ಬುಧವಾರ, ಸೆಪ್ಟೆಂಬರ್ 18, 2024

ಸಂಡೂರು: ಸೆ.20 ರಂದು ವಿದ್ಯುತ್ ವ್ಯತ್ಯಯ

ಬಳ್ಳಾರಿ,ಸೆ.18(ಕರ್ನಾಟಕ ವಾರ್ತೆ): ಸಂಡೂರಿನ 110/33/11 ಕೆ.ವಿ ದೋಣಿಮಲೈ ವಿದ್ಯುತ್ ವಿತರಣಾ ಕೇಂದ್ರದಲ್ಲಿ 20 ಎಮ್.ವಿ.ಏ ಪವರ್ ಟ್ರಾನ್ಸ್ಫಾರ್‌ಮರ್ ನಿರ್ವಹಣಾ ಕಾಮಾಗಾರಿಯನ್ನು ತುರ್ತಾಗಿ ಕೈಗೆತ್ತಿಕೊಳ್ಳುತ್ತಿರುವುದರಿಂದ ಸಂಡೂರು ಪಟ್ಟಣ ಸೇರಿದಂತೆ ವಿವಿಧ ಗ್ರಾ.ಪಂ ವ್ಯಾಪ್ತಿಯಲ್ಲಿ ಸೆ.20 ರಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಜೆಸ್ಕಾಂ ಸಂಡೂರು ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ. *ವಿದ್ಯುತ್ ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು:* ಸಂಡೂರು ಪಟ್ಟಣ ಸೇರಿದಂತೆ ದೇವಗಿರಿ ಐಪಿ, ಯಶವಂತನಗರ ಐಪಿ ಮಾರ್ಗ ಹಾಗೂ ಕೃಷ್ಣಾನಗರ, ಸುಶೀಲಾನಗರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಗ್ರಾಮಗಳಲ್ಲಿ ವಿದ್ಯುತ್ ಕಡಿತಗೊಳಿಸಲಾಗುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ