ಮಂಗಳವಾರ, ಸೆಪ್ಟೆಂಬರ್ 24, 2024
ರಕ್ತದೊತ್ತಡ, ರಕ್ತಹೀನತೆಯುಳ್ಳ ಗರ್ಭಿಣಿಯರ ತಪಾಸಣೆಗೆ ನಿಗಾವಹಿಸಿ: ಡಿಹೆಚ್‌ಓ ಡಾ.ಯಲ್ಲಾ ರಮೇಶಬಾಬು
ಬಳ್ಳಾರಿ,ಸೆ.24(ಕರ್ನಾಟಕ ವಾರ್ತೆ):
ಜಿಲ್ಲೆಯಲ್ಲಿ ರಕ್ತದೊತ್ತಡ, ರಕ್ತಹೀನತೆ ಕೊರತೆ ಕಂಡುಬರುವ ಗರ್ಭಿಣಿಯರನ್ನು ಗುರ್ತಿಸಿ ಅವರ ತಪಾಸಣೆಗೆ ಆದ್ಯತೆ ನೀಡಬೇಕು ಎಂದು ಅವರ ನಿಗಾವಹಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶಬಾಬು ಅವರು ಹೇಳಿದರು.
ಗರ್ಭಿಣಿಯೆಂದು ಗುರ್ತಿಸಿದ ದಿನದಿಂದ ರಕ್ತದೊತ್ತಡ, ತೂಕ, ಹೆಚ್‌ಬಿ ಪ್ರಮಾಣ, ಮೂತ್ರ ಪರೀಕ್ಷೆಗಳನ್ನು ನಿಯಮಿತವಾಗಿ ಮಾಡಿಸಬೇಕು. ಜೊತೆಗೆ ಅಧಿಕ 120/80 ಕ್ಕಿಂತ ಹೆಚ್ಚು (ಬಿಪಿ) ರಕ್ತದೊತ್ತಡ, ರಕ್ತದಲ್ಲಿ ಕಬ್ಬಿಣಾಂಶದ ಪ್ರಮಾಣ 11 ಕ್ಕಿಂತ ಕಡಿಮೆ ಇದ್ದಲ್ಲಿ ತಡಮಾಡದೇ ಕುಟುಂಬದ ಸದಸ್ಯರ ಮನವೊಲಿಸಿ ಹತ್ತಿರದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಒದಗಿಸಬೇಕು. ಈ ಮೂಲಕ ತಾಯಿ ಮರಣ ತಡೆಗೆ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಯವರು ನಿಗಾ ವಹಿಸಬೇಕು ಎಂದು ಅವರು ತಿಳಿಸಿದರು.
ಮಂಗಳವಾರದAದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಾರ್ಯಾಲಯದ ಸಭಾಂಗಣದಲ್ಲಿ ತಾಯಿ ಮರಣ ತಡೆ ಕುರಿತು ಏರ್ಪಡಿಸಿದ್ದ ಬಿಮ್ಸ್ ಮತ್ತು ಜಿಲ್ಲಾ ಆಸ್ಪತ್ರೆಯ ತಜ್ಞವೈದರ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಕ್ತದೊತ್ತಡ ಪರೀಕ್ಷೆ ಕೈಗೊಂಡ ನಂತರ ಕಂಡುಬರುವ ವ್ಯತ್ಯಾಸ ಮರು ಪರಿಶೀಲಿಸಬೇಕು. ರಕ್ತಹೀನತೆ ಕಂಡುಬAದಲ್ಲಿ ಸ್ಥಳೀಯವಾಗಿ ಐಎಫ್‌ಎ ಮಾತ್ರೆ, ಐರನ್ ಸುಕ್ರೋಸ್‌ಗಳನ್ನು ಹಾಕಿಸಬೇಕು. ಸುಧಾರಣೆಯಾಗದಿದ್ದಲ್ಲಿ ತಜ್ಣರ ಬಳಿ ಟೆಲಿ ಕನ್ಸಲ್ಟನ್ಸಿ ಮಾಡಿಸಲು ಕ್ರಮವಹಿಸಿ, ಇಲ್ಲವೇ ತಜ್ಞರನ್ನು ನೇರವಾಗಿ ಸಂಪರ್ಕಿಸಿ ಅಗತ್ಯವಿದ್ದಲ್ಲಿ ಸ್ಕಾö್ಯನ್ ಮಾಡಿಸಬೇಕು ಎಂದರು.
ಮೊದಲ ಹೆರಿಗೆ ಶಸ್ತçಚಿಕಿತ್ಸೆ ಮೂಲಕವಾದಲ್ಲಿ ಪುನಃ ಗರ್ಭಿಣಿಯಾಗುವ ಅವಧಿಯನ್ನು ಕನಿಷ್ಟ 3 ವರ್ಷಕ್ಕೆ ಕಡ್ಡಾಯವಾಗಿ ಮುಂದೂಡಲು ತಿಳಿಸಬೇಕು. ಇದಕ್ಕಾಗಿ ಅಂತರ ಚುಚ್ಚುಮದ್ದು, ಕಾಪರ-ಟಿ, ನೀರೊಧ ಕುರಿತು ಆರೋಗ್ಯ ಶಿಕ್ಷಣ ನೀಡಬೇಕು. ಅತಿ ಮುಖ್ಯವಾಗಿ ಗರ್ಭಿಣಿಗೆ ಮೇಲ್ಮಟ್ಟದ ಆಸ್ಪತ್ರೆಗೆ ರೇಫರ್ ಮಾಡುವಾಗ 108 ಆರೋಗ್ಯ ಕವಚ ಬರುವ ಸಮಯ ತಡವಾಗುವ ಸಾಧ್ಯತೆ ಇದ್ದಲ್ಲಿ, ತಕ್ಷಣೇ ವೈದ್ಯಾಧಿಕಾರಿಗಳು ಪರ್ಯಾಯ ಸಾರಿಗೆ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು.
ಇಲಿ ಜ್ವರದ ಕುರಿತು ಜಾಗೃತಿ: ಆಹಾರ ಮತ್ತು ನೀರಿನ ಸಂಗ್ರಹಗಳನ್ನು ಇಲಿಯ ಮೂತ್ರ ಅಥವಾ ಮಲ ಮಿಶ್ರಣವಾಗದಂತೆ ತಡೆಯಲು ತಿಳಿಸಿ ಎಂದರು.
ವಿಮ್ಸ್ ಪ್ರಸೂತಿ ವಿಭಾಗದ ಮುಖಸ್ಥ ಡಾ.ವಿರೇಂದ್ರ ಕುಮಾರ್ ಅವರು ಮಾತನಾಡಿ ಹಬ್ಬ, ಜಾತ್ರೆ, ಊರ ದೇವರ ಪೂಜೆ, ಮುಂತಾದ ಆಚರಣೆಯ ಮಾಡುವಾಗ ಗರ್ಭಿಣಿಯ ಸಕಾಲದಲ್ಲಿ ಆಗಬೇಕಾದ ತಪಾಸಣೆಗೆ ಅಡಚಣೆಯಾಗದಂತೆ ಪಾಲಕರ ಮನವೊಲಿಸಬೇಕು. ಗಂಡಾAತರ ಗರ್ಭಿಣಿಯರ ಮನೆ ಭೇಟಿ ಹಾಗೂ ಆರೋಗ್ಯದ ಸ್ಥಿತಿ ಕುರಿತು ಪ್ರತಿವಾರ ಚರ್ಚಿಸಬೇಕು. ಹೆರಿಗೆ ವಿಷಯವನ್ನು ಆದ್ಯತೆ ಇಟ್ಟುಕೊಂಡು ಸ್ಥಳೀಯ ಗ್ರಾಮ ಪಂಚಾಯತ ಅಧ್ಯಕ್ಷರು ಹಾಗೂ ಸದಸ್ಯರೊಂದಿಗೆ ಸಮನ್ವಯ ಸಭೆ ಕೈಗೊಳ್ಳಬೇಕು ಎಂದರು.
ಹೆರಿಗೆ ಪೂರ್ವದಲ್ಲಿ ಎಸ್‌ಟಿಐ, ಆರ್‌ಟಿಐ, ಹೆಚ್‌ಬಿಎಸ್‌ಎಜಿ ಪರೀಕ್ಷೆಗಳನ್ನು ತಪ್ಪದೇ ಮಾಡಿಸಬೇಕು, ಹೆರಿಗೆಗೆ ಆಗಮಿಸಿದಾಗ ಪರೀಕ್ಷೆ ಮೂಲಕ ಹೆರಿಗೆ ನಿರ್ವಹಿಲು ಸಾಧ್ಯತೆ ಅಥವಾ ಗಂಭೀರತೆ ಕಂಡುಬAದರೆ ತಡ ಮಾಡದೆ ಸಿಬ್ಬಂದಿ ಸಹಿತ ರೇಫರ್ ಮಾಡುವುದನ್ನು ಮರೆಯಬಾರದು, ಅದಕ್ಕೆ ಪೂರಕವಾದ ವೈದ್ಯಕೀಯ ದಾಖಲಾತಿಗಳನ್ನು ಸಹ ಇರುವಂತೆ ನೋಡಿಕೊಳ್ಳಿ ಎಂದು ವಿನಂತಿಸಿದರು.
ಸಭೆಯಲ್ಲಿ ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ.ಹನುಮಂತಪ್ಪ, ಬಿಮ್ಸ್ ಪ್ರಸೂತಿ ತಜ್ಞೆ ಡಾ.ಆಶಾರಾಣಿ, ಡಾ.ವಿಜಯಲಕ್ಷಿö್ಮÃ, ಡಾ.ಚಂದ್ರಶೇಖರ, ಡಾ.ವಾರೀಜಾ.ಟಿ, ಜಿಲ್ಲಾ ಆಸ್ಪತ್ರೆ ಪ್ರಸೂತಿ ತಜ್ಞ ಡಾ.ಅಶ್ರಫ್ ಅಲಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ, ಕಾಯಕಲ್ಪ ಸಲಹೆಗಾರರಾದ ಡಾ.ಪ್ರಿಯಾಂಕ್, ಡಿಪಿಎಮ್ ವೆಂಕೋಬ್ ನಾಯಕ್, ಷರೀಫ್ ಉಪಸ್ಥಿತರಿದ್ದರು.
--------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)




ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ