ಶುಕ್ರವಾರ, ಆಗಸ್ಟ್ 1, 2025
ಸಂಡೂರು: ನಾರಿಹಳ್ಳ ಜಲಾಶಯದಿಂದ 0.244 ಟಿಎಂಸಿ ನೀರು ಹೊರಗಡೆ
ಬಳ್ಳಾರಿ,ಆ.01(ಕರ್ನಾಟಕ ವಾರ್ತೆ):
ಸಂಡೂರು ತಾಲ್ಲೂಕಿನ ನಾರಿಹಳ್ಳ ಜಲಾಶಯದ ಕ್ರಸ್ಟ್ ಗೇಟ್ ನ ಸಿಲ್ ಲೆವೆಲ್ ಮಟ್ಟ 536.219 ಮೀ(ಒಟ್ಟು 0.409 ಟಿಎಂಸಿ ಸಂಗ್ರಹ) ಇದ್ದು, ನಿವ್ವಳ ಸಂಗ್ರಹಣೆ 0.336 ಟಿಎಂಸಿ ಇದೆ. ಈಗಾಗಲೇ ಜಲಾಶಯದಲ್ಲಿ ನೀರಿನ ಮಟ್ಟ 540.76 ಮೀ(ಒಟ್ಟು 0.653 ಟಿಎಂಸಿ ಸಂಗ್ರಹ) ಮತ್ತು ನಿವ್ವಳ ಸಂಗ್ರಹಣೆ 0.580 ಟಿಎಂಸಿ ಇದ್ದು, ಪ್ರಸ್ತಕ ಸಾಲಿನ ಮುಂಗಾರಿನ ಮುಂಚಿತವಾಗಿ ದುರಸ್ಥಿ ಕಾಮಗಾರಿ ಕೈಗೊಳ್ಳಲು ಹಾಗೂ ಕ್ರಸ್ಟ್ ಗೇಟ್ ನ ಸಿಲ್ ಲೆವೆಲ್ ನ ವರೆಗೆ ನೀರನ್ನು ಹೊರತೆಗೆಯಬೇಕಾಗಿರುವುದರಿಂದ 0.244 ಟಿಎಂಸಿ ನೀರನ್ನು ಸ್ಪಿಲ್‌ವೇ ಮೂಲಕ ಹೊರಬಿಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್ ಅವರು ತಿಳಿಸಿದ್ದಾರೆ.
--------------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ