ಶನಿವಾರ, ಡಿಸೆಂಬರ್ 2, 2023

ವಿಎಸ್‍ಕೆ ವಿವಿಯ ಆದಿತ್ಯಗೆ ಅಂತರ ವಿಶ್ವವಿದ್ಯಾಲಯ ಕುಸ್ತಿ ಪಂದ್ಯಾವಳಿಯಲ್ಲಿ ಕಂಚಿನ ಪದಕ

ಬಳ್ಳಾರಿ,ಡಿ.02(ಕರ್ನಾಟಕ ವಾರ್ತೆ): ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಸ್ತಿ ತಂಡದ ಆದಿತ್ಯ (ವೀರಶೈವ ಮಹಾವಿದ್ಯಾಲಯ) ಚಂಡಿಗಡ ವಿಶ್ವವಿದ್ಯಾಲಯದಲ್ಲಿ ಜರುಗಿದ ದಕ್ಷಿಣ ಪಶ್ಚಿಮ ವಲಯ ಅಂತರ ವಿಶ್ವವಿದ್ಯಾಲಯ ಪುರುಷ ಮತ್ತು ಮಹಿಳಾ ಕುಸ್ತಿ (ಗ್ರೀಕೊ ರೋಮನ್ 87 ಕೆಜಿ) ಪಂದ್ಯಾವಳಿಯಲ್ಲಿ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿ ಕಂಚಿನ ಪದಕವನ್ನು ಪಡೆಯುವುದರ ಮೂಲಕ ವಿಶ್ವವಿದ್ಯಾಲಯದ ಕೀರ್ತಿಯನ್ನು ಹೆಚ್ಚಿಸಿರುತ್ತಾನೆ ಅದರ ಜೊತೆ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಕುಸ್ತಿ ಪಂದ್ಯಾವಳಿಗೆ ಆಯ್ಕೆಯಾಗಿದ್ದಾನೆ. ಕ್ರೀಡಾಪಟುವಿಗೆ ಹಾಗೂ ತಂಡದ ವ್ಯವಸ್ಥಾಪಕಿ ಡಾ.ಕವಿತಾ ಎಸ್.ಎಮ್ ಮತ್ತು ತರಬೇತುದಾರ ಮಲ್ಲಿಕಾರ್ಜುನ.ವೈ.ಡಿ ಅವರಿಗೆ ವಿಶ್ವವಿದ್ಯಾಲಯದ ಆಡಳಿತ ವರ್ಗದವರು, ಕುಲಪತಿಗಳು, ಕುಲಸಚಿವರು, ಕುಲಸಚಿವರು (ಮೌಲ್ಯಮಾಪನ) ಹಣಕಾಸು ಅಧಿಕಾರಿ, ಸಿಬ್ಬಂದಿ ವರ್ಗದವರು ಹಾಗೂ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗ ಮೆಚ್ಚುಗೆ ವ್ಯಕ್ತಪಡಿಸಿ ಶುಭಕೋರಿದ್ದಾರೆ ಎಂದು ವಿವಿ ಪ್ರಕಟಣೆ ತಿಳಿಸಿದೆ. -------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ