ಬುಧವಾರ, ಸೆಪ್ಟೆಂಬರ್ 11, 2024

ರಾಷ್ಟಿçÃಯ ಅರಣ್ಯ ಹುತಾತ್ಮರ ದಿನಾಚರಣೆ; ಅರಣ್ಯ ಹುತಾತ್ಮರಿಗೆ ಗೌರವ ಸಮರ್ಪಣೆ | ಪ್ರಕೃತಿ ರಕ್ಷಣೆ ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯ: ನ್ಯಾ.ಕೆ.ಜಿ ಶಾಂತಿ

ಬಳ್ಳಾರಿ,ಸೆ.11(ಕರ್ನಾಟಕ ವಾರ್ತೆ): ಪ್ರಕೃತಿಯಿಂದ ಸ್ವಚ್ಚಂದ ಗಾಳಿ, ಉತ್ತಮ ಮಳೆ-ಬೆಳೆ ದೊರೆಯುತ್ತಲಿದ್ದು, ಅರಣ್ಯ ಅಥವಾ ಪ್ರಕೃತಿ ಸಂರಕ್ಷಣೆ ಕೇವಲ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಕೆಲಸ ಮಾತ್ರವಲ್ಲದೇ ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಿದೆ ಎಂದು ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆದ ನ್ಯಾ.ಕೆ.ಜಿ ಶಾಂತಿ ಅವರು ಹೇಳಿದರು. ಅರಣ್ಯ ಇಲಾಖೆ ಬಳ್ಳಾರಿ ವೃತ್ತ ಹಾಗೂ ಬಳ್ಳಾರಿ ವಿಭಾಗ ವತಿಯಿಂದ ನಗರದ ರೇಡಿಯೋ ಪಾರ್ಕ್ನ ಐಟಿಐ ಕಾಲೇಜು ಎದುರುಗಡೆಯ ಕಿರು ಮೃಗಾಲಯ ಆವರಣದ ಬಳ್ಳಾರಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ರಾಷ್ಟಿçÃಯ ಅರಣ್ಯ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅರಣ್ಯ ಹುತಾತ್ಮರ ಸ್ಮಾರಕಕ್ಕೆ ಹೂಗುಚ್ಛ ಸಮರ್ಪಿಸಿ ಅವರು ಮಾತನಾಡಿದರು. ಅರಣ್ಯ ರಕ್ಷಣೆಗೆ ಅನೇಕ ಮಹನೀಯರು ತಮ್ಮ ಜೀವದ ಹಂಗು ತೊರೆದು ಪ್ರಕೃತಿಯ ಉಳಿವಿಗಾಗಿ ಶ್ರಮಿಸುತ್ತಿದ್ದಾರೆ. ಕೆಲವರು ಪ್ರಾಣ ತ್ಯಾಗ ಬಲಿದಾನದಿಂದ ಹುತಾತ್ಮರಾಗಿದ್ದು, ಅಂತಹ ಹುತಾತ್ಮರನ್ನು ಪ್ರತಿದಿನ ಸ್ಮರಿಸಸಿಕೊಂಡು ಕಾಡು-ನಾಡು ಸಂರಕ್ಷಿಸುವ ಸಂಕಲ್ಪ ಹೊಂದಬೇಕು ಎಂದು ತಿಳಿಸಿದರು. ಸಮಾಜ-ಅರಣ್ಯ ನಡುವಿನ ಸಂಘರ್ಷದಲ್ಲಿ ಮನುಷ್ಯನ ಸ್ವಾರ್ಥ ಇರುತ್ತದೆ ಹೊರತು, ಪ್ರಾಣಿ-ಪಕ್ಷಿಗಳ ಸ್ವಾರ್ಥ ಇರುವುದಿಲ್ಲ. ಮನುಷ್ಯರು ಅರಣ್ಯ ಪ್ರದೇಶಗಳನ್ನು ಕಾನೂನು ಬಾಹಿರವಾಗಿ ಅಕ್ರಮಿಸುತ್ತಾ ಅರಣ್ಯ ಕಬಳಿಸುವುದು, ಕಾಡು-ಪ್ರಾಣಿ ಸಂಕುಲಗಳನ್ನು ನಾಶಪಡಿಸುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ ಎಂದರು. ನಮ್ಮ ದೇಶ, ನಮ್ಮ ಅರಣ್ಯ, ನಮ್ಮ ಪ್ರಕೃತಿ ರಕ್ಷಣೆಗೆ ನಮ್ಮ ಕೊಡುಗೆ ಕುರಿತು ವಿಚಾರ ಮಾಡಬೇಕು. ಪ್ರಸ್ತುತ ದಿನಮಾನಗಳಲ್ಲಿ ಅರಣ್ಯ ಇಲಾಖೆಯ ಸಹಯೋಗದಲ್ಲಿ ಏಕ್ ಮಾ ಏಕ್ ಪೇಡ್ (ತಾಯಿಯ ಹೆಸರಲ್ಲಿ ಒಂದು ಗಿಡ) ಕಾರ್ಯಕ್ರಮವು ಒಳ್ಳೆಯ ಉದ್ದೇಶದಿಂದ ಕೂಡಿದ್ದು, ಸಾರ್ವಜನಿಕರಲ್ಲಿ ಪರಿಸರ ಜವಾಬ್ದಾರಿಯನ್ನು ಜ್ಞಾಪಿಸಲು ಸಹಕಾರಿಯಾಗಿದೆ ಎಂದು ನ್ಯಾಯಾಧೀಶರು ಶ್ಲಾಘಿಸಿದರು. ಪ್ರಕೃತಿ ಮಡಿಲಲ್ಲಿ ಔಷಧ ಸಸ್ಯವನ ಸೇರಿದಂತೆ ವಿವಿಧ ನೈಸರ್ಗಿಕ ಸಂಪನ್ಮೂಲ ದೊರೆಯುತ್ತಲಿದ್ದು, ವೈವಿದ್ಯಮಯ ಪ್ರಾಣಿ ಸಂಕುಲ, ವಿವಿಧ ಪ್ರಭೇದದ ಪಕ್ಷಿಗಳ ಜೀವಿಸುತ್ತಲಿವೆ. ಪ್ರಕೃತಿಯನ್ನು ನಮ್ಮ ಮಕ್ಕಳಂತೆ ಪೋಷಿಸಿ ಬೆಳೆಸಬೇಕಾಗಿದ್ದು, ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡಬೇಕು. ಪ್ರಕೃತಿಯ ನಾಶ ಮನುಕುಲದ ನಾಶ ಎಂದು ಮನದಟ್ಟಣೆ ಮಾಡಿದರು. ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಮಾತನಾಡಿ, ಅರಣ್ಯ ಉಳಿವಿಗಾಗಿ ಪ್ರಾಣ ತ್ಯಾಗಮಾಡಿದ ಹುತಾತ್ಮರ ಶ್ರಮವನ್ನು ಸ್ಮರಿಸುವುದು ಅಗತ್ಯವಾಗಿದ್ದು, ಅರಣ್ಯ ರಕ್ಷಣೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕಿದೆ ಎಂದು ಹೇಳಿದರು. ಅರಣ್ಯ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಯವರು ನಮ್ಮ ದೇಶ, ರಾಜ್ಯದ ಅರಣ್ಯ ಉಳಿವಿಗೆಗಾಗಿ ಮಹತ್ತರ ಕಾರ್ಯಚರಣೆ ಮಾಡುತ್ತಿದ್ದು, ನಮ್ಮ ಸುತ್ತಮುತ್ತಲಿನ ದಟ್ಟವಾದ ಅರಣ್ಯ ಪ್ರದೇಶದ ರಕ್ಷಣೆಯಲ್ಲಿ ಅವರ ಪಾತ್ರ ಬಹಳಮುಖ್ಯವಾಗಿದೆ ಎಂದರು. ಅರಣ್ಯ ಇಲಾಖೆಯ ಬಳ್ಳಾರಿ ವಿಭಾಗದ ಉಪ ಸಂರಕ್ಷಣಾಧಿಕಾರಿ ಸಂದೀಪ್ ಹೆಚ್.ಸೂರ್ಯವಂಶಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕೇಂದ್ರ ಸರ್ಕಾರ ಅರಣ್ಯ ಮತ್ತು ಹವಮಾನ ಇಲಾಖೆಯು ಸೆ.11 ರಂದು ರಾಷ್ಟಿçÃಯ ಅರಣ್ಯ ಹುತಾತ್ಮರ ದಿನಾಚರಣೆ ಆಚರಿಸಲು ಘೋಷಿಸಲಾಗಿದ್ದು, ಈ ದಿನ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಯವರು ದೇಶದ ಅರಣ್ಯ ಮತ್ತು ವನ್ಯ ಜೀವಿಗಳ ಸಂರಕ್ಷಣೆಗೆ ಮಾಡಿದ ತ್ಯಾಗ ಬಲಿದಾನಗಳನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎನ್ನುತ್ತಾ, ರಾಷ್ಟಿçÃಯ ಅರಣ್ಯ ಹುತಾತ್ಮರ ದಿನಾಚರಣೆಯ ಪಕ್ಷಿನೋಟವನ್ನು ವಿವರಿಸಿದರು. ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ ಮಾತನಾಡಿ, ಪ್ರಕೃತಿಯ ವನ್ಯ ಜೀವಿ ಸಂಪತ್ತಿನ ಮಹತ್ವನ್ನು ಅರಿತುಕೊಂಡು, ಜೀವ ವೈವಿದ್ಯತೆ ಉಳಿವಿಗೆ ಅರಣ್ಯವನ್ನು ಸಂರಕ್ಷಿಸಬೇಕು ಎಂದು ತಿಳಿಸಿದರು. ವೃಕ್ಷೆÆÃ ರಕ್ಷಿತ ರಕ್ಷಿತಃ ಎನ್ನುವ ನಾಣ್ಣುಡಿಯಂತೆ ಗಿಡ-ಮರಗಳನ್ನು ರಕ್ಷಿಸಿದರೆ ಅವುಗಳು ನಮ್ಮನ್ನು ರಕ್ಷಿಸುತ್ತವೆ. ಜನಸಾಮಾನ್ಯರಿಗೆ ಪ್ರಕೃತಿ ರಕ್ಷಣೆಯ ಕುರಿತು ಅರಿವು ಮೂಡಿಸಬೇಕಾಗಿದೆ ಎಂದರು. ಇದೇ ವೇಳೆ ರಾಷ್ಟಿçÃಯ ಅರಣ್ಯ ಹುತಾತ್ಮರ ದಿನಾಚರಣೆ ಅಂಗವಾಗಿ ಹುತಾತ್ಮರ ಸ್ಮಾರಕದಲ್ಲಿನ ಹುತಾತ್ಮರ ಭಾವಚಿತ್ರಕ್ಕೆ ಸಕಲ ಗೌರವದೊಂದಿಗೆ ಹೂಗುಚ್ಛ ಸಮರ್ಪಣೆಯೊಂದಿಗೆ ನಮನ ಸಲ್ಲಿಸಲಾಯಿತು. ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ವತಿಯಿಂದ ಫೈರ್ ಪಾರ್ಟಿ, ಗಾಳಿಯಲ್ಲಿ ಮೂರು ಸುತ್ತು ಕುಶಾಲತೋಪು ಹಾರಿಸಿ ಮೌನಾಚರಣೆ ನಡೆಸಿ, ಬ್ಯಾಂಡ್ ಮುಖಾಂತರ ರಾಷ್ಟçಗೀತೆ ಹಾಡಿ, ಅರಣ್ಯ ಹುತಾತ್ಮರಿಗೆ ಸಕಲ ಗೌರವ ವಂದನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ (ಕಾರ್ಯಯೋಜನೆ) ಮಹಮ್ಮದ್ ಫಯಾಜಿದ್ದೀನ್, ಸಾಮಾಜಿಕ ಅರಣ್ಯ ವಿಭಾಗದ ಮಾರ್ಕಂಡೇಯ, ಸಂಶೋಧನಾ ಘಟಕದ ಸಂತೋಷ್ ನಾಯ್ಕ್.ಆರ್., ತಾಂತ್ರಿಕ ಸಹಾಯಕರಾದ ಸುರೇಶ್ ತೇಲಿ, ಅರಣ್ಯ ಸಂಚಾರಿದಳದ ರವಿ ಜೆ.ಜಿ., ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶರಣ್ ಕುಮಾರ್, ವಲಯ ಅರಣ್ಯಾಧಿಕಾರಿ ಗಿರೀಶ್ ಕುಮಾರ್.ಡಿ.ಕೆ., ಸೇರಿದಂತೆ ಅರಣ್ಯ ಇಲಾಖೆ, ಪೊಲೀಸ್ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಇತರರು ಉಪಸ್ಥಿತರಿದ್ದರು. ---------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ