ಗುರುವಾರ, ಅಕ್ಟೋಬರ್ 31, 2024
ಸಂಡೂರು ವಿಧಾನಸಭೆ ಉಪಚುನಾವಣೆ: ಅಂತಿಮ ಕಣದಲ್ಲಿ 06 ಅಭ್ಯರ್ಥಿಗಳು
ಬಳ್ಳಾರಿ,ಅ.30ಕರ್ನಾಟಕ ವಾರ್ತೆ):
95-ಸಂಡೂರು (ಪ.ಪಂ) ವಿಧಾನಸಭಾ ಉಪಚುನಾವಣೆಗೆ ಸಲ್ಲಿಕೆಯಾಗಿದ್ದ ನಾಮಪತ್ರಗಳ ಹಿಂಪಡೆಯುವ ದಿನವಾದ ಬುಧವಾರದಂದು, ಓರ್ವ ಅಭ್ಯರ್ಥಿಯು ತಮ್ಮ ಉಮೇದುವಾರಿಕೆಯನ್ನು ವಾಪಸ್ ತೆಗೆದುಕೊಂಡಿದ್ದು, ಅಂತಿಮ ಕಣದಲ್ಲಿ 06 ಅಭ್ಯರ್ಥಿಗಳು ಇದ್ದಾರೆ ಎಂದು ಸಂಡೂರು ವಿಧಾನಸಭೆ ಉಪಚುನಾವಣಾಧಿಕಾರಿ ರಾಜೇಶ್.ಹೆಚ್.ಡಿ ಅವರು ತಿಳಿಸಿದ್ದಾರೆ.
ಅ.18 ರಿಂದ 25 ರವರೆಗೆ ನಾಮಪತ್ರ ಸಲ್ಲಿಕೆಯ ಅವಧಿಯಲ್ಲಿ ಒಟ್ಟು 07 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಅ.28 ರಂದು ನಡೆದ ನಾಮಪತ್ರಗಳ ಪರಿಶೀಲನೆಯಲ್ಲಿ 07 ಅಭ್ಯರ್ಥಿಗಳ ನಾಮಪತ್ರಗಳು ಕ್ರಮವಾಗಿದ್ದವು. ನಾಮಪತ್ರ ವಾಪಸ್ಸು ಪಡೆಯುವ ದಿನವಾದ ಅ.30 (ಬುಧವಾರ) ರಂದು ಸ್ವತಂತ್ರ ಅಭ್ಯರ್ಥಿ ಬಂಗಾರಿ ಅನಿಲ್ ಕುಮಾರ್ ಅವರು ತಮ್ಮ ಉಮೇದುವಾರಿಕೆಯನ್ನು ಹಿಂಪಡೆದಿದ್ದಾರೆ.
ಅಂತಿಮ ಕಣದಲ್ಲಿ 06 ಅಭ್ಯರ್ಥಿಗಳು:
ಮಾನ್ಯತೆ ಪಡೆದ ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯ ಪಕ್ಷಗಳಾದ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಈ.ಅನ್ನಪೂರ್ಣ, ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಬಂಗಾರ ಹನುಮಂತ, ಅದೇರೀತಿಯಾಗಿ ನೋಂದಾಯಿತ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಾದ (ಮಾನ್ಯತೆ ಪಡೆದ ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯ ಪಕ್ಷಗಳನ್ನು ಹೊರತುಪಡಿಸಿ) ಕರ್ನಾಟಕ ಜನತಾ ಪಕ್ಷದ ಅಭ್ಯರ್ಥಿ ಅಂಜಿನಪ್ಪ.ಎನ್ ಮತ್ತು ಪಕ್ಷೇತರ ಅಭ್ಯರ್ಥಿಗಳಾದ ಟಿ.ಎಂ.ಮಾರುತಿ, ಟಿ.ಎರ‍್ರಿಸ್ವಾಮಿ, ಎನ್.ವೆಂಕಣ್ಣ ಅಂತಿಮ ಕಣದಲ್ಲಿ ಇದ್ದಾರೆ ಎಂದು ಸಂಡೂರು ವಿಧಾನಸಭೆ ಉಪಚುನಾವಣಾಧಿಕಾರಿ ರಾಜೇಶ್.ಹೆಚ್.ಡಿ ಅವರು ತಿಳಿಸಿದ್ದಾರೆ.
=========
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ