿ ಬಸ್ ನ ಕೆಳಗೆ ಸಿಲುಕಿಕೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮೃತನ ದೇಹವನ್ನು ಬಿಮ್ಸ್ ನಲ್ಲಿ ಶವಗಾರ ಕೋಣೆಯಲ್ಲಿರಿಸಲಾಗಿದೆ. ಮೃತನ ವಾರಸುದಾರರು ತಿಳಿದಿರುವುದಿಲ್ಲ. ಪತ್ತೆಗೆ ಸಹಕರಿಸಬೇಕು ಎಂದು ಸಂಚಾರಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮನವಿ ಮಾಡಿದ್ದಾರೆ.
ಚಹರೆ: 5.1 ಅಡಿ ಎತ್ತರ, ತೆಳ್ಳನೇಯ ಸಾಧಾರಣ ಮೈಕಟ್ಟು, ದುಂಡನೇಯ ಮುಖ, ಕಪ್ಪು ಮೈಬಣ್ಣ ಹೊಂದಿರುತ್ತಾನೆ. ತಲೆಯಲ್ಲಿ ಕಪ್ಪು ಕೂದಲು, ಎದೆಯ ಮೇಲೆ ಬಿಳಿ ಕೂದಲು, ಗಡ್ಡ ಇರುವುದಿಲ್ಲ. ಕಾಲಿನ ಪಾದದ 02 ತೋರು ಬೆರಳುಗಳಿಗೆ ಉಂಗುರ ಧರಿಸಿರುತ್ತಾರೆ.
ಲೈಟ್ ಪಿಂಕ್ ಬಣ್ಣದ ತುಂಬು ತೋಳಿನ ಲೆನಿನ್ ಅಂಗಿ, ಗ್ರೇ ಬಣ್ಣದ ಪ್ಯಾಂಟ್ ಹಾಗೂ ಕಂದು ಬಣ್ಣದ ಚಡ್ಡಿ ಧರಿಸಿರುತ್ತಾನೆ.
ಮೃತನ ವಾರಸುದಾರರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಸಂಚಾರ ಪೊಲೀಸ್ ಠಾಣೆಯ ದೂ.08392-275722, ಪಿಐ ಮೊ.9480803048 ಮತ್ತು ಬಳ್ಳಾರಿ ಪೊಲೀಸ್ ಕಂಟ್ರೋಲ್ ರೂಂ ದೂ.08392-258100 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
----------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ