ಸೋಮವಾರ, ಜುಲೈ 1, 2024

ಜು.02 ರಂದು ಎಮ್ಮಿಗನೂರು ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ

ಬಳ್ಳಾರಿ,ಜು.01(ಕರ್ನಾಟಕ ವಾರ್ತೆ): ಗ್ರಾಮೀಣ ಜೆಸ್ಕಾಂ ಎಮ್ಮಿಗನೂರಿನ 110/11 ಕೆ.ವಿ ಉಪ-ಕೇಂದ್ರದಲ್ಲಿ ದುರಸ್ತಿ ಕಾರ್ಯವನ್ನು ತುರ್ತಾಗಿ ಕೈಗೊಳ್ಳುತ್ತಿರುವುದರಿಂದ ಜುಲೈ 02 ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 02 ಗಂಟೆಯವರೆಗೆ ಕೆಳಗಿನ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯವಾಗಲಿದೆ ಎಂದು ಗ್ರಾಮೀಣ ಜೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮೋಹನಬಾಬು ಅವರು ತಿಳಿಸಿದ್ದಾರೆ. *ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು:* ಎಫ್-01 ಫೀಡರ್‍ನ ಗುತ್ತಿಗನೂರ ಐಪಿ ಮಾರ್ಗದ ಗುತ್ತಿಗನೂರು, ಓರ್ವಾಯಿ, ಎಮ್ಮಿಗನೂರು ಗ್ರಾಮ, ಕೃಷಿ ಪ್ರದೇಶಗಳು. ಎಫ್-02 ಫೀಡರ್‍ನ ಸೋಮಲಾಪುರ ಐಪಿ ಮಾರ್ಗದ ಎಮ್ಮಿಗನೂರು, ಸೋಮಲಾಪುರ, ತಿಮ್ಮನಕೆರೆ, ತಾತರಾಜ್ ಕ್ಯಾಂಪ್, ಬ್ರಹ್ಮಿಣಿ ಕ್ಯಾಂಪ್ ಕೃಷಿ ಪ್ರದೇಶಗಳು. ಎಫ್-03 ಓರ್ವಾಯಿ ಎನ್‍ಜೆವೈ ಮಾರ್ಗದ ಓರ್ವಾಯಿ, ಗುತ್ತಿಗನೂರು, ಪಟ್ಟಣಸೆರಗು ಗ್ರಾಮಗಳು. ಎಫ್-06 ಫೀಡರ್‍ನ ಎಮ್ಮಿಗನೂರು ನಗರದ ಮಾರ್ಗದ ಎಮ್ಮಿಗನೂರು, ತಿಮ್ಮನಕೆರೆ, ಓರ್ವಾಯಿ, ಗುತ್ತಿಗನೂರು, ಪಟ್ಟಣಸೆರಗು, ರಾಮಚಂದ್ರಪುರ ಕ್ಯಾಂಪ್. ಎಫ್-04 ಫೀಡರ್‍ನ ಮುದ್ದಾಪುರ ಐಪಿ ಮಾರ್ಗ ಎಮ್ಮಿಗನೂರು, ಬಾಳಾಪುರ, ಮುದ್ದಾಪುರ, ಕೃಷಿ ಪ್ರದೇಶಗಳು. ಎಫ್-11 ಫೀಡರ್‍ನ ನೆಲ್ಲುಡಿ ಎನ್‍ಜೆವೈ ಮಾರ್ಗದ ಹೊಸ ನೆಲ್ಲುಡಿ, ಹಳೆ ನೆಲ್ಲುಡಿ, ಬಾಳಾಪುರ, ಮೆಹಬೂಬ್ ನಗರ, ನೆಲ್ಲುಡಿ ಕೊಟ್ಟಾಲ್, ಶಾಂತಿನಗರ, ಶಂಕರ್‍ಸಿಂಗ್ ಕ್ಯಾಂಪ್, ಸುಬ್ಬಾರಾವ್ ಕ್ಯಾಂಪ್. ಎಫ್-10 ಫೀಡರ್‍ನ ಶಾಂತಿನಗರ ಐಪಿ ಮಾರ್ಗದ ಹೊಸ ನೆಲ್ಲುಡಿ, ಹಳೆ ನೆಲ್ಲುಡಿ, ಮೆಹಬೂಬ್ ನಗರ, ಕೊಟ್ಟಾಲ್, ಶಾಂತಿನಗರ, ಶಂಕರ್‍ಸಿಂಗ್ ಕ್ಯಾಂಪ್, ಸುಬ್ಬರಾವ್ ಕ್ಯಾಂಪ್ ಮತ್ತು ಕೃಷಿ ಪ್ರದೇಶಗಳು ಸೇರಿದಂತೆ ಮುಂತಾದ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ *ಸೂಚನೆ:* ಎಲ್ಲಾ ಕೃಷಿ ಪ್ರದೇಶದ ಫೀಡರ್‍ಗಳಿಗೆ ಬೆಳಿಗ್ಗೆ 04 ಗಂಟೆಯಿಂದ 10 ಗಂಟೆಯವರೆಗೆ ವಿದ್ಯುತ್ ಸರಬರಾಜು ಮಾಡಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ---------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ