ಸೋಮವಾರ, ಡಿಸೆಂಬರ್ 9, 2024
ಅನಾಮಧೇಯ ಮೃತ ದೇಹ ಪತ್ತೆ: ವಾರಸುದಾರರ ಪತ್ತೆಗೆ ಮನವಿ
ಬಳ್ಳಾರಿ,ಡಿ.09(ಕರ್ನಾಟಕ ವಾರ್ತೆ):
ತೋರಣಗಲ್ಲು ರೈಲ್ವೇ ನಿಲ್ದಾಣದ ಯಾರ್ಡ್ ಹತ್ತಿರ ರೈಲು ಹಳಿಯಲ್ಲಿ ಸುಮಾರು 35-40 ವರ್ಷದ ಅನಾಮಧೇಯ ಮೃತ ವ್ಯಕ್ತಿ ದೇಹವು ಡಿ.07 ರಂದು ಪತ್ತೆಯಾಗಿದ್ದು, ರೈಲ್ವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತನ ವಾರಸುದಾರರ ಬಗ್ಗೆ ಪತ್ತೆಗೆ ಸಹಕರಿಸಬೇಕೆಂದು ಪೊಲೀಸ್ ಉಪ-ನಿರೀಕ್ಷಕರು ಮನವಿ ಮಾಡಿದ್ಧಾರೆ.
ಚಹರೆ ಗುರುತು:
ಎತ್ತರ 5.5 ಅಡಿ, ದುಂಡು ಮುಖ, ಸಾಧಾರಣ ಕಪ್ಪು ಮೈಬಣ್ಣ, ಸಾಧಾರಣ ಮೈಕಟ್ಟು, ಉದ್ದ ಮೂಗು ಹೊಂದಿದ್ದು, ತಲೆಯಲ್ಲಿ ಸುಮಾರು 1 ಇಂಚು ಕಪ್ಪು ಮತ್ತು ಬಿಳಿ ಮಿಶ್ರಿತ ಕೂದಲು, ಮೀಸೆ ಮತ್ತು ಗಡ್ಡ ಬಿಟ್ಟಿರುತ್ತಾನೆ.
ಬಲಗೈಯಲ್ಲಿ ಬಿಳಿ ಮತ್ತು ನೀಲಿ ಬಣ್ಣದ ರಬ್ಬರ್ ಬ್ಯಾಂಡ್ ಎಡಗೈ ಉಂಗರು ಬೆರಳಲ್ಲಿ ತಾಮ್ರದ ಉಂಗರ ಇದ್ದು, ಎಡಗೈ ಮುಂಗೈ ಮುಂದೆ ಆಂಜನೇಯನ ಅಚ್ಚೆ ಗುರುತು ಮತ್ತು ಬಲಗೈ ಮುಂಗೈಗೆ ಮೇಲೆ ಚಿನ್ನು, ಯಲ್ಲಪ್ಪ, ಯಲ್ಲಕ್ಕ ಎಂದು ಕನ್ನಡದಲ್ಲಿ ಅಚ್ಚೆ ಗುರುತು ಹಾಕಿಸಿಕೊಂಡಿರುತ್ತಾನೆ.
ಮೃತನ ಮೈಮೇಲೆ ಕೆಂಪು ಬಣ್ಣದ ಕಪ್ಪು ಗೆರೆಯುಳ್ಳ ತುಂಬು ತೋಳಿನ ತುಂಡಾದ ರಕ್ತದ ರೆಡ್ಮೆಡ್ ಶರ್ಟ್, ಸಿಮೆಂಟ್ ಕಲರ್ ನೈಟ್ ಪ್ಯಾಂಟ್, ಕಪ್ಪು ಬಣ್ಣದ ಬಿಳಿ ಚುಕ್ಕೆಹುಳ್ಳ ಪಟಾ ಪಟಿ ಚಡ್ಡಿ ಧರಿಸಿರುತ್ತಾನೆ.
ಮೃತನ ವಾರಸುದಾರರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಬಳ್ಳಾರಿ ರೈಲ್ವೇ ಪೊಲೀಸ್ ಠಾಣೆ ಉಪ ನಿರೀಕ್ಷಕ ಮೊ.9480802131, ರಾಯಚೂರು ರೈಲ್ವೆ ಪೊಲೀಸ್ ಠಾಣೆ ವೃತ್ತ ನಿರೀಕ್ಷಕರ ಮೊ.9480800471 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
----------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ