ಬುಧವಾರ, ಅಕ್ಟೋಬರ್ 30, 2024

ಮಕ್ಕಳ ಬೆಳವಣಿಗೆಯಲ್ಲಿ ನ್ಯೂನ್ಯತೆಗಳು ಕಂಡುಬAದಲ್ಲಿ ಮೇಲ್ಮಟ್ಟದ ಆಸ್ಪತ್ರೆಗಳ ಶಿಫಾರಸ್ಸಿಗೆ ಕ್ರಮವಹಿಸಿ: ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ

ಬಳ್ಳಾರಿ,ಅ.30(ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಶಾಲೆ-ಅಂಗನವಾಡಿ ಕೇಂದ್ರಗಳಲ್ಲಿನ ಮಕ್ಕಳ ಬೆಳವಣಿಗೆಯಲ್ಲಿ ನ್ಯೂನ್ಯತೆಗಳು ಕಂಡುಬAದಲ್ಲಿ ತಕ್ಷಣವೇ ಗುರ್ತಿಸಿ ಚಿಕಿತ್ಸೆಗೆ ಮೇಲ್ಮಟ್ಟದ ಆಸ್ಪತ್ರೆಗಳಿಗೆ ಶಿಫಾರಸ್ಸು ಮಾಡಲು ಕ್ರಮವಹಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ ಅವರು ಹೇಳಿದರು. ಬುಧವಾರದಂದು ಜಿಲ್ಲಾ ಪಂಚಾಯತ್‌ನ ವಿಡಿಯೋ ಸಭಾಂಗಣದಲ್ಲಿ ಏರ್ಪಡಿಸಿದ್ದ ಜಿಲ್ಲಾ ಆರೋಗ್ಯ ಸಂಘದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಾಷ್ಟಿçÃಯ ಬಾಲ ಸ್ವಾಸ್ಥö್ಯ ಕಾರ್ಯಕ್ರಮದಡಿ ಮಕ್ಕಳ ಬಾಲ್ಯದ ಬೆಳವಣಿಗೆಯ ನ್ಯೂನತೆಗಳನ್ನು ಆರ್‌ಬಿಎಸ್‌ಕೆ ವೈದ್ಯರ ತಂಡದ ಶಾಲೆ ಮತ್ತು ಅಂಗನವಾಡಿಗಳಲ್ಲಿ ಗುರ್ತಿಸಿ ಪಾಲಕರಿಗೆ ಸರಿಯಾದ ಮಾಹಿತಿ ನೀಡಬೇಕು. ಬಳಿಕ ಜಿಲ್ಲಾ ಡಿಇಐಸಿ ಕೇಂದ್ರಕ್ಕೆ ಕಳುಹಿಸಿಕೊಡಲು ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ಎಲ್ಲ ಆರ್‌ಬಿಎಸ್‌ಕೆ ತಂಡಗಳು ಶಾಲೆಗಳಿಗೆ ಮತ್ತು ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ನಿಗದಿತ ಸಮಯದೊಳಗೆ ಎಲ್ಲ ಮಕ್ಕಳನ್ನು ಪರೀಕ್ಷೆಗೆ ಒಳಪಡಿಸಬೇಕು ಎಂದರು. ಯಾವುದೇ ಮಗುವಿಗೆ ಹೆಚ್ಚಿನ ಚಿಕಿತ್ಸೆ ಅವಶ್ಯವಿದ್ದಲ್ಲಿ ತಕ್ಷಣವೇ ಚಿಕಿತ್ಸೆಗೆ ಕಳುಹಿಸುವ ವ್ಯವಸ್ಥೆ ಸಂಬAಧಿಸಿದ ಆರ್‌ಬಿಎಸ್‌ಕೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳು ಮಾಡುವ ಮೂಲಕ ಮಗುವಿನ ಭವಿಷ್ಯ ಉಜ್ವಲವಾಗಲು ಶ್ರಮಿಸಬೇಕು ಎಂದು ಸೂಚಿಸಿದರು. ಮಗುವಿನ ಜನನದ ನಂತರ ಗುರ್ತಿಸುವ ಬೆಳವಣಿಗೆಯ ನ್ಯೂನ್ಯತೆಗಳಾದ ದೃಷ್ಟಿದೋಷ, ಕಿವಿ ಕೆಳದಿರುವುದು, ಮಾತು ಬಾರದಿರುವುದು, ಸಿಳುತುಟಿ ಸಿಳುಅಂಗಳ, ಮತ್ತು ಹೃದಯದ ಸಮಸ್ಯೆಗಳು, ದೈಹಿಕ ಊನತೆಗಳನ್ನು ಹಾಗೂ ಇತರೆ ಯಾವುದೆ ಗಂಭೀರ ಸಮಸ್ಯೆಗಳನ್ನು ಕಂಡುಬAದಲ್ಲಿ ಗುರ್ತಿಸಿ ಚಿಕಿತ್ಸೆ ನೀಡಬೇಕು ಎಂದರು. ಗರ್ಭಿಣಿಯೆAದು ತಿಳಿದ ತಕ್ಷಣವೇ ದಾಖಲಿಸಿಕೊಂಡು ತಾಯಿಕಾರ್ಡ್ ವಿತರಿಸಬೇಕು. ಅವರ ಕಾಳಜಿ ಹಾಗೂ ನಿಗಾವಹಿಸಿ ಗರ್ಭಪಾತದ ಸಾಧ್ಯತೆಗಳನ್ನು ಪತ್ತೆ ಹಚ್ಚಿ ಹೆಣ್ಣು ಭ್ರೂಣಹತ್ಯೆಯಾಗದಂತೆ ನಿಗಾವಹಿಸಬೇಕು ಎಂದು ತಿಳಿಸಿದರು. ಹೆಣ್ಣು ಮಗು ಜನನವವಾದ ಕುಟುಂಬಕ್ಕೆ ಗೌರವ ಅರ್ಪಿಸುವ ಜೊತೆಗೆ ಉಡುಗೊರೆಯ ರೂಪದಲ್ಲಿ ಕಿಟ್‌ನ್ನು ಗ್ರಾಮ ಪಂಚಾಯತ್ ಮೂಲಕ ಒದಗಿಸಲು ಅಗತ್ಯ ಕ್ರಮವಹಿಸಲು ಸೂಚಿಸಿದರಲ್ಲದೇ, ಗರ್ಭಿಣಿಯರ ಕನಿಷ್ಟ ನಾಲ್ಕು ತಪಾಸಣೆಗಳು ಆಗಿರುವ ಬಗ್ಗೆ ಖಾತ್ರಿ ಪಡಿಸಿಕೊಂಡು ಅಗತ್ಯ ಇರುವವರಿಗೆ ಹೆಚ್ಚುವರಿ ಸ್ಕಾö್ಯನಿಂಗ್ ಕೈಗೊಳ್ಳಲು ತಿಳಿಸಬೇಕು. ಮನೆ ಹೆರಿಗೆಗೆ ಆದ್ಯತೆ ನೀಡದೇ ಆಸ್ಪತ್ರೆಗೆ ಕಳುಹಿಸಲು 108 ಆರೋಗ್ಯ ಕವಚ ಅಥವಾ ಎಬಿಎಸ್ ಅಂಬುಲೆನ್ಸ್ ವ್ಯವಸ್ಥೆ ಸದುಪಯೋಗ ಪಡೆಯಲು ಮನವರಿಕೆ ಮಾಡಬೇಕು ಎಂದು ಹೇಳಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಅವರು ಮಾತನಾಡಿ, ಗರ್ಭಿಣಿ ಎಂದು ತಿಳಿದ ದಿನದಿಂದ ಹೆರಿಗೆಯಾಗುವವರೆಗೆ ಮತ್ತು ಹೆರಿಗೆ ನಂತರದ 45 ದಿನಗಳ ಕಾಲ ಬಾಣಂತಿಯ ಅವಧಿಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸುವ ಮೂಲಕ ರಕ್ತದೊತ್ತಡ, ಸಕ್ಕರೆ ಕಾಯಿಲೆ, ರಕ್ತಹೀನತೆ ಮುಂತಾದವುಗಳಿAದ ಗಂಭೀರತೆ ಉಂಟಾಗದAತೆ ಜಾಗೃತಿ ವಹಿಸಲಾಗುತ್ತಿದ್ದು, ನಿಯಮಾನುಸಾರ ಎರಡು ಟಿಡಿ ಚುಚ್ಚುವiದ್ದು, 180 ಕಬ್ಬಿಣಾಂಶ ಮಾತ್ರೆಗಳು, ರಕ್ತಹಿನತೆ ಇದ್ದರೆ 360 ಮಾತ್ರೆಗಳು, ಕ್ಯಾಲ್ಸಿಮ್ ಮಾತ್ರೆ, ಜಂತು ಹುಳು ನಿವಾರಣ ಮಾತ್ರೆಯನ್ನು ಒದಗಿಸಲಾಗುತ್ತಿದೆ ಎಂದು ಸಭೆಗೆ ಮಾಹಿತಿ ನೀಡಿದರು. *ಕ್ಷಯವಿಜಯ:* ಕ್ಷಯಮುಕ್ತ ಗಾಮಪಂಚಾಯತ್ ಆಯ್ಕೆ ಮಾಡಲು ಹೆಚ್ಚಿನ ಕ್ಷಯ ಪರೀಕ್ಷೆ ಕೈಗೊಂಡು ಚಿಕಿತ್ಸೆ ನೀಡಲಾಗುತ್ತಿದೆ. ಕುರುಗೊಡು ತಾಲೂಕಿನಲ್ಲಿ ಕ್ಷಯವಿಜಯ ಸಂಚಾರಿ ತಂಡವು ಎಕ್ಸ್-ರೇ ಯಂತ್ರದ ಮೂಲಕ ಕ್ಷಯರೋಗ ಗುರ್ತಿಸಿದ ರೀತಿಯಲ್ಲಿ ಎಲ್ಲ ತಾಲೂಕುಗಳಲ್ಲಿ ಕ್ರಮವಹಿಸುವಂತೆ ಜಿಪಂ ಸಿಇಒ ಅವರು ಸೂಚಿಸಿದರು. *ಡೆಂಗ್ಯು ನಿಯಂತ್ರಣ:* ಪ್ರಸ್ತುತ ಡೆಂಗ್ಯೂ ನಿಯಂತ್ರಣದಲ್ಲಿದ್ದು, ರೋಗದ ಕುರಿತು ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಪ್ರತಿಯೊಬ್ಬರಿಗೂ ಮಾಹಿತಿ ನೀಡಬೇಕು ಹಾಗೂ ನಗರದ ಕೊಳಚೆ ಪ್ರದೇಶಗಳಲ್ಲಿ ಲಾರ್ವಾ ಸಮೀಕ್ಷೆಯನ್ನು ಪರಿಣಾಮಕಾರಿಯಾಗಿ ಕೈಗೊಳ್ಳಲು ಸೂಚಿಸಿದರು. *ಆರೋಗ್ಯ ಸಿಂಚನ ಕಾರ್ಯಕ್ರಮ:* ಆರೋಗ್ಯ ಸಿಂಚನ ಕಾರ್ಯಕ್ರಮದಡಿ ಬಾಕಿ ಉಳಿದ 52 ಶಾಲೆಗಳಲ್ಲಿ ವಿಡಿಯೋ ಪ್ರರ್ದಶನ ಕೈಗೊಳ್ಳಬೇಕು. ಕುಟುಂಬ ಕಲ್ಯಾಣ ತಾತ್ಕಾಲಿಕ ವಿಧಾನಗಳು ಜೊತೆಗೆ ಶಸ್ತçಚಿಕಿತ್ಸಾ ಶಿಬಿರಗಳಲ್ಲಿ ಹೆಚ್ಚಿನ ಫಲಾನುಭವಿಗಳು ಬರುವಂತೆ, ಅಂಧತ್ವ ಮುಕ್ತ ಬಳ್ಳಾರಿ ಅಭಿಯಾನದಡಿ ಶಸ್ತçಚಿಕಿತ್ಸೆ ಹಾಗೂ ಕನ್ನಡಕಗಳ ವಿತರಣೆಗೆ ಕ್ರಮವಹಿಸಿ ಎಂದು ತಿಳಿಸಿದರು. *ಸ್ಥಬ್ದಚಿತ್ರ:* ನ.01 ಕನ್ನಡ ರಾಜ್ಯೋತ್ಸವದಂದು ಬಾಲ್ಯವಿವಾಹ ನಿಷೇಧ ಕಾಯ್ದೆ, ಪೋಕ್ಸೋ ಕಾಯ್ದೆ, ರಾಜ್ಯ ಸರಕಾರ ಅನುಷ್ಟಾನ ಮಾಡುತ್ತಿರುವ ಗೃಹ ಆರೋಗ್ಯ, ಡೆಂಗ್ಯು ಚಿಕುನ್ ಗುನ್ಯಾ ಕುರಿತು ಪರಿಣಾಮಕಾರಿಯಾಗಿ ಸ್ಥಬ್ದಚಿತ್ರದ ಮೂಲಕ ಪ್ರದರ್ಶನದ ಸಿದ್ದತೆಗೆ ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗೆ ಸೂಚಿಸಿದರು.. ಈ ಸಂದರ್ಭದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ, ವಿಮ್ಸ್ ಅಧೀಕ್ಷಕ ಡಾ.ಚಿದಂಬರಮೂರ್ತಿ, ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳಾದ ಡಾ.ಅಬ್ದುಲ್ಲಾ, ಡಾ.ಪೂರ್ಣಿಮಾ ಕಟ್ಟಿಮನಿ, ಡಾ.ಇಂದ್ರಾಣಿ, ಡಾ.ವೀರೇಂದ್ರ ಕುಮಾರ್, ಡಾ.ಹನುಮಂತಪ್ಪ, ಡಿಇಐಸಿ ಮಕ್ಕಳ ತಜ್ಞರಾದ ಡಾ.ತೇಜ, ತಾಲ್ಲೂಕು ಆರೋಗ್ಯ ಅಧಿಕಾರಿಗಳಾದ ಡಾ.ಈರಣ್ಣ, ಡಾ.ಭರತ್, ಆಡಳಿತ ವೈದ್ಯಾಧಿಕಾರಿಗಳಾದ ಡಾ.ಪವನ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ, ಡಾ.ಜಬೀನ್ ತಾಜ್, ಡಿಪಿಎಮ್ ವೆಂಕೋಬ್ ನಾಯ್ಕ್, ಡಿಎನ್‌ಒ ಗಿರೀಶ್, ಕಾಯಕಲ್ಪ ಸಲಹೆಗಾರ ಡಾ.ಸುರೇಶ್, ಮನೋಹರ್ ಸೇರಿದಂತೆ ಇತರರು ಉಪಸ್ಥಿತರಿದ್ದರು. -------------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ