ಶುಕ್ರವಾರ, ಆಗಸ್ಟ್ 8, 2025
ನಷ್ಟ ಪರಿಹಾರ ಕೋರಿ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಜವಾಬ್ದಾರಿ ಅರಿಯಲು ತ್ರೀಕೋನ ಚಾಟಿ ಬೀಸಿದ ಆಯೋಗ
ಬಳ್ಳಾರಿ,ಆ.08(ಕರ್ನಾಟಕ ವಾರ್ತೆ):
ಕಾರು ಅಪಘಾತ ಪ್ರಕರಣಕ್ಕೆ ಸಂಬAಧಿಸಿದAತೆ ಮಾಲೀಕನಿಗೆ, ಕಾರು ಮಾರಾಟ ಕಂಪನಿ, ಇನ್ಸೂರೆನ್ಸ್ ಕಂಪನಿ ಸೇರಿ ಮೂವರನ್ನು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ತರಾಟೆಗೆ ತೆಗೆದುಕೊಂಡು ಕಾರು ಮಾಲೀಕನಿಗೆ 15 ಸಾವಿರ ರೂ. ಪರಿಹಾರ ಒದಗಿಸುವಂತೆ ಗುರುವಾರ ಆದೇಶ ಹೊರಡಿಸಿದೆ.
ನಗರದ ಪಿಡಬ್ಲ್ಯುಡಿ ಗುತ್ತಿಗೆದಾರ ಕೆ.ಖಲೀಲ ಉರ್ಫ ರೆಹಮನ್ ಎಂಬುವರು ಬಳ್ಳಾರಿಯ ಕೆಪಿಎಫ್ ಪ್ರವೇಟ್ ಲಿಮಿಟೆಡ್ ನಿಂದ ಕಾರ್ ಖರೀದಿ ಮಾಡಿದ್ದು, ನ್ಯಾಷನಲ್ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್ ನಿಂದ ವಾಹನದ ಪಾಲಿಸಿ ಮಾಡಿಸಿದ್ದರು. 2023 ರ ಆಗಸ್ಟ್ 19 ರಂದು ವಾಹನವು ರಾಂಪುರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಅಪಘಾತಕ್ಕೀಡಾಗಿ ಅದರ ನಷ್ಟ ಪರಿಹಾರ ರೂ.1,40,000 ಮತ್ತು ಮಾನಸಿಕ ವೇದನೆಗೆ ರೂ.25,000 ಪರಿಹಾರವನ್ನು ಕೊಡಿಸಲು ಕೋರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ಕಾರು ಮಾಲೀಕ ದೂರು ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಎನ್.ತಿಪ್ಪೇಸ್ವಾಮಿ ಹಾಗೂ ಮಾರ್ಲಾ ಶಶಿಕಲಾ ಅವರು ಉಭಯ ಪಕ್ಷಕಾರರ ದಾಖಲಾತಿ ಹಾಗೂ ಸಾಕ್ಷಿ ಹೇಳಿಕೆಗಳನ್ನು ಪರಿಶೀಲಿಸಿ ವಾದ-ವಿವಾದಗಳನ್ನು ಆಲಿಸಿದರು. ನಂತರ ಪ್ರಕರಣದಲ್ಲಿ ವಾಹನ ವಿತರಕರು ಕಾರ್ ಖರೀದಿಸಿದ ಮಾಲೀಕರಿಗೆ ಖರೀದಿ ಸಮಯದಲ್ಲಿ ವಾಹನವು ಹಳದಿ ಬೋರ್ಡ್ ಹೊಂದಿರುವ ಕಾರಣ ಪರ್ಮಿಟ್ ಪಡೆಯುವುದು ಅವಶ್ಯವೆಂದು ತಿಳಿಸದೇ ಇರುವುದು ಸೇವಾ ನಿರ್ಲಕ್ಷö್ಯವಾಗಿದೆ. ಇದರೊಂದಿಗೆ ಕಾರು ಖರೀದಿ ಮಾಡಿದ ಮಾಲೀಕ 8 ತಿಂಗಳವರೆಗೆ ಹಳದಿ ಬೋರ್ಡ್ ಪರ್ಮಿಟ್‌ನ್ನು ಪಡೆಯದೇ ವಾಹನವನ್ನು ಬಳಕೆ ಮಾಡಿಕೊಂಡಿದ್ದು ಸಹ ಕಾನೂನನ್ನು ಉಲ್ಲಂಘಿಸಿ ನಿರ್ಲಕ್ಷö್ಯ ತೋರಿದ್ದಾರೆ.
ಇನ್ಸೂರೆನ್ಸ್ ಕಂಪನಿಯು ಸಹ ಅಪಘಾತಗೊಳಗಾದ ವಾಹನಕ್ಕೆ ಹಳದಿ ಬೋರ್ಡ್ ಪರ್ಮಿಟ್ ಇಲ್ಲದೇ ಇರುವ ಬಗ್ಗೆ ದಾಖಲೆಗಳನ್ನು ಪರಿಶೀಲಿಸದೇ ಪಾಲಿಸಿ ವಿತರಿಸಿದ್ದು ಸಹ ಸೇವಾ ನಿರ್ಲಕ್ಷö್ಯ ಆಗಿದೆ. ಹಾಗಾಗಿ ವಾಹನ ಅಪಘಾತದ ನಷ್ಟ ಪರಿಹಾರ ಮೊತ್ತ 1,40,000 ರೂ.ಗಳಲ್ಲಿ, 70,000 ರೂ.ಗಳನ್ನು ದೂರುದಾರರು ಕಾರು ಮಾರಾಟ ಕಂಪನಿಗೆ ಪಾವತಿಸಬೇಕು. ಉಳಿದ 70,000 ರೂ.ಗಳನ್ನು ವಾಹನ ವಿತರಕರು ಸ್ವತಃ ಭರಿಸಿಕೊಂಡು ವಾಹನ ರಿಪೇರಿ ನಂತರ ವಾಹನವನ್ನು ಮಾಲೀಕರಿಗೆ ನೀಡಬೇಕು.
ಇನ್ಸೂರೆನ್ಸ್ ಕಂಪನಿಯು ರೂ.10,000 ಪರಿಹಾರ, ಸೇವಾ ನಿರ್ಲಕ್ಷö್ಯತೆಗಾಗಿ ರೂ.5,000 ಗಳನ್ನು ದೂರಿನ ವೆಚ್ಚವಾಗಿ ಅಪಘಾತಕ್ಕೀಡಾದ ಕಾರು ಮಾಲೀಕನಿಗೆ ಆದೇಶವಾದ 45 ದಿನಗಳೊಳಗೆ ಪಾವತಿಸಬೇಕು ಎಂದು ಆದೇಶಿಸಿದ್ದಾರೆ.
--------------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ