ಶನಿವಾರ, ಡಿಸೆಂಬರ್ 2, 2023
ಅನಧಿಕೃತ ಗೈರು: ಕರ್ತವ್ಯಕ್ಕೆ ಹಾಜರಾಗಲು ಕೊನೆ ಅವಕಾಶ
ಬಳ್ಳಾರಿ,ಡಿ.02(ಕರ್ನಾಟಕ ವಾರ್ತೆ):
ತಾಲ್ಲೂಕಿನ ಸಿಂಧುವಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ಗ್ರೂಪ್ ‘ಡಿ’ ನೌಕರ ರಮೇಶ್ ಎಂಬುವಾತ ಪೂರ್ವಾನುಮತಿ ಪಡೆಯದೇ ಅಥವಾ ಯಾವುದೇ ತರಹದ ರಜೆ ಮಂಜೂರು ಮಾಡಿಸಿಕೊಳ್ಳದೇ 2017ರ ಮಾರ್ಚ್ 02ರಿಂದ ಕರ್ತವ್ಯಕ್ಕೆ ಗೈರು ಹಾಜರಾಗಿದ್ದು, ಮರು ಕೆಲಸಕ್ಕೆ ಹಾಜರಾಗಲು ಈಗಾಗಲೇ ಮೂರು ಬಾರಿ ಮರುಕರೆ ನೋಟಿಸ್‍ಗಳನ್ನು ಜಾರಿ ಮಾಡಿದ್ದು ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಅಧಿಕಾರಿಗಳೂ ಕರ್ತವ್ಯಕ್ಕೆ ಹಾಜರಾಗಲು ಅಂತಿಮ ನೋಟೀಸ್ ನೀಡಿದ್ದರೂ ಈವರೆಗೂ ಕೆಲಸಕ್ಕೆ ಹಾಜರಾಗಿರುವುದಿಲ್ಲ. ಈ ವರ್ತನೆಯು ಕರ್ತವ್ಯದ ಮೇಲಿನ ನಿರಾಸಕ್ತಿ ಹೊಂದಿರುವುದು ಕಂಡುಬರುತ್ತದೆ ಮತ್ತು ಕೆಸಿಎಸ್ (ನಡತೆ) ನಿಯಮಾವಳಿಯ ಸ್ಪಷ್ಟ ಉಲ್ಲಂಘನೆಯಾಗಿರುತ್ತದೆ. ದೀರ್ಘಾವಧಿಯ ಗೈರು ಹಾಜರಿಯಿಂದ ಕಚೇರಿ ಕಾರ್ಯಗಳಲ್ಲಿ ಅಡಚಣೆ ಉಂಟಾಗಿದೆ.
ಆದ್ದರಿಂದ ಪ್ರಕಟಣೆ ಹೊರಡಿಸಿದ ದಿನಾಂಕದಿಂದ 15 ದಿನದೊಳಗೆ ಕೆಲಸಕ್ಕೆ ಹಾಜರಾಗಲು ಅಂತಿಮ ಎಚ್ಚರಿಕೆ ನೀಡಲಾಗಿದ್ದು, ತಪ್ಪಿದಲ್ಲಿ ನಿಯಮಾನುಸಾರ ಏಕಪಕ್ಷೀಯವಾಗಿ ತೀರ್ಮಾನ ಕೈಗೊಂಡು ಸೇವೆಯಿಂದ ತೆಗೆದುಹಾಕಲು ಮೇಲಾಧಿಕಾರಿಗಳಿಗೆ ಶಿಫಾರಸ್ಸು ಮಾಡಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ವೈ.ರಮೇಶ್ ಬಾಬು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ