ಮಂಗಳವಾರ, ಆಗಸ್ಟ್ 12, 2025
ಬಿಎಸ್‌ಎನ್‌ಎಲ್: “ಫ್ರೀಡಂ ಪ್ಲಾನ್” ಸೇವೆ ಪಡೆದುಕೊಳ್ಳಿ
ಬಳ್ಳಾರಿ,ಆ.12(ಕರ್ನಾಟಕ ವಾರ್ತೆ):
ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ಬಳ್ಳಾರಿಯ ಸಿಜಿಎಂ, ಪಿಜಿಎಂ, ಡಿಜಿಎಂ ಮತ್ತು ಮಾರ್ಕೆಟಿಂಗ್ ವತಿಯಿಂದ ಸ್ವಾತಂತ್ರö್ಯ ದಿನಾಚರಣೆ ಅಂಗವಾಗಿ ಆಗಸ್ಟ್-2025 ತಿಂಗಳಿಗೆ ಸೀಮಿತ ಅವಧಿಗೆ ಮಾತ್ರ “ಫ್ರೀಡಂ ಪ್ಲಾನ್” ಮೂಲಕ ಗ್ರಾಹಕರು ರೂ.1/- ಗೆ 4ಜಿ ಸೇವೆ ಪಡೆಯಬಹುದು ಎಂದು ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ಬಳ್ಳಾರಿಯ ಉಪಪ್ರಧಾನ ವ್ಯವಸ್ಥಾಪಕರು ತಿಳಿಸಿದ್ದಾರೆ.
ಈ ಪ್ಲಾನ್ ನಲ್ಲಿ ಅನಿಯಮಿತ ಧ್ವನಿ ಕರೆಗಳು, ದಿನಕ್ಕೆ 2ಜಿಬಿ ಡೇಟಾ ಮತ್ತು 100 ಎಸ್‌ಎಂಎಸ್, ಉಚಿತ ಸಿಮ್ ಪಡೆಯಬಹುದು(30 ದಿನಗಳಿಗೆ ಮಾತ್ರ).
ಈ ಸೌಲಭ್ಯವನ್ನು ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಎಲ್ಲಾ ಗ್ರಾಹಕ ಸೇವಾ ಕೇಂದ್ರಗಳಲ್ಲಿ ಪಡೆಯಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-------------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ