ಸೋಮವಾರ, ಸೆಪ್ಟೆಂಬರ್ 9, 2024

ಯುವಕ ಕಾಣೆ; ಪತ್ತೆಗೆ ಮನವಿ

ಬಳ್ಳಾರಿ,ಸೆ.09(ಕರ್ನಾಟಕ ವಾರ್ತೆ): ತಾಲ್ಲೂಕಿನ ಕಪ್ಪಗಲ್ ಗ್ರಾಮದ ಕಾರ್ತಿಕ್ ಎನ್ನುವ ಯುವಕ ಸೆ.07 ರಂದು ಫೋಟೋ ಶೂಟ್‌ಗೆ ಹೋಗಿಬರುತ್ತೇನೆ ಎಂದು ಹೇಳಿಹೋದವ ಮರಳಿ ಮನೆಗೆ ಬಂದಿರುವುದಿಲ್ಲ. ಈ ಕುರಿತು ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪತ್ತೆಗೆ ಸಹಕರಿಸಬೇಕು ಎಂದು ಠಾಣಾಧಿಕಾರಿ ತಿಳಿಸಿದ್ದಾರೆ. ಚಹರೆ ಗುರುತು: ಎತ್ತರ 5 ಅಡಿ 2 ಇಂಚು, ಕೋಲು ಮುಖ, ಕಪ್ಪು ಮೈಬಣ್ಣ, ತೆಳುವಾದ ಮೈಕಟ್ಟು, ತಲೆಯಲ್ಲಿ ಕಪ್ಪು ಕೂದಲು, ಮೀಸೆ ಇರುತ್ತದೆ. ಬಲಗೈ ಮುಂಗೈ ಮೇಲೆ ಇಂಗ್ಲೀಷ್‌ನಲ್ಲಿ ‘ನಂದು’ ಅಂತ ಹಚ್ಚೆ ಹಾಕಿಸಿಕೊಂಡಿರುತ್ತಾನೆ. ಗದ್ದದ ಬಲಭಾಗದ ಹತ್ತಿರ ಒಂದು ಕಪ್ಪು ಮಚ್ಚೆ ಇರುತ್ತದೆ. ಕಾಣೆಯಾದ ಸಂದರ್ಭದಲ್ಲಿ ಕಪ್ಪು ಬಣ್ಣದ ಪ್ಯಾಂಟ್, ನೀಲಿ ಬಣ್ಣದ ಬಿಳಿ ಗೆರೆಗಳುಳ್ಳ ಪುಲ್ ಶರ್ಟ್ ಧರಿಸಿರುತ್ತಾನೆ. ಬ್ಯಾಗ್‌ನಲ್ಲಿ ಒಂದು ಜೊತೆ ಬಟ್ಟೆಗಳನ್ನು ಇಟ್ಟುಕೊಂಡು ಹೋಗಿರುತ್ತಾನೆ. ಮೇಲ್ಕಂಡ ಚಹರೆ ಗುರುತುಗಳುಳ್ಳ ಯುವಕನ ಬಗ್ಗೆ ಮಾಹಿತಿ ಸಿಕ್ಕಲ್ಲಿ ಬಳ್ಳಾರಿ ಪೊಲೀಸ್ ಕಂಟ್ರೋಲ್ ರೂಂ ದೂ.08392-258100, ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆ ದೂ.08392-276461, ಮೊ.9480803049 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. -----------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ