ಶುಕ್ರವಾರ, ಅಕ್ಟೋಬರ್ 25, 2024
ಬಳ್ಳಾರಿ ಮಹಾನಗರ ಪಾಲಿಕೆ | ಮ್ಯಾನ್ಯುಯಲ್ ಸ್ಕಾö್ಯವೆಂಜರ್ ಸಮೀಕ್ಷೆ; ಶಿಬಿರದಲ್ಲಿ ಪಾಲ್ಗೊಂಡು ನೋಂದಾಯಿಸಿಕೊಳ್ಳಲು ಸೂಚನೆ
ಬಳ್ಳಾರಿ,ಅ.25(ಕರ್ನಾಟಕ ವಾರ್ತೆ):
ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮ್ಯಾನ್ಯುಯಲ್ ಸ್ಕಾö್ಯಯಂಜಿAಗ್ ಕಾರ್ಯದಲ್ಲಿ ದೈಹಿಕವಾಗಿ ತೊಡಗಿಸಿಕೊಂಡವರಿದ್ದಲ್ಲಿ ನಗರದ ವಿವಿಧ ಸ್ಥಳಗಳಲ್ಲಿ ವಿವಿಧ ದಿನಗಳಂದು ಏರ್ಪಡಿಸಲಾಗುವ ಶಿಬಿರದಲ್ಲಿ ಭಾಗವಹಿಸಿ ಅಗತ್ಯ ದಾಖಲೆಗಳನ್ನು ನೀಡಿ ನೋಂದಾಯಿಸಿಕೊಳ್ಳಬೇಕು ಬಳ್ಳಾರಿ ಮಹಾನಗರ ಪಾಲಿಕೆಯ ಆಯುಕ್ತರು ತಿಳಿಸಿದ್ದಾರೆ.
*ಬೇಕಾದ ದಾಖಲೆ:*
ಪಾಸ್‌ಪೋರ್ಟ್ ಅಳತೆಯ ಒಂದು ಭಾವಚಿತ್ರ, ಕುಟುಂಬದ ಸದಸ್ಯರನ್ನೊಳಗೊಂಡ ಒಂದು ಭಾವಚಿತ್ರ (ಅಳತೆ 6*4), ಬ್ಯಾಂಕ್ ಖಾತೆಯ ಪಾಸ್‌ಬುಕ್‌ನ ಮುಖಪುಟದ ಪ್ರತಿ (ಮೂಲ ಪುಸ್ತಕವನ್ನು ಸಹ ತರಬೇಕು). ಆಧಾರ್ ಪ್ರತಿ (ಮೂಲ ಪ್ರತಿ ಸಹ ತರಬೇಕು), ಮ್ಯಾನ್ಯುಯಲ್ ಸ್ಕಾö್ಯವೆಂಜಿAಗ್ ಕಾರ್ಯನಿರ್ವಹಿಸುತ್ತಿರುವ ಅನೈರ್ಮಲ್ಯ ಶೌಚಾಲಯ ಸ್ಥಳದ ವಿವರ ಸಲ್ಲಿಸಬೇಕು.
ಒಣ ಶೌಚಾಲಯಗಳನ್ನು ಸ್ವಚ್ಛಗೊಳಿಸುವುದು, ಅನೈರ್ಮಲ್ಯ ಶೌಚಾಲಯಗಳಿಂದ ಹೊರಹೋಗಿ ತೆರೆದ ಚರಂಡಿಯಲ್ಲಿ ಸಂಗ್ರಹವಾಗುವ ಮಾನವ ಮಲ ಸ್ವಚ್ಛಗೊಳಿಸುವುದು, ಶೌಚಾಲಯದ ಮಲಗುಂಡಿಗಳನ್ನು ದೈಹಿಕವಾಗಿ ಸ್ವಚ್ಛಗೊಳಿಸುವುದು, ಈ ಕಾರ್ಯಗಳಲ್ಲಿ ತೊಡಗಿರುವವರು ಯಾವುದೇ ವ್ಯಕ್ತಿಗಳಿದ್ದಲ್ಲಿ ಮೇಲ್ಕಂಡ ದಿನದಂದು ನಡೆಯುವ ಶಿಬಿರದಲ್ಲಿ ಭಾಗವಹಿಸಬಹುದು.
*ಶಿಬಿರ ಆಯೋಜನೆಯ ಸ್ಥಳ ಮತ್ತು ದಿನಾಂಕ:*
ಅ.27 ರಂದು ಬೆಳಿಗ್ಗೆ 10.30 ಗಂಟೆಯಿAದ ಸಂಜೆ 5.30ರವರೆಗೆ ಗಂಟೆಯವರೆಗೆ ಬಳ್ಳಾರಿಯ ಕೌಲ್‌ಬಜಾರ್‌ನ ದಾನಪ್ಪ ಬೀದಿಯ ಶ್ರೀರಾಮ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಶಿಬಿರ ಆಯೋಜಿಸಲಾಗಿದೆ. (ಸಂಪರ್ಕಿಸಬಹುದಾದ ವ್ಯಕ್ತಿ- ವಿ.ಪರಶುರಾಮ ಮೊ:8123600703 ಮತ್ತು ಮಲ್ಲೇಶ್ವರಂ ಮೊ:9980014529).
ಅ.27 ರಂದು ಬೆಳಿಗ್ಗೆ 10.30 ಗಂಟೆಯಿAದ ಸಂಜೆ 5.30ರವರೆಗೆ ಗಂಟೆಯವರೆಗೆ ನಗರದ ತಾಳೂರು ರಸ್ತೆಯ ಭಗತ್ ಸಿಂಗ್ ನಗರದ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿದೆ. (ಸಂಪರ್ಕಿಸಬಹುದಾದ ವ್ಯಕ್ತಿ-ಶೇಖರ್ ಮೊ:9731524306)
ಅ.28 ರಂದು ಬೆಳಿಗ್ಗೆ 10.30 ಗಂಟೆಯಿAದ ಸಂಜೆ 5.30ರವರೆಗೆ ಗಂಟೆಯವರೆಗೆ ನಗರದ ಶ್ರೀರಾಂಪುರA ಕಾಲೋನಿಯ ಶ್ರೀರಾಮ ದೇವಸ್ಥಾನ ಆವರಣದಲ್ಲಿ ಶಿಬಿರ ಆಯೋಜಿಸಲಾಗಿದೆ. (ಸಂಪರ್ಕಿಸಬಹುದಾದ ವ್ಯಕ್ತಿ- ಜಿ.ಆರ್ ರಾಮೇಶ್ವರ್ ಮೊ:9448580449, ನಾರಾಯಣ ಸ್ವಾಮಿ ಮೊ:8951012144)
ಅ.28 ರಂದು ಬೆಳಿಗ್ಗೆ 10.30 ಗಂಟೆಯಿAದ ಸಂಜೆ 5.30ರವರೆಗೆ ಗಂಟೆಯವರೆಗೆ ನಗರದ ಬಾಪೂಜಿ ನಗರದಲ್ಲಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಬಿರ ಏರ್ಪಡಿಸಲಾಗಿದೆ. (ಸಂಪರ್ಕಿಸಬಹುದಾದ ವ್ಯಕ್ತಿ- ಗಂಗಾಧರ ಮೊ:9880057191)
ಶಿಬಿರದಲ್ಲಿ ನೋಂದಾಯಿಸಿಕೊಳ್ಳದೇ ಇದ್ದಲ್ಲಿ ಅಗತ್ಯ ದಾಖಲೆಗಳೊಂದಿಗೆ ಬಳ್ಳಾರಿ ಮಹಾನಗರ ಪಾಲಿಕೆ ಕಚೇರಿಗೆ ಭೇಟಿ ನೀಡಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-----------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ