ಮಂಗಳವಾರ, ಜುಲೈ 2, 2024

ಸಾಂಪ್ರದಾಯಿಕ ಚಿಂತನೆಗಳ ಜೊತೆಗೆ ಸಮಾಜದ ವೈಚಾರಿಕ ಅಂಶಗಳು ಮುನ್ನೆಲೆಗೆ: ಪ್ರೊ.ಎಲ್.ಎನ್.ಮುಕುಂದರಾಜ್

ಬಳ್ಳಾರಿ,ಜು.02(ಕರ್ನಾಟಕ ವಾರ್ತೆ): 19 ಮತ್ತು 20ನೇ ಶತಮಾನವನ್ನು ಸಂಕ್ರಮಣ ಕಾಲವೆಂದು ಹೇಳಲಾಗುತ್ತಿದ್ದು, ಅಂದಿನ ಸಮಯದಲ್ಲಿ ಸಾಂಸ್ಕøತಿಕ ಮತ್ತು ಸಾಂಪ್ರದಾಯಿಕ ಚಿಂತನೆಗಳ ಜೊತೆಗೆ ವೈಚಾರಿಕ ಸಮಾಜದ ಅಂಶಗಳು ಮುನ್ನೆಲೆಗೆ ಬಂದವು ಎಂದು ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪೆÇ್ರ.ಎಲ್.ಎನ್.ಮುಕುಂದರಾಜ್ ಅವರು ಹೇಳಿದರು. ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಇಂಗ್ಲೀμï ಹಾಗೂ ಪ್ರದರ್ಶನ ಕಲೆಯ ನಾಟಕ ವಿಭಾಗದ ಸಹಯೋಗದಲ್ಲಿ ಮಂಗಳವಾರ ಏರ್ಪಡಿಸಿದ್ದ ಕನ್ನಡ ಭಾμÉಯ ಏಳುಬೀಳುಗಳ ಸವಾಲುಗಳು ಮತ್ತು ಸಾಹಿತ್ಯದ ಸಾಂದರ್ಭಿಕ ಸವಾಲುಗಳು ಎಂಬ ವಿಷಯಗಳ ಮೇಲೆ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕನ್ನಡ ಸಾಹಿತ್ಯ, ಭಾμÉ, ಪ್ರಾಂತ್ಯವಾರು ಪ್ರಾದೇಶಿಕ ವೈಶಿಷ್ಟ್ಯಗಳಿಂದ ತನ್ನದೇ ಆದ ಗಟ್ಟಿತನ ಒಳಗೊಂಡಿರುವುದರಿಂದ ಇಂದಿಗೂ ಕನ್ನಡ ಭಾμÉ ನಿರಂತರವಾಗಿ ಮುಂದುವರೆಯುತ್ತಿದೆ. ಗಡಿಭಾಗದ ಭಾμÉಗಳಲ್ಲಿ ದ್ವಿ ಭಾμÉ ಪದ್ಧತಿಯನ್ನು ಅಳವಡಿಸಿಕೊಂಡು ಜನಸಾಮಾನ್ಯರ ದಿನನಿತ್ಯದ ಬದುಕಿಗೆ ಆಧಾರವಾಗಿರುವ ಭಾμÉ ತಮ್ಮದೇ ಆದ ಅಸ್ತಿತ್ವಗಳೊಂದಿಗೆ ಉಳಿದುಕೊಂಡು ಬರುತ್ತಿವೆ ಎಂದರು. ರಾಜಕೀಯ, ಸಾಮಾಜಿಕ, ಧಾರ್ಮಿಕ, ಸಾಂಸ್ಕøತಿಕ ಹಾಗೂ ಸಾಹಿತ್ಯಿಕವಾಗಿ ಕೊಡುಕೊಳ್ಳುವಿಕೆಗಳು ಆರಂಭಗೊಂಡು ಹೊಸ ಸಂವೇದನೆಯು ಹರಿಯತೊಡಗಿದವು ಎಂದರಲ್ಲದೇ ಕನ್ನಡ ಸಾಹಿತ್ಯದ ಸಾಂದರ್ಭಿಕ ಸವಾಲುಗಳ ಕಣ್ಣ ಮುಂದೆ ಸಾಲುಗಟ್ಟಿ ನಿಂತಿವೆ ಎಂದರು. ಕನ್ನಡದ ಭಾμÉಯು ಕನ್ನಡದ ಸಾಹಿತ್ಯವನ್ನು ಹೊಂದಿಕೊಂಡು ಪ್ರಾದೇಶಿಕ ವೈವಿಧ್ಯಮಯವಾಗಿ ವಿಜೃಂಭಿಸುತ್ತ ತನ್ನ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿದೆ. ಕನ್ನಡ ಭಾμÉಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಹಾಗಾಗಿ ಕನ್ನಡ ಭಾμÉಯ ಸಾಹಿತ್ಯ ಮುಂದಿನ ಪೀಳಿಗೆಗೆ ಕನ್ನಡ ಗದ್ಯಗಳು, ಕನ್ನಡ ನಾಟಕ, ಕನ್ನಡ ಭಾವಗೀತೆ, ಕನ್ನಡ ಕವಿಗಳ ಪರಿಚಯಗಳನ್ನ ಮಕ್ಕಳಿಗೆ ಬಾಲ್ಯದಲ್ಲೇ ಕಲಿಸುವ ಮೂಲಕ ಉಳಿಸಿ ಬೆಳೆಸುವ ಮೂಲಕ ನಾವು ಗಟ್ಟಿಗೊಳಿಸಬೇಕಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಪ್ರದರ್ಶನ ಕಲೆ ನಾಟಕ ವಿಭಾಗದ ಮುಖ್ಯಸ್ಥ ಪೆÇ್ರ.ಎನ್.ಶಾಂತನಾಯಕ್, ಆರನಕಟ್ಟೆ ಡಾ.ರಂಗನಾಥ್, ಡಾ.ವಾತ್ಸಲ್ಯ, ಡಾ.ಸಂತೋμïಕುಮಾರ್, ಡಾ.ಅಣ್ಣಾಜಿ ಕೃμÁ್ಣರೆಡ್ಡಿ, ಡಾ.ಶಿವಪ್ರಕಾಶ್, ಡಾ.ಸಹನಾ ಪಿಂಜಾರ್, ಡಾ.ಶಕೀಲ ಸೇರಿದಂತೆ ವಿವಿಧ ವಿಭಾಗದ ಉಪನ್ಯಾಸಕರುಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ