ಸೋಮವಾರ, ಸೆಪ್ಟೆಂಬರ್ 23, 2024
ಶಿಶಿಕ್ಷÄ ತರಬೇತಿಗೆ ಅರ್ಜಿ ಆಹ್ವಾನ
ಬಳ್ಳಾರಿ,ಸೆ.23(ಕರ್ನಾಟಕ ವಾರ್ತೆ):
ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ವತಿಯಿಂದ ಕುಡತಿನಿಯಲ್ಲಿನ ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೇಂದ್ರದಲ್ಲಿ ಒಂದು ವರ್ಷ ಅವಧಿ ಶಿಶಿಕ್ಷÄ ತರಬೇತಿ ನೀಡಲು ಉದ್ದೇಶಿಸಲಾಗಿದ್ದು, ಅರ್ಹ ಐಟಿಐ ಮತ್ತು ಎಸ್‌ಎಸ್‌ಎಲ್‌ಸಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಅರ್ಹ ಅಭ್ಯರ್ಥಿಗಳು ತಮ್ಮ ಸ್ವವಿವರದೊಂದಿಗೆ ವೃತ್ತಿಗನುಗುಣವಾಗಿ ಆನ್‌ಲೈನ್ ವೆಬ್‌ಸೈಟ್ www.apprenticeshipindia.org ಲಿಂಕ್ ಮೂಲಕ ಅ.07 ಸಂಜೆ 5 ಗಂಟೆಯೊಳಗಾಗಿ ಅರ್ಜಿ ಸಲ್ಲಿಸಬೇಕು.
*ಶಿಶಿಕ್ಷÄ ವೃತ್ತಿ ಸಂಖ್ಯೆ ಮತ್ತು ಶಿಷ್ಯವೇತನ:*
ಐಟಿಐ ಕೋರ್ಸ್ ಪೂರ್ಣಗೊಳಿಸಿದ ಎಲೆಕ್ಟಿçÃಷಿಯನ್-5, ಫಿಟ್ಟರ್-5, ಟರ್ನರ್-2, ವೆಲ್ಡರ್-3, ಕೊಪಾಪಾಸಾ-7. ತರಬೇತಿಯ ಅವಧಿಯಲ್ಲಿ ನಿಗಮದ ವತಿಯಿಂದ 10,000 ರೂ. ಮಾಸಿಕ ಶಿಷ್ಯವೇತನ ಹಾಗೂ ಎಸ್‌ಎಸ್‌ಎಲ್‌ಸಿ ಉತ್ತೀರ್ಣಗೊಂಡ ಎಫ್‌ಓಎ-4 (ಎಸ್‌ಎಸ್‌ಎಲ್‌ಸಿ ಮತ್ತು ಕಂಪ್ಯೂಟರ್) ಹೌಸ್‌ಕೀಪರ್-15. ನಿಗಮದ ವತಿಯಿಂದ 7,000 ರೂ. ಮಾಸಿಕ ಶಿಷ್ಯವೇತನ ನೀಡಲಾಗುತ್ತದೆ. ತರಬೇತಿಯು 1 ವರ್ಷ ಅವಧಿಯಾಗಿರುತ್ತದೆ.
*ಬೇಕಾದ ದಾಖಲೆಗಳು:*
ಅಭ್ಯರ್ಥಿಯ ಹೆಸರು, ಆಧಾರ್ ಕಾರ್ಡ್ ಪೂರ್ಣ ವಿಳಾಸ, ಮೊಬೈಲ್ ಸಂಖ್ಯೆ, ವಿದ್ಯಾರ್ಹತೆಯ ಅಂಕಪಟ್ಟಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ದೈಹಿಕಾ ಕ್ಷಮತಾ ಪತ್ರ, ಇತ್ತೀಚಿ ನಾಲ್ಕು ಭಾವಚಿತ್ರ, ಈ ಮೊದಲು ಶಿಶಿಕ್ಷÄ ತರಬೇತಿ ಪಡೆದಿದ್ದಲ್ಲಿ ದಾಖಲೆಯ ವಿವರದ ಪ್ರತಿ ಒದಗಿಸಬೇಕು.
ಅಭ್ಯರ್ಥಿಯು ಚಾಲ್ತಿಯಲ್ಲಿರುವ ಇ-ಮೇಲ್ ಐಡಿಯನ್ನು ಕಡ್ಡಾಯವಾಗಿ ಭರ್ತಿ ಮಾಡಿಬೇಕು. 18 ವರ್ಷ ವಯೋಮಿತಿ ಹೊಂದಿರಬೇಕು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಶಿಶಿಕ್ಷÄ ಕಾಯ್ದೆ ಪ್ರಕಾರ ಮೀಸಲಾತಿ ಇದ್ದು, ನಿಗಮದ ಉದ್ಯೋಗಿಗಳ ಮಕ್ಕಳಿಗೆ ಶೇ.25 ರಷ್ಟು ಮೀಸಲಾತಿ ಇರುತ್ತದೆ.
ಆನ್‌ಲೈನ್ ಮೂಲಕ ಸಲ್ಲಿಸಿದ ಅರ್ಜಿಯ ಜೊತೆಗೆ ಲಕೋಟೆ ಮೇಲೆ ಶಿಶಿಕ್ಷÄ ತರಬೇತಿಗಾಗಿ ಅರ್ಜಿ ಎಂದು ನಮೂದಿಸಿ ಕಚೇರಿಗೆ ಸಲ್ಲಿಸಬೇಕು.
*ವಿಶೇಷ ಸೂಚನೆ:*
ತರಬೇತಿ ಅವಧಿ ಮುಗಿದ ನಂತರ ಶಿಶಿಕ್ಷÄಗಳನ್ನು ಕೂಡಲೇ ಬಿಡುಗಡೆಗೊಳಿಸಲಾಗುವುದು ಹಾಗೂ ಯಾವುದೇ ಸಂದರ್ಭದಲ್ಲಿ ಶಿಶಿಕ್ಷÄಗಳನ್ನು ನಿಗಮದ ಖಾಯಂ ಸೇವೆಗೆ ಪರಿಗಣಿಸಲಾಗುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಕುಡತಿನಿಯ ಕರ್ನಾಟಕ ವಿದ್ಯುತ್ ನಿಗಮ ನಿಯಮಿತ, ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೇಂದ್ರ ಕಚೇರಿ ಅಥವಾ ಮೊ.9901340029 ಗೆ ಸಂಪರ್ಕಿಸಬಹುದು ಎಂದು ಕರ್ನಾಟಕ ವಿದ್ಯುತ್ ನಿಗಮ ನಿಯಮಿತ, ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೇಂದ್ರದ ಉಪ ಪ್ರಧಾನ ಸಂಪಾದಕರು ತಿಳಿಸಿದ್ದಾರೆ.
----------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ