ಮಂಗಳವಾರ, ಸೆಪ್ಟೆಂಬರ್ 10, 2024
ಸಂಡೂರು: ಸೆ.12 ರಂದು ವಿದ್ಯುತ್ ವ್ಯತ್ಯಯ
ಬಳ್ಳಾರಿ,ಸೆ.10(ಕರ್ನಾಟಕ ವಾರ್ತೆ)
ದೋಣಿಮಲೈ 110/33/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ 10 ಎಂ.ವಿ.ಎ ಪವರ್ ಟ್ರಾನ್ಸ್ಫಾರ್‌ಮರ್‌ನಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವುದರಿಂದ ಸೆ.12 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಸೀನ್ ಬಸಪ್ಪ ಕ್ಯಾಂಪ್, ನಂದಿಹಳ್ಳಿ, ಕಮತೂರು, ನಾರಾಯಣಪುರ, ರಣಜಿತ್‌ಪುರ, ಭುಜಂಗನಗರ ಗ್ರಾಮ ಪಂಚಾಯಿತಿ, ದೇವಗಿರಿ ಮತ್ತು ನರಸಿಂಗಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಗ್ರಾಮಗಳು, ಎನ್‌ಜೆವೈ ಮತ್ತು ಐಪಿಸೆಟ್ ಮಾರ್ಗಗಳ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಸಂಡೂರು ಜೆಸ್ಕಾಂ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
----------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ