ಗುರುವಾರ, ಅಕ್ಟೋಬರ್ 31, 2024
ಕರ್ನಾಟಕ ಸಂಭ್ರಮ-50 ಅಭಿಯಾನದ ಸುವರ್ಣ ಮಹೋತ್ಸವ ಪ್ರಶಸ್ತಿ-2024: ಬಳ್ಳಾರಿ ಜಿಲ್ಲೆಯ ಇಬ್ಬರು ಸಾಧಕರು ಆಯ್ಕೆ
ಬಳ್ಳಾರಿ,ಅ.31(ಕರ್ನಾಟಕ ವಾರ್ತೆ):
ಕರ್ನಾಟಕ ಸಂಭ್ರಮ-50 ಅಭಿಯಾನದ ಸುರ್ವಣ ಮಹೋತ್ಸವ ಸಂಧರ್ಭಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ 50 ಜನ ಮಹಿಳಾ ಸಾಧಕರು ಮತ್ತು 50 ಜನ ಪುರುಷ ಸಾಧಕರಿಗೆ 2024ನೇ ಸಾಲಿನಲ್ಲಿ ಸುವರ್ಣ ಮಹೋತ್ಸವ ಪ್ರಶಸ್ತಿಯನ್ನು ನೀಡಿದ ಗೌರವಿಸಲು ಸರ್ಕಾರವು ಸಾಧಕರನ್ನು ಆಯ್ಕೆ ಮಾಡಿ ಘೋಷಿಸಿದೆ.
ಕರ್ನಾಟಕ ಸಂಭ್ರಮ-50 ಸುರ್ವಣ ಮಹೋತ್ಸವ ಪ್ರಶಸ್ತಿ-2024ಗೆ ಬಳ್ಳಾರಿ ಜಿಲ್ಲೆಯ ಇಬ್ಬರು ಸಾಧಕರು ಆಯ್ಕೆಯಾಗಿದ್ದಾರೆ. ಪುರಷ ವಿಭಾಗದ ಶಿಕ್ಷಣ ಕ್ಷೇತ್ರದಲ್ಲಿ ಟಿ.ಎಂ.ಚAದ್ರಶೇಖರಯ್ಯ ಮತ್ತು ಮಹಿಳಾ ವಿಭಾಗದ ಬಯಲಾಟ/ಯಕ್ಷಗಾನ ಕ್ಷೇತ್ರದಲ್ಲಿ ಹುಲಿಗೆಮ್ಮ ಅವರು ಆಯ್ಕೆಯಾಗಿದ್ದು, ಜಿಲ್ಲಾಡಳಿತವು ಅಭಿನಂದಿಸಿದೆ.
----------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ