ಶನಿವಾರ, ಸೆಪ್ಟೆಂಬರ್ 21, 2024

ಬಳ್ಳಾರಿ; ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯ

ಬಳ್ಳಾರಿ,ಸೆ.21(ಕರ್ನಾಟಕ ವಾರ್ತೆ): ನಗರದ ನಾರಾಯಣರಾವ್ ಪಾರ್ಕ್ ಹತ್ತಿರ ಎಂಎಸ್ ಪೈಪ್‌ಲೈನ್ ನ ಸ್ಥಳಾಂತರ ಕಾರ್ಯ ಕೈಗೊಳ್ಳುತ್ತಿರುವುದರಿಂದ ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯ 07 ನೇ ವಾರ್ಡ್ನಿಂದ 20 ನೇ ವಾರ್ಡ್ವರೆಗಿನ ಪ್ರದೇಶಗಳಲ್ಲಿ ಸೆ.23 ರಿಂದ ಸೆ.26ರವರೆಗೆ ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು, ನಗರವಾಸಿಗಳು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ಬಳ್ಳಾರಿ ಮಹಾನಗರ ಪಾಲಿಕೆ ಮತ್ತು ಕರ್ನಾಟಕ ನಗರ ನೀರು ಸರಬರಾಜು ಮಂಡಳಿಯ ಬಳ್ಳಾರಿ ವಿಭಾಗ ಕಚೇರಿ ಪ್ರಕಟಣೆ ತಿಳಿಸಿದೆ. --------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ