ಶುಕ್ರವಾರ, ಸೆಪ್ಟೆಂಬರ್ 6, 2024
ಅನಧಿಕೃತವಾಗಿ ವಿದ್ಯುತ್ ಬಳಸದಿರಲು ಸೂಚನೆ
ಬಳ್ಳಾರಿ,ಸೆ.06(ಕರ್ನಾಟಕ ವಾರ್ತೆ):
ಜೆಸ್ಕಾಂ ನಗರ ವ್ಯಾಪ್ತಿಗೆ ಬರುವ ವಿದ್ಯುತ್ ಗ್ರಾಹಕರು ಗಣೇಶ ಹಬ್ಬದ ಪ್ರಯುಕ್ತ, ಗಣೇಶ್ ವಿಗ್ರಹ ಕೂಡಿಸುವುದಕ್ಕೆ ಅನಧಿಕೃತವಾಗಿ ವಿದ್ಯುತ್ ಬಳಸದೆ, ಇಲಾಖೆಯ ನಿಯಮಾನುಸಾರ ಅನುಮೋದನೆ ಪಡೆದು ಅಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆದುಕೊಳ್ಳಬೇಕು ಜೆಸ್ಕಾಂನ ನಗರ ಉಪವಿಭಾಗದ 1 ಮತ್ತು 2 ರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಸೂಚನೆ ನೀಡಿದ್ದಾರೆ.
*ನಿಭಂದನೆಗಳು:*
ಸಾರ್ವಜನಿಕರು ಯಾವುದೇ ಹೆಚ್.ಟಿ ಅಥವಾ ಎಲ್.ಟಿ ವಿದ್ಯುತ್ ಜಾಲಗಳ ಅಡಿಯಲ್ಲಿ ಗಣೇಶ್ ಚತುರ್ಥಿಯ ಪೆಂಡಾಲ್ ನಿರ್ಮಿಸಬಾರದು. ವಿದ್ಯುತ್ ಕಂಬಗಳಿಗೆ ಅಥವಾ ಪರಿವರ್ತಕ ಕೇಂದ್ರದ ಕಂಬಗಳಿಗೆ ಶಾಮಿಯಾನ ಕಟ್ಟುವುದಾಗಲೀ ಅಥವಾ ಬ್ಯಾನರ್‌ಗಳನ್ನು ಕಟ್ಟಬಾರದು.
ನಿಯಮಗಳ ಉಲ್ಲಂಘÀನೆಯ ವಿದ್ಯುತ್‌ನಿಂದ ಆಗುವ ಅನಾಹುತಗಳಿಗೆ ಸಂಘಟನೆಯ ಮುಖ್ಯಸ್ತರನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಜೆಸ್ಕಾಂ ಇಲಾಖೆ ಪ್ರಕಟಣೆ ತಿಳಿಸಿದೆ.
---------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ