ಶನಿವಾರ, ಅಕ್ಟೋಬರ್ 19, 2024

ಅನಾಮಧೇಯ ವ್ಯಕ್ತಿ ಮೃತ ವಾರಸುದಾರರ ಪತ್ತೆಗೆ ಮನವಿ

ಬಳ್ಳಾರಿ,ಅ.19(ಕರ್ನಾಟಕ ವಾರ್ತೆ): ನಗರದ ಹಳೇ ಬಸ್ ನಿಲ್ದಾಣದ ಎದುರುಗಡೆ ಇರುವ ಮಯೂರ ಹೋಟೆಲ್ ಮುಂದಿನ ಫುಟ್‌ಪಾತ್ ಹತ್ತಿರ ಸುಮಾರು 35-40 ವರ್ಷದ ಅನಾಮಧೇಯ ವ್ಯಕ್ತಿಯನ್ನು ಅ.01 ರಂದು ಸಂಜೆ 07 ಗಂಟೆಗೆ ಅನಾರೋಗ್ಯದಿಂದ ಬಳುತಿದ್ದ ಕಾರಣ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾನೆ. ವಾರಸುದಾರರ ಬಗ್ಗೆ ತಿಳಿದಿರುವುದಿಲ್ಲ, ಪತ್ತೆಗೆ ಸಹಕರಿಸಬೇಕು ಎಂದು ಗಾಂಧಿನಗರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಮನವಿ ಮಾಡಿದ್ದಾರೆ. ಮೃತನ ವ್ಯಕ್ತಿಯ ಚಹರೆ ಗುರುತು: ಎತ್ತರ 5.4 ಅಡಿ, ಕೋಲುಮುಖ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು, ಕಪ್ಪು ಮೀಸೆ, ಗಡ್ಡ ಹೊಂದಿರುತ್ತಾನೆ. ಗುಂಡು ತಲೆ ಮಾಡಿಸಿಕೊಂಡಿರುತ್ತಾನೆ. ಮೃತನ ಮೈಮೇಲೆ ಕೆಂಪು ಬಿಳಿ ನೀಲಿ ಮಿಶ್ರಿತ ತುಂಬು ತೋಳಿನ ಚೆಕ್ಸ್ ಶರ್ಟ್ ಧರಿಸಿರುತ್ತಾನೆ. ಮೃತನ ವಾರಸುದಾರರ ಬಗ್ಗೆ ಮಾಹಿತಿ ಇದ್ದಲ್ಲಿ ಬಳ್ಳಾರಿ ಕಂಟ್ರೋಲ್ ರೂಂ ದೂ.08392-258100, ಗಾಂಧಿನಗರ ಪೊಲೀಸ್ ಠಾಣೆ ದೂ.08392-272192, ಪಿ.ಐ ಮೊ.9480803046 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ----------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ