ಬುಧವಾರ, ಸೆಪ್ಟೆಂಬರ್ 18, 2024

ನಿರುಪಯುಕ್ತ ವಾಹನ; ಅ.22 ರಂದು ಬಹಿರಂಗ ಹರಾಜು ಪ್ರಕ್ರಿಯೆ

ಬಳ್ಳಾರಿ,ಸೆ.18(ಕರ್ನಾಟಕ ವಾರ್ತೆ): ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ, ಗುಣ ನಿಯಂತ್ರಣ ವಿಭಾಗ, ಧಾರವಾಡಕ್ಕೆ ಸೇರಿದ ಸಂಪೂರ್ಣ ನಿರುಪಯುಕ್ತ ಟಾಟಾ ಸುಮೋ ಜೀಪ್ ವಾಹನದ ಹರಾಜು ಪ್ರಕ್ರಿಯೆ ಅಕ್ಟೋಬರ್ 22 ರಂದು ಮಧ್ಯಾಹ್ನ 1 ಗಂಟೆಗೆ ಏರ್ಪಡಿಸಲಾಗಿದೆ. ಆಸಕ್ತ ಹರಾಜುದಾರರು ತುಂಬಿದ ಮೊಹರ್ ಬಂದ್ ಲಕೋಟೆಯನ್ನು 2024ರ ಅಕ್ಟೋಬರ್ 15, ಬೆಳಿಗ್ಗೆ 10 ಗಂಟೆಯಿAದ ಅಕ್ಟೋಬರ್ 21 ಸಂಜೆ 4 ಗಂಟೆಯೊಳಗಾಗಿ ನಗರದ ಕೋಟೆ ಪ್ರದೇಶದ ಪಿಡಬ್ಲೂಡಿ ಕಾಂಪೌAಡ್‌ನ ಸಣ್ಣ ನೀರಾವರಿ ಮತ್ತು ಅಂತರ್ಜಲ ಇಲಾಖೆ, ಗುಣ ನಿಯಂತ್ರಣ ಉಪವಿಭಾಗದ ಕಚೇರಿಯಲ್ಲಿ ಸಲ್ಲಿಸಬೇಕು. ಇಎಂಡಿ ಮೊತ್ತ ಹಾಗೂ ಹೆಚ್ಚಿನ ಮಾಹಿತಿಗಾಗಿ ನಗರದ ಕೋಟೆ ಪ್ರದೇಶದ ಪಿಡಬ್ಲೂಡಿ ಕಾಂಪೌAಡ್‌ನ ಸಣ್ಣ ನೀರಾವರಿ ಮತ್ತು ಅಂತರ್ಜಲ ಇಲಾಖೆ, ಗುಣ ನಿಯಂತ್ರಣ ಉಪವಿಭಾಗದ ಕಚೇರಿಗೆ ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ. -------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ