ಗುರುವಾರ, ಸೆಪ್ಟೆಂಬರ್ 12, 2024
ಅಂತರಾಷ್ಟಿçÃಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಮಾನವ ಸರಪಳಿ; ಯಶಸ್ವಿಗೊಳಿಸಲು ಕರೆ
ಬಳ್ಳಾರಿ,ಸೆ.12(ಕರ್ನಾಟಕ ವಾರ್ತೆ):
ಅಂತರಾಷ್ಟಿçÃಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಸೆ.15 ರಂದು ನಡೆಯುವ ಮಾನವ ಸರಪಳಿ ಆಯೋಜನೆಗೆ ಜಿಲ್ಲಾಡಳಿತವು ಅದ್ದೂರಿಯಾಗಿ ಆಚರಿಸಲು ಎಲ್ಲಾ ಅಗತ್ಯ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಎಲ್ಲಾ ಸಾರ್ವಜನಿಕರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ವಿವಿಧ ಸಮುದಾಯಗಳ ಮುಖಂಡರು, ಎನ್.ಜಿ.ಓ.ಗಳು, ಸ್ತಿçà ಶಕ್ತಿ ಸ್ವಸಹಾಯ ಸಂಘಗಳು, ರೋಟರಿ ಸಂಸ್ಥೆಗಳ ಮುಖಂಡರು ಸೇರಿದಂತೆ ಪ್ರತಿಯೊಬ್ಬ ನಾಗರಿಕರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ ಅವರು ಮನವಿ ಮಾಡಿದ್ದಾರೆ.
*ಮಾನವ ಸರಪಳಿಯ ರೂಟ್ ಮ್ಯಾಪ್:*
ವಿಜಯನಗರ ಜಿಲ್ಲೆಯ ಗಡಿಭಾಗದ ಭುವನಹಳ್ಳಿಯಿಂದ ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ಕುರೆಕುಪ್ಪ ಗ್ರಾಮದಿಂದ ಪ್ರಾರಂಭಗೊAಡು, ವಡ್ಡು-ಬನ್ನಿಹಟ್ಟಿ-ಲಿಂಗದಹಳ್ಳಿ-ಉಬ್ಬಳಗAಡಿ-ಯು.ರಾಜಾಪುರ-ಯು.ಮಲ್ಲಾಪುರ ಮುಖಾಂತರ 45 ಕಿ.ಮೀ. ಮಾನವ ಸರಪಳಿ ನಿರ್ಮಾಣಗೊಂಡು, ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ಗಡಿ ಗ್ರಾಮಗಳಾದ ಸಂತೇಗುಡ್ಡ-ಮೇಲಿನಕಣಿವೆಗೆ ತಲುಪುತ್ತದೆ.
*ಶಿಸ್ತುಬದ್ಧವಾಗಿ ಆಯೋಜನೆ:*
ಅಂತರಾಷ್ಟಿçÃಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ ವತಿಯಿಂದ ಕುರೆಕುಪ್ಪ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ವೇದಿಕೆ ಕಾರ್ಯಕ್ರಮ ಹಾಗೂ ಮಾನವ ಸರಪಳಿ ಕಾರ್ಯಕ್ರಮ ಪ್ರಾರಂಭ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಮಾನವ ಸರಪಳಿ ಮಾರ್ಗ ಮಧ್ಯದಲ್ಲಿ ಪ್ರತಿ 100 ಮೀಟರ್‌ಗೆ ಒಬ್ಬರಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಶಾ ಕಾರ್ಯಕರ್ತೆ, ಅಂಗನವಾಡಿ ಶಿಕ್ಷಕಿ ಮತ್ತು ಎಡಬ್ಲೂö್ಯಡಬ್ಲೂö್ಯ ನೇಮಕ ಮಾಡಲಾಗಿದೆ.
ಪ್ರತಿ 1 ಕಿಮೀ ಗೆ ಒಬ್ಬರಂತೆ ಸಿಎಂಸಿ, ಟಿಎಂಸಿ, ತೋಟಗಾರಿಕೆ, ಎಂಡಿಆರ್‌ಎಸ್‌ನ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗ ಮತ್ತು ಪ್ರತಿ 2.ಕಿಮೀ ಗೆ ಒಬ್ಬರಂತೆ ಬಿಸಿಎಂ, ಎಸ್‌ಟಿ, ಎಸ್‌ಬ್ಲೂಡಿ, ಪಿಡಬ್ಲೂಡಿ, ಕಾರ್ಮಿಕ ಮತ್ತು ಅರಣ್ಯ ಇಲಾಖೆ, ಸಿಎಂಸಿ, ಟಿಎಂಸಿಯ ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ಮತ್ತು ಸಿಬ್ಬಂದಿ ವರ್ಗದವರನ್ನು ನೇಮಿಸಲಾಗಿದೆ.
*ವ್ಯಾಪಕ ಪ್ರಚಾರ:*
ಅಂತರಾಷ್ಟಿçÃಯ ಪ್ರಜಾ ಪ್ರಭುತ್ವ ದಿನಾಚರಣೆ ಕುರಿತು ಜಿಲ್ಲೆಯಾದ್ಯಂತ ವ್ಯಾಪಕ ಪ್ರಚಾರ ಕೈಗೊಳ್ಳಲಾಗಿದ್ದು, ಬಸ್‌ಗಳು ಮತ್ತು ಮೈನಿಂಗ್ ವಾಹನಗಳು ಹಾಗೂ ಇನ್ನಿತರೆ ಕೈಗಾರಿಕೆ ಮತ್ತು ವಾಣಿಜ್ಯ ಸಂಸ್ಥೆಗಳ ವಾಹನಗಳಿಗೆ 1000 ಪೋಸ್ಟರ್‌ಗಳನ್ನು ಅಳವಡಿಸಲಾಗಿದೆ ಹಾಗೂ ಜಿಲ್ಲಾ ಹಾಲು ಉತ್ಪನ್ನ ಘಟಕ ಕೆ.ಎಂ.ಎಫ್ ವತಿಯಿಂದ ಸರಬರಾಜು ಮಾಡಲಾಗುತ್ತಿರುವ ಉತ್ಪನ್ನಗಳ ಪ್ಯಾಕೇಟ್‌ಗಳ ಮೇಲೆ ಪ್ರತಿದಿನ “ಸೆ.15 ರಂದು ಅಂತರರಾಷ್ಟಿçÃಯ ಪ್ರಜಾಪ್ರಭುತ್ವ ದಿನ ಮಾನವ ಸರಪಳಿ ನಿರ್ಮಿಸೋಣ” ಎಂಬ ಘೋಷ ವಾಕ್ಯ ಪ್ರಕಟಿಸಲಾಗುತ್ತಿದೆ.
ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮದ ಮಾರ್ಗ ಮಧ್ಯದಲ್ಲಿ ಫ್ಲೆಕ್ಸ್ ಮತ್ತು ಬ್ಯಾನ್‌ರ್‌ಗಳನ್ನು ಅಳವಡಿಸಲಾಗುತ್ತದೆ.
*ಭದ್ರತೆ ಮತ್ತು ಸುರಕ್ಷತೆಗೆ ಆದ್ಯತೆ:*
ಕಾರ್ಯಕ್ರಮದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಮತ್ತು ಮಕ್ಕಳ ಹಿತದೃಷ್ಟಿಯಿಂದ, ಆರೋಗ್ಯ, ಭದ್ರತೆ, ಇನ್ನಿತರೆ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಮೇಲುಸ್ತುವಾರಿಗಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನಿಯೋಜಿಸಲಾಗಿದೆ. ಮಾನವ ಸರಪಳಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳಿಗೆ 3000 ಬಾವುಟಗಳನ್ನು ಹಾಗೂ ಮಕ್ಕಳಿಗೆ ರಿಬ್ಬನ್ (ಹ್ಯಾಂಡ್ ಬ್ಯಾಂಡ್‌ಗಳ) ನೀಡಲಾಗುತ್ತದೆ.
*ಸಾಂಸ್ಕೃತಿಕ ಮೆರಗು ಹಾಗೂ ಪ್ರಕೃತಿ ಕಲಾಪ:*
ಮಾನವ ಸರಪಳಿಯ ಕಾರ್ಯಕ್ರಮದಲ್ಲಿ ಹತ್ತು ವಿವಿಧ ಸಂಸ್ಕೃತಿಗಳನ್ನು ಬಿಂಬಿಸುವ ಕಲಾತಂಡಗಳ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಮಾರ್ಗದುದ್ದಕ್ಕೂ 2000 ಸಸಿಗಳನ್ನು ನೆಡಲಾಗುತ್ತದೆ.
ರಾಜ್ಯ ಸರ್ಕಾರವು ಅಂತರರಾಷ್ಟಿçÃಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಅರ್ಥ ಗರ್ಭಿತವಾಗಿ ಆಚರಿಸಲು ಹಾಗೂ ಪ್ರಜಾಪ್ರಭತ್ವದ ಮೌಲ್ಯವನ್ನು ಎತ್ತಿಹಿಡಿಯಲು ಬೀದರ್‌ನಿಂದ ಚಾಮರಾಜನಗರದ ವರೆಗೆ 2500 ಕಿಲೋಮೀಟರ್‌ಗಳ 25 ಲಕ್ಷ ಜನರ ಮಾನವ ಸರಪಳಿ ನಿರ್ಮಿಸಲು ತೀರ್ಮಾನಿಸಲಾಗಿದೆ. ಬಳ್ಳಾರಿ ಜಿಲ್ಲೆಯಲ್ಲಿ 45 ಕಿ.ಮೀ ಮಾನವ ಸರಪಳಿ ನಿರ್ಮಿಸಲು ಸಾರ್ವಜನಿಕರು, ವಿದ್ಯಾರ್ಥಿಗಳು ಉತ್ಸುಕತೆಯಿಂದ ಭಾಗವಹಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.
-----------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ