ಮಂಗಳವಾರ, ಸೆಪ್ಟೆಂಬರ್ 17, 2024

ಓಪಿಡಿ ವೃತ್ತದಿಂದ ಸುಧಾಕ್ರಾಸ್ ರೈಲ್ವೇ ಗೇಟ್‌ವರೆಗೆ ರಸ್ತೆ ಸಂಚಾರ ಬಂದ್; ಪರ್ಯಾಯ ಮಾರ್ಗದಲ್ಲಿ ಸಂಚರಿಸಲು ಸೂಚನೆ

ಬಳ್ಳಾರಿ,ಸೆ.17(ಕರ್ನಾಟಕ ವಾರ್ತೆ): ರಾಷ್ಟಿçÃಯ ಹೆದ್ದಾರಿ-67ರಲ್ಲಿ ನಗರದ ಸುಧಾಕ್ರಾಸ್ ವೃತ್ತದಿಂದ ಓಪಿಡಿ ವೃತ್ತದವರೆಗೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಪ್ರಾರಂಭಿಸಿರುವ ಹಿನ್ನೆಲೆಯಲ್ಲಿ ಸೆ.18ರಿಂದ ಓಪಿಡಿ ವೃತ್ತದಿಂದ ಸುಧಾಕ್ರಾಸ್ ರೈಲ್ವೇ ಗೇಟ್‌ವರೆಗೆ ರಸ್ತೆ ಸಂಚಾರವನ್ನು ತಾತ್ಕಲಿಕವಾಗಿ ನಿರ್ಬಂಧಿಸಲಾಗಿದ್ದು, ವಾಹನ ಸವಾರರು ಸಂಚರಿಸಲು ಪರ್ಯಾಯ ಮಾರ್ಗಗಳಲ್ಲಿ ಸಂಚರಿಸಲು ಕೋರಲಾಗಿದೆ. *ಪರ್ಯಾಯ ಮಾರ್ಗ:* ಬಳ್ಳಾರಿ ನಗರ, ಎಸ್‌ಪಿ ಸರ್ಕಲ್‌ನಿಂದ ಹೊಸಪೇಟೆ ರಸ್ತೆ ಕಡೆಗೆ ಹೋಗುವ ಎಲ್ಲಾ ವಿಧದ ವಾಹನಗಳು (ಶಾಲಾ ಕಾಲೇಜು ಮತ್ತು ವೈದ್ಯಕೀಯ ಅಥವಾ ತುರ್ತು ಸೇವೆ ವಾಹನಗಳು ಹೊರತು ಪಡಿಸಿ) ಇನ್‌ಪ್ಯಾಂಟ್ರಿ ರಸ್ತೆ, ಪೋಲೋ ಪ್ಯಾರಾಡೈಸ್ ಹೋಟೆಲ್ ಮುಂದಿನ ರಸ್ತೆಯ ಮೂಲಕ 2ನೇ ರೈಲ್ವೇಗೇಟ್, ಐಟಿಐ ಕಾಲೇಜು ಮುಖಾಂತರ ಹೊಸಪೇಟೆ ರಸ್ತೆಯ ಕಡೆ ಸಂಚರಿಸಬಹುದು. ಶಾಲಾ-ಕಾಲೇಜು, ವೈದ್ಯಕೀಯ ಮತ್ತು ತುರ್ತು ಸೇವೆಗಳ ವಾಹನಗಳು ಮಾತ್ರ ವಿಮ್ಸ್ ನಿರ್ದೇಶಕರ ಕಛೇರಿಯ ಮುಂದಿನ ರಸ್ತೆಯ ಮೂಲಕ ಕಂಟೋನ್‌ಮೆAಟ್ ರೈಲ್ವೆಗೇಟ್ ಮುಂಖಾತರ ಸಂಚರಿಸಬಹುದು. ಹೊಸಪೇಟೆ ಕಡೆಯಿಂದ ಬಳ್ಳಾರಿ ನಗರಕ್ಕೆ ಆಗಮಿಸುವ ಎಲ್ಲಾ ವಿಧದ ಲಘು ಗಾತ್ರದ ವಾಹನಗಳು ಆರ್‌ಟಿಓ ಕಛೇರಿ, ಕೌಲ್ ಬಜಾರ್ 2 ನೇ ರೈಲ್ವೇ ಗೇಟ್ ಮುಖಾಂತರ ಅಥವಾ ಕೌಲ್ ಬಜಾರ್ 1ನೇ ರೈಲ್ವೇಗೇಟ್ ಮೇಲ್ಸೇತುವೆ ಮುಖಾಂತರ ಸಂಚರಿಸಬಹುದು. ಹೊಸಪೇಟೆ ಕಡೆಯಿಂದ ಬಳ್ಳಾರಿ ನಗರ ಮುಖಾಂತರ ಸಂಚರಿಸುವ ಭಾರಿಗಾತ್ರದ ಸರಕು ಸಾಗಾಣಿಕೆ ವಾಹನಗಳು ಕೇವಲ ರಾತ್ರಿ 11 ಗಂಟೆಯಿAದ ಬೆಳಗ್ಗೆ 6 ಗಂಟೆಯವರೆಗೆ ಕೌಲ್ ಬಜಾರ್ ಮೇಲ್ಸೇತುವೆ ಮುಖಾಂತರ ಸಂಚರಿಸಬೇಕು. ಬಳ್ಳಾರಿ ನಗರದಿಂದ ಹೊಸಪೇಟೆ ರಸ್ತೆಗೆ ಹೋಗುವ ಎಲ್ಲಾ ವಿಧದ ವಾಹನಗಳು ಸಿ.ಬಿ 1ನೇ ಗೇಟ್‌ನ ಮೇಲ್ಸೇತುವೆ ಮುಖಾಂತರ ಅಥವಾ ಲಘು ಮೋಟಾರು ವಾಹನಗಳು ರಂಗಮAದಿg ರಸ್ತೆಯ ಕೆಳ ಸೇತುವೆ ಮುಖಾಂತರ ಸಂಚರಿಸಬಹುದು. ಸಾರ್ವಜನಿಕ ಸುರಕ್ಷತೆ ಹಾಗೂ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವ ಹಿತದೃಷ್ಟಿಯಿಂದ ಮೋಟಾರ್ ವಾಹನ ಕಾಯ್ದೆ 1988 ರ 115 ಹಾಗೂ ಕರ್ನಾಟಕ ಮೋಟರ್ ವಾಹನ ನಿಯಮಗಳು 1989 ರ ನಿಯಮ 221 ಎ (5) ರನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಈ ಆದೇಶ ಹೊರಡಿಸಲಾಗಿದ್ದು, ಸಾರ್ವಜನಿಕರು, ವಾಹನ ಸವಾರರು ಸಹಕರಿಸಬೇಕೆಂದು ರಾಷ್ಟಿçÃಯ ಹೆದ್ದಾರಿ ಉಪ-ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನೀಯರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. --------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ