ಬುಧವಾರ, ಸೆಪ್ಟೆಂಬರ್ 18, 2024
ಕೃಷಿ ಇಲಾಖೆ; ಹತ್ತಿ ಬೆಳೆಯ ನಿರ್ವಹಣಾ ಕ್ರಮಗಳ ಸಲಹೆ
ಬಳ್ಳಾರಿ,ಸೆ.18(ಕರ್ನಾಟಕ ವಾರ್ತೆ):
ಜಿಲ್ಲೆಯಲ್ಲಿ ಪ್ರಸ್ತುತ ಹತ್ತಿ ಬೆಳೆಯು ಸುಮಾರು 60-80 ದಿನಗಳ ಬೆಳೆಯಾಗಿದೆ. ಹತ್ತಿ ಬೆಳೆಯಲ್ಲಿ ತೇವಾಂಷದಿAದ ಸೊರಗಲಾರಂಬಿಸಿ ಪ್ಯಾರ ವಿಲ್ಟ್ (ಹತ್ತಿ ಹಸಿನೆಟೆ) ಸಮಸ್ಯೆ ಉಂಟಾಗುವ ಸಂಭವವಿದ್ದು, ರೈತರು ಕೆಲವು ನಿರ್ವಹಣಾ ಕ್ರಮಗಳನ್ನು ಅನುಸರಿಸಲು ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕ ಸೋಮಸುಂದರ್ ಅವರು ತಿಳಿಸಿದ್ದಾರೆ.
*ನಿರ್ವಹಣಾ ಕ್ರಮಗಳು:*
ಭೂಮಿಯಲ್ಲಿ ಅತಿಯಾದ ಮಳೆ ನೀರು ಬಸಿದು ಹೋಗುವಂತೆ ಬಿಸಿಗಾಲುವೆ ನಿರ್ಮಿಸಿ, ಕಾಪರ ಆಕ್ಸಿಕ್ಲೋರೈಡ 2.5 ಗ್ರಾಂ ಮತ್ತು ಬೇವು ಲೇಪಿತ ಯೂರಿಯಾ 10 ಗ್ರಾಂ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಬಡ್ಡೆ ಭಾಗ ನೆನೆಯುವಂತೆ ಮಾಡಿ ಸಿಂಪಡಿಸಬೇಕು.
ಕಾರ್ಬನಡೈಜಿA ಶೇ.50 ಡಬ್ಲೂ 2 ಗ್ರಾಂ ಮತ್ತು ಬೇವು ಲೇಪಿತ ಯೂರಿಯಾ 10 ಗ್ರಾಂ ಪ್ರತಿ ಲೀಟರ್ ನೀರಿನಲ್ಲಿ ಬೆರಸಿ ಬಡ್ಡೆ ಭಾಗ ಹಾಗೂ ಕವಲುಗಳು ನೆನೆಯುವಂತೆ ಸಿಂಪಡಿಸಬೇಕು.
ಬಿಸಿಲಿನ ಅವಧಿಯಲ್ಲಿ ಬೆಳೆಯ ಸಾಲಿನಲ್ಲಿ ಎಡೆಕುಂಟೆ ಹೊಡೆಯುವುದರಿಂದ ಗಿಡದ ಉಸಿರಾಟ ಕ್ರಿಯೆಗೆ ಸಹಕಾರಿಯಾಗಲಿದ್ದು, ನಿಧಾನವಾಗಿ ಹಸಿ ನೆಟೆ ಗಿಡಗಳು ಮಳೆಯ ನಂತರ ಸೂರ್ಯನ ಸೂಕ್ತ ತಾಪಮಾನದ ವಾತವಣಕ್ಕೆ ಹೊಂದಿಕೊAಡು ಚೇತರಿಸಿಕೊಂಡು ಹತೋಟೆಗೆ ಬರುತ್ತವೆ.
ಹತ್ತಿ ಬೆಳೆಯುವ ರೈತರು ನಿರ್ವಾಹಣಾ ಕ್ರಮಗಳ ಸಲಹೆಗಳನ್ನು ಅನುಸರಿಸಿದರೆ, ಉತ್ತಮ ಫಸಲು ಕಂಡುಕೊಳ್ಳುತ್ತಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
---------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ