ಶುಕ್ರವಾರ, ಸೆಪ್ಟೆಂಬರ್ 6, 2024

ಕುರೇಕುಪ್ಪ; ಶೇ.60 ರಷ್ಟು ನಾಮಫಲಕಗಳಲ್ಲಿ ಕನ್ನಡ ಭಾಷೆ ಕಡ್ಡಾಯ

ಬಳ್ಳಾರಿ,ಸೆ.06(ಕರ್ನಾಟಕ ವಾರ್ತೆ): ಕುರೇಕುಪ್ಪ ಪುರಸಭೆ ವ್ಯಾಪ್ತಿಯಲ್ಲಿನ ಎಲ್ಲಾ ವಾಣಿಜ್ಯ ಸಂಸ್ಥೆಗಳು, ಕೈಗಾರಿಕೆಗಳು, ಹೋಟೆಲ್‌ಗಳು, ವ್ಯವಹಾರ ಉದ್ಯಮಗಳು, ಸರ್ಕಾರಿ ಅನುದಾನ ಮತ್ತು ಅನುದಾನ ರಹಿತ ಶಿಕ್ಷಣ ಸಂಸ್ಥೆಗಳು, ಸರ್ಕಾರಿ ಕಚೇರಿ, ಕಟ್ಟಡಗಳು, ಸೇರಿದಂತೆ ಸಾರ್ವಜನಿಕ ಹಾಗೂ ಖಾಸಗಿ ಕಟ್ಟಡಗಳು, ಹಾಗೂ ಅಂಗಡಿ ಮುಂಗಟ್ಟುಗಳ ನಾಮಫಲಕಗಳಲ್ಲಿ ಕಡ್ಡಾಯವಾಗಿ ಶೇ.60ರಷ್ಟು ಸ್ಥಳ ಕನ್ನಡಕ್ಕೆ ಮೀಸಲಿಡಬೇಕು. ಉಳಿದ ಶೇ.40 ಭಾಗದಲ್ಲಿ ಮಾತ್ರ ಇತರೆ ಭಾಷೆ ಅಳವಡಿಸಿಕೊಳ್ಳಬಹುದು ಎಂದು ಕುರೇಕುಪ್ಪ ಪುರಸಭೆಯ ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ. --------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ