ಗುರುವಾರ, ಅಕ್ಟೋಬರ್ 17, 2024

ಯುವಕ ನಾಪತ್ತೆ; ಪತ್ತೆಗೆ ಮನವಿ

ಬಳ್ಳಾರಿ,ಅ.17(ಕರ್ನಾಟಕ ವಾರ್ತೆ): ನಗರದ ಮಿಲ್ಲರ್‌ಪೇಟೆಯ ಆಂಜನೇಯ ಸ್ವಾಮಿ ಗುಡಿ ಓಣಿಯ ನಿವಾಸಿ ಮಹಮ್ಮದ್ ಅಕೀಫ್ ಎನ್ನುವ 17 ವರ್ಷದ ಯುವಕ ನಗರದ ಶ್ರೀ ಚೈತನ್ಯ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಅ.03 ರಂದು ಕಾಲೇಜಿಗೆ ಹೋಗಿ ಬರುತ್ತೇನೆ ಎಂದು ಹೇಳಿಹೋದವನು ಮರಳಿ ಬಾರದೇ ನಾಪತ್ತೆಯಾಗಿದ್ದು, ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪತ್ತೆಗೆ ಸಹಕರಿಸಬೇಕು ಎಂದು ಪಿಎಸ್‌ಐ ತಿಳಿಸಿದ್ದಾರೆ. ಚಹರೆ: 5.8 ಅಡಿ ಎತ್ತರ, ಗೋಧಿ ಮೈಬಣ್ಣ, ತೆಳ್ಳನೇಯ ಮೈಕಟ್ಟು, ಕೋಲುಮುಖ, ಕಪ್ಪು ಕೂದಲು, ತಲೆಯ ಹಿಂಭಾಗ ಬಲಭಾಗದಲ್ಲಿ ಬಿಳಿಕೂದಲು ಹೊಂದಿರುತ್ತಾನೆ. ಎಡಗೈ ಮಣಿಕಟ್ಟಿನ ಹತ್ತಿರ ಇಂಗ್ಲೀಷ್‌ನಲ್ಲಿ ‘ಚಿನ್ನಿ’ ಎಂದು ಅಚ್ಚೆ ಹಾಕಿಸಿಕೊಂಡಿರುತ್ತಾನೆ. ಕನ್ನಡ, ತೆಲುಗು, ಇಂಗ್ಲೀಷ್, ಹಿಂದಿ ಭಾಷೆ ಮಾತನಾಡುತ್ತಾನೆ. ಕಾಣೆಯಾದ ಸಂದರ್ಭದಲ್ಲಿ ಬಿಳಿ ಬಣ್ಣದ ಟೀ-ಶರ್ಟ್, ಕಪ್ಪು ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುತ್ತಾನೆ. ಯುವಕನ ಬಗ್ಗೆ ಸುಳಿವು ಸಿಕ್ಕಲ್ಲಿ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯ ದೂ.08392-276461, ಮೊ.9480803049 ಅಥವಾ ಬಳ್ಳಾರಿ ಪೊಲೀಸ್ ಕಂಟ್ರೋಲ್ ರೂಂ.08392-258100 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ----------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ