ಸೋಮವಾರ, ಸೆಪ್ಟೆಂಬರ್ 23, 2024

ಯುವಕ ನಾಪತ್ತೆ: ಪತ್ತೆಗೆ ಮನವಿ

ಬಳ್ಳಾರಿ,ಸೆ.23(ಕರ್ನಾಟಕ ವಾರ್ತೆ): ಬಳ್ಳಾರಿ ಗ್ರಾಮೀಣ ಪ್ರದೇಶದ ಗುಗ್ಗರಹಟ್ಟಿಯ ಈಶ್ವರಗುಡಿ ಬಳಿ ವಾಸವಿದ್ದ 17 ವರ್ಷದ ವಿವೇಕಾನಂದ ಎನ್ನುವ ಡಿಪ್ಲೋಮೊ ವಿದ್ಯಾಭ್ಯಾಸ ಮಾಡುತ್ತಿದ್ದ ಯುವಕ ಸೆ.19 ರಂದು ಕಾಣೆಯಾಗಿರುವ ಕುರಿತು ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲೆಯಾಗಿದ್ದು, ಪತ್ತೆಗೆ ಸಹಕರಿಸಬೇಕೆಂದು ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯ ಠಾಣಾಧಿಕಾರಿ ಅವರು ಮನವಿ ಮಾಡಿದ್ದಾರೆ. ಕಾಣೆಯಾದ ಯುವಕನ ಚಹರೆ: ಎತ್ತರ 5 ಅಡಿ, ಕೋಲು ಮುಖ, ತೆಳ್ಳನ ಮೈಕಟ್ಟು, ಕೆಂಪು ಮೈಬಣ್ಣ ಹೊಂದಿದ್ದು, ಕಪ್ಪು ಕೂದಲು, ಬಲಗೈಗೆ ಇಂಗ್ಲೀಷ್‌ನಲ್ಲಿ ವಿ ಅಂತ ಅಚ್ಚೆ ಗುರುತು ಇರುತ್ತದೆ. ಬಲ ಕಿವಿಯ ಹಿಂಭಾಗದಲ್ಲಿ ಕಪ್ಪು ಮಚ್ಚೆ ಇದ್ದು, ಕನ್ನಡ, ತೆಲುಗು, ಇಂಗ್ಲೀಷ್, ಹಿಂದಿ ಭಾಷೆ ಮಾತನಾಡುತ್ತಾನೆ. ಯುವಕ ಕಾಣೆಯಾದ ಸಂದರ್ಭದಲ್ಲಿ ಬೂದಿ ಬಣ್ಣದ ಚೆಕ್ಸ್ ಶರ್ಟ್, ಬ್ಲಾಕ್ ಜೀನ್ಸ್ ಪ್ಯಾಂಟ್ ಬಟ್ಟೆಗಳನ್ನು ಧರಿಸಿರುತ್ತಾನೆ. ಈ ಮೇಲ್ಕಂಡ ಚಹರೆ ಗುರುತುಗಳುಳ್ಳ ಯುವಕನ ಬಗ್ಗೆ ಮಾಹಿತಿ ದೊರೆತಲ್ಲಿ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯ ದೂ:08392-276461, ಮೊ.9480803049 ಅಥವಾ ಬಳ್ಳಾರಿ ಪೊಲೀಸ್ ಕಂಟ್ರೋಲ್ ರೂಂ ದೂ:08392-258100 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. -------------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ