ಮಂಗಳವಾರ, ಅಕ್ಟೋಬರ್ 22, 2024

ಮೀನುಗಾರಿಕೆ ಇಲಾಖೆ; ನೋಂದಣಿಗೆ ಆಹ್ವಾನ

ಬಳ್ಳಾರಿ,ಅ.22(ಕರ್ನಾಟಕ ವಾರ್ತೆ): ಪ್ರಧಾನಮಂತ್ರಿ ಮತ್ಸö್ಯಸಂಪದ ಯೋಜನೆಯ ಉಪ ಯೋಜನೆಯಾದ ಪ್ರಧಾನಮಂತ್ರಿ ಮತ್ಸö್ಯ ಕಿಸಾನ್ ಸಮೃದ್ದಿ ಸಹ ಯೋಜನೆ ರೂಪಿಸಲಾಗಿದೆ. ಈ ಯೋಜನೆಯು 2023-24 ರಿಂದ 2026-27 ರ ವರೆಗೆ ಚಾಲ್ತಿಯಲ್ಲಿದ್ದು, ಈ ಯೋಜನೆಯಡಿ ಮೀನುಗಾರಿಕೆ ವಲಯದಲ್ಲಿ ತೊಡಗಿಸಿಕೊಂಡಿರುವ ಮೀನುಗಾರರು, ಮೀನುಗಾರರ ಸಹಕಾರ ಸಂಘಗಳು, ದೋಣಿ ಮಾಲಿಕರು, ಮೀನು ಸಂಸ್ಕರಣ ಉದ್ದಿಮಿಗಳು, ಮಂಜುಗಡ್ಡೆ ಕಾರ್ಖಾನೆ ಉದ್ದಿಮಿಗಳು, ಮೀನು ಮಾರಟಗಾರರು, ಮಧ್ಯಸ್ಥಗಾರರು ಹಾಗೂ ಇತರರನ್ನು ರಾಷ್ಟಿçÃಯ ಮೀನುಗಾರಿಕೆ ಡಿಜಿಟಲ್ ವೇದಿಕೆ (ಎನ್‌ಎಫ್‌ಡಿಪಿ) ತಂತ್ರಾAಶದಲ್ಲಿ ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಬಳ್ಳಾರಿ, ಸಿರುಗುಪ್ಪ, ಕಂಪ್ಲಿ, ಮತ್ತು ಕುರುಗೋಡು ತಾಲ್ಲೂಕುಗಳಿಗೆ ಸಂಬAಧಿಸಿದAತೆ ಮೀನುಗಾರಿಕೆ ಸಹಾಯಕ ನಿರ್ದೇಶಕರು, ಬಳ್ಳಾರಿ ಮತ್ತು ಸಂಡೂರು ತಾಲ್ಲೂಕಿಗೆ ಸಂಬAಧಿಸಿದAತೆ ಮೀನುಗಾರಿಕೆ ಸಹಾಯಕ ನಿರ್ದೇಶಕರು, ಸಂಡೂರು ಇವರಿಗೆ ಸಂಪರ್ಕಿಸಬಹುದು ಎಂದು ಮೀನುಗಾರಿಕೆ ಉಪನಿರ್ದೇಶಕ ಶಿವಣ್ಣ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ---------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ