ಮಂಗಳವಾರ, ಸೆಪ್ಟೆಂಬರ್ 24, 2024

ಜವಾಹರ ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆ; ಅರ್ಜಿ ಸಲ್ಲಿಕೆಯ ಅವಧಿ ವಿಸ್ತರಣೆ

ಬಳ್ಳಾರಿ,ಸೆ.24(ಕರ್ನಾಟಕ ವಾರ್ತೆ): ಕೂಡ್ಲಿಗಿ ತಾಲ್ಲೂಕಿನ ಚಿಕ್ಕಜೋಗಿಹಳ್ಳಿಯಲ್ಲಿರುವ ಜವಾಹರ ನವೋದಯ ವಿದ್ಯಾಲಯದ 6ನೇ ತರಗತಿಯ ಪ್ರವೇಶ ಪರೀಕ್ಷೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಕೊನೆಯ ದಿನವನ್ನು ಅಕ್ಟೋಬರ್ 07 ರ ವರೆಗೆ ವಿಸ್ತರಿಸಲಾಗಿದೆ. ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಯಲ್ಲಿ ಅಧ್ಯಯನ ಮಾಡುತ್ತಿರುವ ಸರಕಾರಿ ಹಾಗೂ ಸರಕಾರದಿಂದ ಅನುಮತಿ ಪಡೆದ ಶಾಲೆಯ ಮಕ್ಕಳು ಮಾತ್ರ ಅರ್ಜಿ ಸಲ್ಲಿಸಬೇಕು. ಪ್ರವೇಶ ಪರೀಕ್ಷೆಯು 2025ನೇ ಜ.01 ರಂದು ನಡೆಯಲಿದೆ. ಆಸಕ್ತರು ವೆಬ್‌ಸೈಟ್ https://navodaya.gov.in ಸಂಪರ್ಕಿಸಿ ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಬೇಕು. ಈಗಾಗಲೇ ಅರ್ಜಿ ಸಲ್ಲಿಸಿರುವಂತಹ ವಿದ್ಯಾರ್ಥಿಗಳು ತಮ್ಮ ಅರ್ಜಿಯಲ್ಲಿ ಲೋಪದೋಷಗಳಾಗಿದ್ದರೆ ಅ.08 ಹಾಗೂ 09 ರಂದು ತಿದ್ದುಪಡಿಗೆ ಅವಕಾಶವಿದ್ದು, ಲಿಂಗ (ಗಂಡು/ಹೆಣ್ಣು), ಜಾತಿ (ಇತರೆ/ಹಿಂದುಳಿದ ವರ್ಗ/ಪ.ಜಾ/ಪ.ಪಂ), ನಿವಾಸಿ (ಗ್ರಾಮೀಣ/ನಗರ), ದೈಹಿಕ ಅಂಗವಿಕಲತೆ ಮತ್ತು ಪರೀಕ್ಷಾ ಮಾಧ್ಯಮ ಈ ಲೋಪದೋಷಗಳನ್ನು ಮಾತ್ರ ಸರಿಪಡಿಸಿಕೊಳ್ಳಬಹುದಾಗಿದೆ ಎಂದು ಜವಾಹರ ನವೋದಯ ವಿದ್ಯಾಲಯದ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ----------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ