ಶನಿವಾರ, ಡಿಸೆಂಬರ್ 7, 2024

ಡಿ.12 ರಂದು ಪಿಂಚಣಿ ಅದಾಲತ್

ಬಳ್ಳಾರಿ,ಡಿ.07(ಕರ್ನಾಟಕ ವಾರ್ತೆ): ಕಲಬುರ್ಗಿ ವಿಭಾಗ ಮಟ್ಟದ ಎಲ್ಲಾ ಜಿಲ್ಲೆಗಳನ್ನು ಒಳಗೊಂಡು ಪಿಂಚಣಿದಾರರ ಕುಂದುಕೊರತೆ ಮತ್ತು ಅಹವಾಲುಗಳಿಗೆ ಸಂಬAಧಿಸಿದAತೆ ಬೆಂಗಳೂರಿನ ರಾಜ್ಯ ಪಿಂಚಣಿ ಪಾವತಿ ಮತ್ತು ನಿರ್ವಹಣೆ ಖಜಾನೆಯ ಅಪರ ನಿರ್ದೇಶಕರು ಮಹಾಲೇಖಪಾಲರ ನೇತೃತ್ವದಲ್ಲಿ ಡಿ.12 ರಂದು ಪಿಂಚಣಿ ಅದಾಲತ್ ಏರ್ಪಡಿಸಲಾಗಿದೆ. ಜಿಲ್ಲೆಯಲ್ಲಿ ವಾಸವಿರುವ ನಿವೃತ್ತಿ ಅಥವಾ ಕುಟುಂಬ ಪಿಂಚಣಿದಾರರ ಹಾಗೂ ಕುಂದುಕೊರತೆ ಹೋಂದಿರುವ ಪಿಂಚಣಿದಾರರ ದೂರುಗಳಿದ್ದಲ್ಲಿ ಅಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಡಳಿತ ಕಛೇರಿಯ ವಿಡಿಯೋ ಕಾನ್ಸರೆನ್ಸ್ ಹಾಲ್‌ನಲ್ಲಿ ನಡೆಯುವ ಪಿಂಚಣಿ ಅದಾಲತ್‌ನಲ್ಲಿ ಭಾಗವಹಿಸಿ ಅವಹಾಲು ಸಲ್ಲಿಸಬಹುದು ಎಂದು ಜಿಲ್ಲಾ ಖಜಾನೆ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ---------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ