ಸೋಮವಾರ, ಸೆಪ್ಟೆಂಬರ್ 9, 2024
ವ್ಯಕ್ತಿ ಕಾಣೆ; ಪ್ರಕರಣ ದಾಖಲು
ಬಳ್ಳಾರಿ,ಸೆ.09(ಕರ್ನಾಟಕ ವಾರ್ತೆ):
ತೋರಣಗಲ್ಲು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಸವರಾಜ.ಡಿ ಎನ್ನುವ 39 ವರ್ಷದ ವ್ಯಕ್ತಿ ಆ.26 ರಂದು ಬೆಳಿಗ್ಗೆ 11 ಗಂಟೆಗೆ ಅನಾರೋಗ್ಯದ ಕಾರಣ ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೂಂಡು ಬರುತ್ತೇನೆಂದು ಹೇಳಿ ಹೋಗಿದ್ದು, ಮತ್ತೆ ಮರಳಿ ಬಂದಿರುವುದಿಲ್ಲ ಈ ಕುರಿತು ತೋರಣಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕು ಎಂದು ಠಾಣಾಧಿಕಾರಿ ತಿಳಿಸಿದ್ದಾರೆ.
ವ್ಯಕ್ತಿಯ ಚಹರೆ: ಎತ್ತರ 5,5 ಅಡಿ, ಕೋಲು ಮುಖ, ಗೋಧಿ ಮೈಬಣ್ಣ, ತೆಳುವಾದ ಮೈಕಟ್ಟು, ತಲೆಯಲ್ಲಿ ಕಪ್ಪು ಬಣ್ಣದ ಕೂದಲು ಇದ್ದು, ಬಲಗೈ ಭುಜದ ಹತ್ತಿರ ಸೂರ್ಯನ ಮಧ್ಯದಲ್ಲಿ ‘ಓಂ’ ಎಂಬ ಅಚ್ಚೆ ಹಾಕಿಸಿಕೊಂಡಿರುತ್ತಾನೆ.
ಕಾಣೆಯಾದ ವ್ಯಕ್ತಿಯು ಕನ್ನಡ, ಹಿಂದಿ, ತೆಲುಗು ಭಾಷೆ ಮಾತನಾಡುತ್ತಾನೆ. ಮನೆಯಿಂದ ಹೋಗುವಾಗ ಬಿಳಿ ಬಣ್ಣದ ಚೆಕ್ಸ್ ಗೆರೆಗಳುಳ್ಳ ಶರ್ಟ್ ಮತ್ತು ಕಲರ್ ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ.
ಮೇಲ್ಕಂಡ ಚಹರೆ ಗುರುತುಗಳುಳ್ಳ ವ್ಯಕ್ತಿಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ತೋರಣಗಲ್ಲು ಪೊಲೀಸ್ ಠಾಣೆ ದೂ.08395-250100, ಮೊ.9480803062, ಸಂಡೂರು ಪೊಲೀಸ್ ಠಾಣೆ ಸಿಪಿಐ ದೂ.08395-260100, ಮೊ.9480803036, ತೋರಣಗಲ್ ಡಿವೈಎಸ್‌ಪಿ ಮೊ.9480803010, ಬಳ್ಳಾರಿ ಎಸ್‌ಪಿ ಕಚೇರಿ ದೂ.08392-258300 ಅಥವಾ ಬಳ್ಳಾರಿ ಕಂಟ್ರೋಲ್ ರೂಂ ದೂ.08392-258100 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
---------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ