ಶುಕ್ರವಾರ, ಸೆಪ್ಟೆಂಬರ್ 13, 2024

ಸೆ.14 ರಿಂದ ಅ.01 ರವರೆಗೆ ‘ಸ್ವಚ್ಛತಾ ಹೀ ಸೇವಾ ಪಾಕ್ಷಿಕ’ | ಗ್ರಾಮೀಣ ಪ್ರದೇಶದಲ್ಲಿ ಸಂಪೂರ್ಣ ನೈರ್ಮಲ್ಯ ಸಾಧಿಸಲು ಸಾರ್ವಜನಿಕರು ಕೈಜೋಡಿಸಬೇಕು: ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ

ಬಳ್ಳಾರಿ,ಸೆ.13(ಕರ್ನಾಟಕ ವಾರ್ತೆ): ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಜನರಲ್ಲಿ ನೈರ್ಮಲ್ಯ ಶುಚಿತ್ವ ಕುರಿತು ಅರಿವು ಮೂಡಿಸಲು ಜಿಲ್ಲೆಯಾದ್ಯಂತ ಸೆ.14 ರಿಂದ ಅ.01 ರ ವರೆಗೆ “ಸ್ವಚ್ಛತಾ ಹೀ ಸೇವಾ ಪಾಕ್ಷಿಕ-2024” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ ಅವರು ಹೇಳಿದರು. ಶುಕ್ರವಾರದಂದು ಜಿಪಂ ಕಚೇರಿಯ ವಿಡೀಯೋ ಸಂವಾದದ ಮೂಲಕ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು. ಸ್ವಚ್ಛತೆಗಾಗಿ ಬೃಹತ್ ಪ್ರಮಾಣದಲ್ಲಿ ಸಾರ್ವಜನಿಕರ ಸಹಭಾಗಿತ್ವ ಮತ್ತು ಸಮುದಾಯದ ಭಾಗವಹಿಸುವಿಕೆಯು ಅಗತ್ಯವಾಗಿದೆ. ಅನೈರ್ಮಲ್ಯ ಮತ್ತು ಸಮಸ್ಯಾತ್ಮಕ ಕಸದ ತಾಣಗಳನ್ನು ತೆರವುಗೊಳಿಸವತ್ತ ಗಮನಹರಿಸುವ ಕೆಲಸಬಾಗಬೇಕು ಎಂದರು. ಜನರ ಭಾಗವಹಿಸುವಿಕೆಯೊಂದಿಗೆ ನೈರ್ಮಲ್ಯಧಾರಣೆಗೆ ಪ್ರಶಸ್ತö್ಯ ನೀಡುವ ಮೂಲಕ ಎಲ್ಲಾ ನಾಗರಿಕರು ಗ್ರಾಮೀಣ ಪ್ರದೇಶದಲ್ಲಿ ಸಂಪೂರ್ಣ ನೈರ್ಮಲ್ಯ ಸಾಧಿಸಲು ಕೈಜೋಡಿಸಬೇಕು ಎಂದು ಹೇಳಿದರು. ಪ್ರತಿ ವರ್ಷವು ಸ್ವಚ್ಛತಾ ಹೀ ಸೇವಾ ಪಾಕ್ಷಿಕ ಕಾರ್ಯಕ್ರವನ್ನು ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಜಲಶಕ್ತಿ ಮಂತ್ರಾಲಯ ಹಾಗೂ ಕೇಂದ್ರ ನಗರ ವಸತಿ ವ್ಯವಹಾರಗಳ ಸಚಿವಾಲಯವು ಹಮ್ಮಿಕೊಳ್ಳುತ್ತದೆ. ರಾಷ್ಟçಪಿತ ಮಹಾತ್ಮ ಗಾಂಧೀಜಿಯವರ ಜಯಂತಿಯAದು ಅವರಿಗೆ ಗೌರವ ಸಲ್ಲಿಸಲು ಪ್ರತಿ ವರ್ಷ ಅಕ್ಟೋಬರ್ 2 ಅನ್ನು ಸ್ವಚ್ಛ ಭಾರತ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಸ್ವಚ್ಛತೆಗಾಗಿ ಸ್ವಯಂ ಪ್ರೇರಣೆ ಮತ್ತು ಸಾಮೂಹಿಕ ಕ್ರಮವನ್ನು ಬಲಪಡಿಸಲು 2017 ರಿಂದ ಈ ಸ್ವಚ್ಛತಾ ಹೀ ಸೇವಾ ಪಾಕ್ಷಿಕ ಆಂದೋಲನವನ್ನು ಆಚರಿಸಲಾಗುತ್ತಿದೆ ಎಂದು ಅವರು ತಿಳಿಸಿದರು. ಈ ವರ್ಷ ಸ್ವಚ್ಛ ಭಾರತ ಅಭಿಯಾನದ 10 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಯೋಜನೆಯ ಸಾಧನೆಯ ಮೈಲಿಗಲ್ಲನ್ನು ಗೌರವಿಸಲು ಸ್ವಚ್ಛತಾ ಹೀ ಸೇವಾ ಅಭಿಯಾನವನ್ನು ಸೆಪ್ಟೆಂಬರ್ 14 ರಿಂದ ಅಕ್ಟೋಬರ್ 1 ರವರಗೆ “ಸ್ವಭಾವ್ ಸ್ವಚ್ಛತಾ-ಸಂಸ್ಕಾರ್ ಸ್ವಚ್ಛತಾ” ಎಂಬ ಧ್ಯೇಯದೊಂದಿಗೆ ಆಚರಿಸಲಾಗುತ್ತಿದೆ. ಬೃಹತ್ ಶ್ರಮದಾನ ಚಟುವಟಿಕೆಗಳ ಮೂಲಕ ಸಂಪೂರ್ಣ ಸ್ವಚ್ಛತೆಯನ್ನು ಸಾಧಿಸಲು ಕ್ರಮವಹಿಸಬೇಕು. ಜಲಮೂಲಗಳು, ರಸ್ತೆಗಳು, ರೈಲ್ವೆ ನಿಲ್ದಾಣ , ಕಸದ ರಾಶಿ, ನಾಲಾ ಸೇರಿ ಮುಂತಾದ ಸಮುದಾಯ ಸ್ವತ್ತುಗಳ ಮೇಲೆ ಕೇಂದ್ರಿಕರಿಸಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸಾಮಾನ್ಯ ಸ್ವಚ್ಛತೆಯ ಮೇಲೆ ಕೇಂದ್ರೀಕರಿಸುವ ಜನರ ಶ್ರಮದಾನದೊಂದಿಗೆ ಬೃಹತ್ ಸ್ವಚ್ಛತಾ ಅಭಿಯಾನಗಳನ್ನು ಆಯೋಜಿಸಬೇಕು ಎಂದು ಜಿಪಂ ಸಿಇಒ ಅವರು ನಿರ್ದೇಶನ ನೀಡಿದರು. *ಸ್ವಚ್ಛತಾ ಕಿ ಭಾಗಿದಾರಿ:* ಸ್ವಚ್ಛತಾ ಕಿ ಭಾಗಿದಾರಿ ಕಾರ್ಯಕ್ರಮದಡಿ ಪ್ರತಿ ತಾಲ್ಲೂಕು ಮತ್ತು ಗ್ರಾಮ ಪಂಚಾಯತಿ, ಗ್ರಾಮಗಳಲ್ಲಿ ಸ್ಪರ್ಧೆಗಳು, ವಾಕಾಥಾನ್, ಸಸಿ ನೆಡುವಿಕೆಯಂತಹ ತೋಟಗಾರಿಕಾ ಅಭಿಯಾನಗಳು ಸೇರಿ ಮುಂತಾದ ವಿವಿಧ ಚಟುವಟಿಕೆಗಳ ಮೂಲಕ ಜಾಗೃತಿ ಮೂಡಿಸಲು ನಾಗರಿಕರು, ಸಮುದಾಯಗಳು ಮತ್ತು ಸಂಸ್ಥೆಗಳನ್ನು ವ್ಯಾಪಕವಾಗಿ ತೊಡಗಿಸಿಕೊಳ್ಳಬೇಕು. ಅಭಿಯಾನದಲ್ಲಿ ಕ್ಲೀನ್ ಸ್ಟಿçÃಟ್ ಫುಡ್ ಚಾಲೆಂಜ್, ವೇಸ್ಟ್ ಟು ಆರ್ಟ್, ಮರು ಬಳಕೆಯ ಉತ್ಪನ್ನಗಳ ಮಾರಾಟ, ಸ್ವಚ್ಛ ಭಾರತ ಸಾಂಸ್ಕೃತಿಕ ಉತ್ಸವಗಳಂತಹ ನವೀನ ಚಟುವಟಿಕೆಗಳ ಆಯೋಜನೆ ಮಾಡಬೇಕು. ಅಭಿಯಾನದ ಸಂದೇಶವನ್ನು ಚಾಲನೆ ಮಾಡಲು ಸ್ಥಳೀಯ ಪ್ರಭಾವಶಾಲಿಗಳು ಮತ್ತು ಬ್ರಾಂಡ್ ರಾಯಭಾರಿಗಳನ್ನು ತೊಡಗಿಸಿಕೊಳ್ಳಲು ಕ್ರಮವಹಿಸಬೇಕು ಎಂದರು. *ಸಪಾಯಿ ಮಿತ್ರ ಸುರಕ್ಷಾ ಶಿಬಿರಗಳು:* ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳೊಂದಿಗೆ ತಡೆಗಟ್ಟುವ ಆರೋಗ್ಯ ಆರೈಕೆ ಚಿಕಿತ್ಸೆ ಮತ್ತು ಸಂಪರ್ಕಕ್ಕಾಗಿ ಸಫಾಯಿ ಮಿತ್ರರಿಗೆ ಏಕ ಗವಾಕ್ಷಿ ಆರೋಗ್ಯ ಮತ್ತು ಕಲ್ಯಾಣ ಶಿಭಿರಗಳ ಆಯೋಜನೆ ಸೇರಿದಂತೆ ಇತರೆ ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ಜಿಪಂ ಉಪಕಾರ್ಯದರ್ಶಿ ಗಿರಿಜಾ ಶಂಕರ್, ಜಿಪಂ ಸಹಾಯಕ ನಿರ್ದೇಶಕ ಶರಣಬಸವರಾಜ, ಜಿಪಂ ಮುಖ್ಯ ಲೆಕ್ಕಾಧಿಕಾರಿ ಹಾಗೂ ಪ್ರಭಾರಿ ಯೋಜನಾ ನಿರ್ದೇಶಕ ವಿನೋದ್ ಕುಮಾರ್ ಸೇರಿದಂತೆ ಎಲ್ಲಾ ತಾಲ್ಲೂಕುಗಳ ಪಿಡಿಒ ಹಾಗೂ ಇತರರು ಇದ್ದರು. ----------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ