ಮಂಗಳವಾರ, ಅಕ್ಟೋಬರ್ 15, 2024

ಯುವಕ ಕಾಣೆ

ಬಳ್ಳಾರಿ,ಅ.15(ಕರ್ನಾಟಕ ವಾರ್ತೆ): ಸಂಡೂರು ಪಟ್ಟಣದ ಆಶ್ರಯ ಕಾಲೋನಿಯ ನಿವಾಸಿ ಹಾಗೂ ಜಿಂದಾಲ್ ಕಂಪನಿಯಲ್ಲಿ ಶಿಷ್ಯವೃತ್ತಿ ಕೆಲಸ ನಿರ್ವಹಿಸುತ್ತಿದ್ದ ಎಂ.ಕಾರ್ತಿಕ ಎನ್ನುವ 19 ವರ್ಷದ ಯುವಕ ಅ.07 ರಂದು ಕಾಣೆಯಾಗಿರುವ ಕುರಿತು ಸಂಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕು ಎಂದು ಠಾಣಾಧಿಕಾರಿ ಮನವಿ ಮಾಡಿದ್ದಾರೆ. *ಕಾಣೆಯಾದ ಯುವಕನ ಚಹರೆ:* ಎತ್ತರ 5.7 ಅಡಿ, ದುಂಡನೇಯ ಮುಖ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಎಡಭಾಗದ ಕಿವಿಯಲ್ಲಿ ರಿಂಗ್ ಧರಿಸಿರುತ್ತಾನೆ. ಕಾಣೆಯಾದ ಯುವಕನು ಕನ್ನಡ, ಹಿಂದಿ, ಇಂಗ್ಲೀಷ್ ಭಾಷೆ ಮಾತನಾಡುತ್ತಾನೆ. ಈ ಮೇಲ್ಕಂಡ ಚಹರೆ ಗುರುತುಳ್ಳ ಯುವಕನ ಬಗ್ಗೆ ಮಾಹಿತಿ ದೊರೆತಲ್ಲಿ ಸಂಡೂರು ಪೊಲೀಸ್ ಠಾಣೆಯ ಹಿರಿಯ ಪೇದೆ ಮೊ:900815455 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. --------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ