ಶನಿವಾರ, ಡಿಸೆಂಬರ್ 2, 2023

ಡಿ.04ರಂದು ಬಳ್ಳಾರಿ ಗ್ರಾಮೀಣ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ

ಬಳ್ಳಾರಿ,ಡಿ.02(ಕರ್ನಾಟಕ ವಾರ್ತೆ): ಬಳ್ಳಾರಿ ಗ್ರಾಮೀಣ ಜೆಸ್ಕಾಂ ವ್ಯಾಪ್ತಿಯ 220ಕೆ.ವಿ ಅಲ್ಲೀಪುರ-ಸ್ವೀಕರಣಾ ಕೇಂದ್ರ, 220ಕೆ.ವಿ ಮಾರ್ಗದ ಉಪಕರಣಗಳನ್ನು ಪರೀಕ್ಷಿಸುವ ಕಾಮಗಾರಿ ತುರ್ತಾಗಿ ಕೈಗೊಳ್ಳುತ್ತಿರುವುದರಿಂದ, ಇದರ ವ್ಯಾಪ್ತಿಯಲ್ಲಿ ಬರುವ 110/33/11ಕೆವಿ ಉಪಕೇಂದ್ರಗಳು ಹಾಗೂ ಇದರಿಂದ ಹೊರಹೊಮ್ಮುವ ಎಲ್ಲಾ 33/11ಕೆವಿ ಮಾರ್ಗಗಳಲ್ಲಿ ಡಿ.04ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 02ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಬಳ್ಳಾರಿ ಗ್ರಾಮೀಣ ಜೆಸ್ಕಾಂನ ಸಹಾಯಕ ಇಂಜಿನಿಯರ್ ಮೋಹನ್‍ಬಾಬು ಅವರು ತಿಳಿಸಿದ್ದಾರೆ. ವಿದ್ಯುತ್ ವ್ಯತ್ಯಯವಾಗಲಿರುವ ಪ್ರದೇಶಗಳಿವು: 110/11 ಕೆ.ವಿ ದಕ್ಷಿಣ, ಉತ್ತರ, ಹಲಕುಂದಿ, ಮೀನಹಳ್ಳಿ ಬಿಸಲಹಳ್ಳಿ, ಮೋಕಾ, ಶ್ರೀಧರಗಡ್ಡ ಮತ್ತು ಕುರುಗೊಡು. 33/11 ಕೆ.ವಿ.ಗುಡದೂರು, ಎಮ್ಮಿಗನೂರು, ರೂಪನಗುಡಿ, ಎರ್ರಗುಡಿ. 220/11 ಕೆ.ವಿ. ಅಲ್ಲಿಪುರ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ವಿದ್ಯುತ್ ಗ್ರಾಹಕರು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ಅವರು ತಿಳಿಸಿದ್ದಾರೆ. ------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ