ಗುರುವಾರ, ಸೆಪ್ಟೆಂಬರ್ 19, 2024

ಅನಾಮಧೇಯ ಮೃತ ವಾರಸುದಾರರ ಪತ್ತೆಗೆ ಮನವಿ

ಬಳ್ಳಾರಿ,ಸೆ.19(ಕರ್ನಾಟಕ ವಾರ್ತೆ): ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಅಲ್ಲೀಪುರ ಸಗಟು ನೀರು ಸರಬರಾಜು ಕೇಂದ್ರ ಸ್ಥಾವರಕ್ಕೆ ಬರುವ ಹೆಚ್‌ಎಲ್‌ಸಿ ಕಾಲುವೆಯಿಂದ ಚಾನಲ್‌ನ ಜಾಲರಿಯಲ್ಲಿ ಅಂದಾಜು 40-45 ವರ್ಷದ ಅನಾಮದೇಯ ವ್ಯಕ್ತಿಯ ಶವವು ಸೆ.17 ರಂದು ಪತ್ತೆಯಾಗಿದ್ದು, ಮೃತನ ವಾರಸುದಾರರ ಪತ್ತೆಗೆ ಸಹಕರಿಸಬೇಕೆಂದು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮನವಿ ಮಾಡಿದ್ದಾರೆ. ಮೃತನ ಚಹರೆ ವಿವರ: ಅಂದಾಜು ಎತ್ತರ 5 ಅಡಿ 2 ಇಂಚು, ದುಂಡು ಮುಖ ಹೊಂದಿದ್ದು, ಶವ ಕೊಳೆತು ತಲೆಯಿಂದ ಪಾದದವರೆಗೆ ಚರ್ಮ ಕಿತ್ತು ಹೋಗಿರುತ್ತದೆ. ಮೃತದೇಹವನ್ನು ಅಲ್ಲಲ್ಲಿ ಜಲಚರ ಪ್ರಾಣಿಗಳು ತಿಂದಿರುತ್ತವೆ, ತಲೆ ಕೂದಲು ಉದುರಿ ಹೋಗಿರುತ್ತವೆ, ಸೂಂಟಕ್ಕೆ ಕೆಂಪು ಉಡುದಾರ ಇರುತ್ತದೆ. ಮೃತ ದೇಹದ ಮೇಲೆ ಬಿಳಿ ಬಣ್ಣದ ಪುಲ್ ಬನಿಯಾನ್, ಬಿಳಿ ಮತ್ತು ಕಂದು ಬಣ್ಣದ ಚೌಕಳಿಯುಳ್ಳ ಲುಂಗಿ ಧರಿಸಿರುತ್ತಾನೆ. ವಾರಸುದಾರರ ಬಗ್ಗೆ ಮಾಹಿತಿ ಇದ್ದಲ್ಲಿ ಬಳ್ಳಾರಿ ಕಂಟ್ರೋಲ್ ರೂಂ ದೂ.08392-258100, ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆ ದೂ.08392-276461, ಪಿಐ ಮೊ.9480803049 ಗೆ ಸಂಪರ್ಕಿಸಬ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ