ಗುರುವಾರ, ಡಿಸೆಂಬರ್ 7, 2023

ವ್ಯಕ್ತಿ ಕಾಣೆ; ಪತ್ತೆಗೆ ಮನವಿ

ಬಳ್ಳಾರಿ,ಡಿ.07(ಕರ್ನಾಟಕ ವಾರ್ತೆ): ಚಿಕ್ಕಮಗಳೂರು ನಿವಾಸಿ ಟಿ.ಕೆ.ರಾಮದಾಸಪ್ಪ ಎನ್ನುವ 93 ವರ್ಷದ ವ್ಯಕ್ತಿ ಬಳ್ಳಾರಿಗೆ ತನ್ನ ತಂಗಿಯನ್ನು ನೋಡಲು ನ.28ರಂದು ಬಂದಿದ್ದು, ಮರಳಿ ಮನೆಗೆ ಬಂದಿರುವುದಿಲ್ಲ ಎಂದು ಕಾಣೆಯಾದ ವ್ಯಕ್ತಿಯ ಮಗನು ಬ್ರೂಸ್‍ಪೇಟೆ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪತ್ತೆಗೆ ಸಹಕರಿಸಬೇಕು ಎಂದು ಇನ್ಸ್‍ಪೆಕ್ಟರ್ ಅವರು ತಿಳಿಸಿದ್ದಾರೆ. ಚಹರೆ: ಎತ್ತರ 5.1ಅಡಿ, ಸಾಧಾರಣ ಮೈಕಟ್ಟು, ಅಗಲಮುಖ, ಎಣ್ಣೆಗೆಂಪು ಮೈಬಣ್ಣ, ಬಿಳಿ ತಲೆಕೂದಲು, ಎಡಗಣ್ಣಿಗ ಕೆಳಭಾಗದಲ್ಲಿ ಕಪ್ಪು ಬಣ್ಣದ ಮಚ್ಚೆ ಹೊಂದಿದ್ದು, ಕ್ರೀಂ ಬಣ್ಣದ ತುಂಬುತೋಳಿನ ಚೆಕ್ ಅಂಗಿ ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ. ಕನ್ನಡ, ತೆಲುಗು, ಹಿಂದಿ ಮತ್ತು ಇಂಗ್ಲಿಷ್ ಮಾತನಾಡುತ್ತಾನೆ. ಕಾಣೆಯಾದ ವ್ಯಕ್ತಿಯ ಬಗ್ಗೆ ಸುಳಿವು ಸಿಕ್ಕಲಿ ಬ್ರೂಸ್‍ಪೇಟೆ ಪೆÇಲೀಸ್ ಠಾಣೆಯ ದೂ.08392-272022. ಪಿ.ಐ ಮೊ.9480803045, ಮೊ.9480803081 ಹಾಗೂ ಬಳ್ಳಾರಿ ಕಂಟ್ರೋಲ್ ರೂಂ ದೂ.08392-258100 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ