ಬುಧವಾರ, ಸೆಪ್ಟೆಂಬರ್ 18, 2024

ಅನಾಮಧೇಯ ಮೃತ ದೇಹ: ವಾರಸುದಾರರ ಪತ್ತೆಗೆ ಮನವಿ

ಬಳ್ಳಾರಿ, ಸೆ.18(ಕರ್ನಾಟಕ ವಾರ್ತೆ): ನಗರದ ಕಂಟೋನ್‌ಮೆAಟ್‌ನ ರೈಲು ನಿಲ್ದಾಣಗಳ ಮಧ್ಯ ಸುಮಾರು 35-40 ವರ್ಷದ ಅನಾಮದೇಯ ವ್ಯಕ್ತಿಯ ಮೃತ ದೇಹ ಸೆ.14 ರಂದು ಕಂಡುಬAದಿದ್ದು, ಈ ಕುರಿತು ಬಳ್ಳಾರಿ ರೈಲ್ವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತನ ಚಹರೆ ಗುರುತು: ಎತ್ತರ 5.5 ಅಡಿ, ದುಂಡು ಮುಖ, ಗೋಧಿ ಮೈಬಣ್ಣ, ಸಾಧರಣ ಮೈಕಟ್ಟು ಹೊಂದಿದ್ದು, ಅಗಲವಾದ ಹಣೆ, ದಪ್ಪ ಮೂಗು, ತಲೆಯಲ್ಲಿ ಸುಮಾರು 02 ಇಂಚು ಬಿಳಿ ಮಿಶ್ರಿತ ಕಪ್ಪು ಕೂದಲು ಇರುತ್ತದೆ. ಸಣ್ಣ ಬಿಳಿ ಗಡ್ಡ, ಬಿಳಿ ಮಿಶ್ರಿತ ಕಪ್ಪು ಮೀಸೆ ಇದ್ದು, ಕೊರಳಲ್ಲಿ ಕೆಂಪು ಮತ್ತು ಹಸಿರು ಬಣ್ಣದ ದಾರ ಅದಕ್ಕೆ ಸ್ಟೀಲ್ ತೈತಾ ಇರುತ್ತದೆ. ಸೊಂಟಕ್ಕೆ ಕೆಂಪು ಬಣ್ಣದ ಎರಡೆಳೆಯ ಉಡದಾರ ಇದ್ದು, ಮೃತನ ಮೈಮೇಲೆ ಆಕಾಶ ನೀಲಿ ಬಣ್ಣದ ಗೆರೆಗಳುಳ್ಳ ಪುಲ್ ಶರ್ಟ್, ಬೂದು ಬಣ್ಣದ ಆಫ್ ಪ್ಯಾಂಟ್, ಗುಲಾಬಿ ಮತ್ತು ಕಪ್ಪು ಗೆರೆಗುಳುಳ್ಳ ಕರ ವಸ್ತç, ನಾಸಿ ಬಣ್ಣದ ಅಂಡರ್ ವೇರ್ ಧರಿಸಿರುತ್ತಾನೆ. ಮೃತನ ಕಾಲಿನಲ್ಲಿ ಒಂದು ಜೊತೆ ಕಪ್ಪು ಬಣ್ಣದ ಚಪ್ಪಲಿ ಇರುತ್ತವೆ. ಈ ಮೇಲ್ಕಂಡ ಚಹರೆ ಗುರುತುಳ್ಳ, ಮೃತನ ವಾರಸುದಾರರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಬಳ್ಳಾರಿ ರೈಲ್ವೆ ಪೊಲೀಸ್ ಠಾಣೆಯ ಪೊಲೀಸ್ ಉಪ ನೀರಿಕ್ಷಕರ ಮೊ.9480802131, ರಾಯಚೂರು ರೈಲ್ವೇ ಪೊಲೀಸ್ ಠಾಣೆಯ ಪೊಲೀಸ್ ವೃತ ನಿರೀಕ್ಷಕರ ಮೊ.9480800471 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. -----------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ