ಬುಧವಾರ, ಅಕ್ಟೋಬರ್ 16, 2024
ವಕ್ಫ್ ಬೋರ್ಡ್: ಸಾಮಾನ್ಯ ಸದಸ್ಯರ ನೋಂದಣಿಯ ಅವಧಿ ವಿಸ್ತರಣೆ
ಬಳ್ಳಾರಿ,ಅ.16(ಕರ್ನಾಟಕ ವಾರ್ತೆ):
ನಗರದ ವಕ್ಫ್ ಸಂಸ್ಥೆ ಈದ್ಗಾ(ಸುನ್ನಿ), ಬ್ರೂಸ್‌ಪೇಟ್ ಸಾಮಾನ್ಯ ಸದಸ್ಯರ ದಾಖಾಲಾತಿ ನೋಂದಣಿಗೆ ಅಧಿಸೂಚನೆ ಪ್ರಕಟವಾಗಿದ್ದು, ಈಗಾಗಲೇ ಸಾಮಾನ್ಯ ಸದಸ್ಯರ ನೋಂದಣಿ ಪ್ರಕ್ರಿಯೆ ನಡೆಯುತ್ತಿದ್ದು, ನೋಂದಣಿಯ ಅವಧಿಯನ್ನು ಅ.25 ರ ವರೆಗೆ ವಿಸ್ತರಿಸಲಾಗಿದೆ ಎಂದು ಈದ್ಗಾ(ಸುನ್ನಿ), ಬ್ರೂಸ್‌ಪೇಟೆಯ ನೋಂದಣಾಧಿಕಾರಿಗಳು ತಿಳಿಸಿದ್ದಾರೆ.
ಭರ್ತಿ ಮಾಡಿದ ಅರ್ಜಿ ನಮೂನೆಗಳೊಂದಿಗೆ 3 ಇತ್ತೀಚಿನ ಭಾವಚಿತ್ರಗಳು ಹಾಗೂ ರೂ.300 ಶುಲ್ಕ ಹಾಗೂ ಅಧಿಕೃತ ವಿಳಾಸದ 02 ಗುರುತಿನ ಚೀಟಿಗಳೊಂದಿಗೆ ಅಕ್ಟೋಬರ್ 25 ರೊಳಗೆ ಜಿಲ್ಲಾ ವಕ್ಫ್ ಕಚೇರಿಯಲ್ಲಿ ಸ್ಥಾಪಿಸಲಾಗಿರುವ ನೋಂದಣಿ ಅಧಿಕಾರಿಗಳ ಕಚೇರಿಗೆ ಸಲ್ಲಿಸಬಹುದು.
ದಾಖಲಾದ ಸದಸ್ಯರ ಕರಡು ಪಟ್ಟಿಯನ್ನು ನ.04 ರಂದು ಪ್ರಕಟಿಸಲಾಗುತ್ತದೆ. ಕರಡು ಪಟ್ಟಿಗೆ ಸಂಬAಧಿಸಿದAತೆ ಆಕ್ಷೇಪಣೆಗಳು ಹಾಗೂ ಸಲಹೆ-ಸೂಚನೆಗಳಿದ್ದಲ್ಲಿ ನ.05 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 2 ಗಂಟೆಯೊಳಗೆ ಸಲ್ಲಿಸಬಹುದು. ಆಕ್ಷೇಪಣೆಗಳ ವಿಚಾರಣೆ ನ.06 ರಂದು ನಡೆಸಲಾಗುತ್ತದೆ.
ದಾಖಲಾದ ಸಾಮಾನ್ಯ ಸದಸ್ಯರ ಅಂತಿಮ ಪಟ್ಟಿಯನ್ನು ನ.08 ರಂದು ಮಧ್ಯಾಹ್ನ 3.30 ಗಂಟೆಗೆ ಜಿಲ್ಲಾ ವಕ್ಫ್ ಕಚೇರಿಯಲ್ಲಿ ಪ್ರಕಟಿಸಲಾಗುವುದು ಮತ್ತು ಸಾಮಾನ್ಯ ಸದಸ್ಯರಿಗೆ ನ.11 ರಿಂದ ನ.14 ರವರೆಗೆ ಗುರುತಿನ ಚೀಟಿ(ಐಡಿ ಕಾರ್ಡ್)ಗಳನ್ನು ವಿತರಿಸಲಾಗುತ್ತದೆ.
ಈಗಾಗಲೇ 2019ರಲ್ಲಿ ಅರ್ಜಿ ಸಲ್ಲಿಸಿದ ಅರ್ಭ್ಯಥಿಗಳು ಚಂದಾದಾರಿಕೆ ಶುಲ್ಕ ರೂ. 200/- ಹಾಗೂ ಎರಡು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಕಡ್ಡಾಯವಾಗಿ ಸಲ್ಲಿಸಬೇಕು ಎಂದು ಈದ್ಗಾ(ಸುನ್ನಿ), ಬ್ರೂಸ್‌ಪೇಟೆಯ ನೋಂದಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
--------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ