ಸೋಮವಾರ, ಫೆಬ್ರವರಿ 10, 2025

ವ್ಯಕ್ತಿ ಕಾಣೆ: ಪತ್ತೆಗೆ ಮನವಿ

ಬಳ್ಳಾರಿ,ಫೆ.10(ಕರ್ನಾಟಕ ವಾರ್ತೆ): ಸಂಡೂರು ಪಟ್ಟಣದ ಆಶ್ರಯ ಕಾಲೋನಿಯ ಟ್ರಾಕ್ಸ್ ಡ್ರೆöÊವರ್ ಕೆಲಸ ಮಾಡುತ್ತಿದ್ದ ಕಾರ್ತಿಕ್ ಶಿಂಧೆ ಎನ್ನುವ 34 ವರ್ಷದ ವ್ಯಕ್ತಿಯು 2024 ರ ಡಿ.13 ರಂದು ಕಾಣೆಯಾಗಿರುವ ಕುರಿತು ಸಂಡೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕೆಂದು ಎಂದು ಠಾಣಾಧಿಕಾರಿ ಮನವಿ ಮಾಡಿದ್ದಾರೆ. ಕಾಣೆಯಾದ ವ್ಯಕ್ತಿಯ ಚಹರೆ: ಎತ್ತರ 5.6 ಅಡಿ, ಕೋಲು ಮುಖ, ಗೋದಿ ಮೈಬಣ್ಣ, ಸಾಧಾರಣ ಮೈಕಟ್ಟು, ಕಪ್ಪು ತಲೆ ಕೂದಲು, ಬಲಗೈ ಮತ್ತು ಎಡಗೈ ಹೆಬ್ಬೆರಳ ಮೇಲೆ ಚಾರು ಹಾಗೂ ಚರಣ್ ಎಂದು ಹಚ್ಚೆ ಹಾಕಿಸಿಕೊಂಡಿರುತ್ತಾನೆ. ಕಾಣೆಯಾದ ಸಂದರ್ಭದಲ್ಲಿ ಸಿಮೆಂಟ್ ಬಣ್ಣದ ಅರ್ಧ ತೋಳಿನ ಅಂಗಿ ಮತ್ತು ಬ್ಲಾಕ್ ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ. ಕನ್ನಡ, ತೆಲುಗು, ಮರಾಠಿ, ಹಿಂದಿ ಭಾಷೆ ಮಾತಾನಾಡುತ್ತಾನೆ. ವ್ಯಕ್ತಿಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ಸಂಡೂರು ಪೋಲಿಸ್ ಠಾಣೆಯ ದೂ.08395-260248,267252 ಪಿಎಸ್‌ಐ ಮೊ.9916460754, ಪಿಐ ಮೊ.9480803061 ಅಥವಾ ಬಳ್ಳಾರಿ ಪೋಲಿಸ್ ಕಂಟ್ರೋಲ್ ರೂಂ ದೂ.08392-258100 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ---------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ