ಗುರುವಾರ, ಆಗಸ್ಟ್ 7, 2025

ಕುರೇಕುಪ್ಪ: ವಿವಿಧೆಡೆ ಅಕಸ್ಮಿಕ ಪ್ಲಾಸ್ಟಿಕ್ ದಾಳಿ, ದಂಡ

ಬಳ್ಳಾರಿ,ಆ.07(ಕರ್ನಾಟಕ ವಾರ್ತೆ): ಕುರೇಕುಪ್ಪ ಪುರಸಭೆ ವ್ಯಾಪ್ತಿಯಲ್ಲಿ ಏಕಬಳಕೆಯ ಪ್ಲಾಸ್ಟಿಕ್ ನಿಷೇಧ ಕುರಿತಂತೆ ಪರಿಣಾಮಕಾರಿಯಾಗಿ ಜಾರಿಗೆ ತರಲು ಪಟ್ಟಣದ ವಿವಿಧ ಒಟ್ಟು 18 ಅಂಗಡಿಗಳ ಮೇಲೆ ಪುರಸಭೆಯ ಅಧಿಕಾರಿ, ಸಿಬ್ಬಂದಿ ಬುಧವಾರ ಆಕಸ್ಮಿಕ ದಾಳಿ ನಡೆಸಿ ಪ್ಲಾಸ್ಟಿಕ್ ವಶಪಡಿಸಿಕೊಂಡು ದಂಡ ವಿಧಿಸಿದರು. ದಾಳಿಯ ಸಂದರ್ಭದಲ್ಲಿ 8 ಕಿ.ಗ್ರಾಂ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಳ್ಳಲಾಯಿತು. ಪ್ಲಾಸ್ಟಿಕ್ ನಿಷೇಧ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ವ್ಯಾಪಾರಿಗಳ ಮೇಲೆ 1,000 ರೂ. ದಂಡ ವಿಧಿಸಲಾಯಿತು. ದಾಳಿಯ ಸಂದರ್ಭದಲ್ಲಿ ಪುರಸಭೆ ಆರೋಗ್ಯ ಶಾಖೆಯ ಸಿಬ್ಬಂದಿ ವರ್ಗ ಹಾಗೂ ಕಮ್ಯೂನಿಟಿ ಮೋಬಿಲೈಜರ್ ಹಾಜರಿದ್ದರು. -------------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ