ಮಂಗಳವಾರ, ಸೆಪ್ಟೆಂಬರ್ 24, 2024
ಸಿರುಗುಪ್ಪ; ಸೆ.25 ರಂದು ವಿದ್ಯುತ್ ವ್ಯತ್ಯಯ
ಬಳ್ಳಾರಿ,ಸೆ.24(ಕರ್ನಾಟಕ ವಾರ್ತೆ):
ಸಿರುಗುಪ್ಪ ತಾಲ್ಲೂಕಿನ ತೆಕ್ಕಲಕೋಟೆಯ 110/33/11 ವಿದ್ಯುತ್ ವಿತರಣಾ ಕೇಂದ್ರದ ತುರ್ತು ನಿರ್ವಾಹಣೆ ಕಾರ್ಯ ಕೈಗೆತ್ತಿಕೊಳ್ಳುತ್ತಿರುವುದರಿಂದ ಸೆ.25 ರಂದು ಬೆಳಿಗ್ಗೆ 10 ಗಂಟೆಯಿAದ ಸಂಜೆ 6 ಗಂಟೆಯವರೆಗೆ ನಿರಂತರ ಜ್ಯೋತಿ ಮಾರ್ಗಗಳಾದ ಎಫ್-6 ಹಳೇಕೋಟೆ ಎನ್‌ಜೆವೈ, ಮತ್ತು ಎಫ್-8 ಬಲಕುಂದಿ ಎನ್‌ಜೆವೈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಅಂದು ಎಫ್-9 ಹೆರಕಲ್ ಐಪಿ ಮಾರ್ಗ, ಎಫ್-10 ಬೈರಾಪುರ ಐಪಿ ಮಾರ್ಗ, ಎಫ್-5 ಬೂದುಗುಪ್ಪ ಐಪಿ ಮಾರ್ಗ ಮತ್ತು ಎಫ್-7 ಕೆ.ಬೆಳಗಲ್ ಐಪಿ ಮಾರ್ಗಗಳಲ್ಲಿ ರಾತ್ರಿ 12 ಗಂಟೆಯಿAದ ಬೆಳಿಗ್ಗೆ 07 ಗಂಟೆಯವರೆಗೆ ವಿದ್ಯುತ್ ಸಂಪರ್ಕ ನೀಡಲಾಗುವುದು.
ತೆಕ್ಕಲಕೋಟೆ ಪಟ್ಟಣ ಮತ್ತು ಸುತ್ತ ಮುತ್ತಲಿನ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ವಿದ್ಯುತ್ ಸಂಪರ್ಕ ವ್ಯತ್ಯಯವಾಗುವುದು.
*ಸೂಚನೆ:*
ತುರ್ತು ನಿರ್ವಾಹಣೆ ಕಾರ್ಯ ಮುಗಿಯುವವರೆಗೂ ಅಥವಾ ಮುಗಿದ ತಕ್ಷಣ ಯಾವುದೇ ಸಂದರ್ಭದಲ್ಲಿ ವಿದ್ಯುತ್ ಸಂಪರ್ಕ ಚಾಲನೆ ಮಾಡುವ ಸಾಧ್ಯತೆ ಇದ್ದು, ಸಾರ್ವಜನಿಕರು, ವಿದ್ಯುತ್ ಗ್ರಾಹಕರು ವಿದ್ಯುತ್ ಮಾರ್ಗಗಳ ಹತ್ತಿರ ಯಾವುದೇ ತರಹದ ಕೆಲಸ ಮಾಡಬಾರದೆಂದು ಜೆಸ್ಕಾಂನ ಸಿರುಗುಪ್ಪದ ಕಾರ್ಯ ಮತ್ತು ಪಾಲನಾ ಉಪವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
---------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ