ಬುಧವಾರ, ಅಕ್ಟೋಬರ್ 23, 2024

ರಾಷ್ಟಿçÃಯ ಪ್ಯಾರಾ ಈಜು ಸ್ಪರ್ಧೆ: ಬಳ್ಳಾರಿ ಜಿಲ್ಲೆಗೆ 7 ಪದಕ

ಬಳ್ಳಾರಿ,ಅ.23(ಕರ್ನಾಟಕ ವಾರ್ತೆ): ಗೋವಾದ ಪಣಜಿಯಲ್ಲಿ ಅ.19 ರಿಂದ 22 ರ ವರೆಗೆ ನಡೆದ ರಾಷ್ಟಿçÃಯ ಮಟ್ಟದ ಪ್ಯಾರಾ ಈಜು ಸ್ಪರ್ಧೆಗಳಲ್ಲಿ ಬಳ್ಳಾರಿ ಜಿಲ್ಲೆಗೆ 1 ಚಿನ್ನ, 4 ಬೆಳ್ಳಿ, 2 ಕಂಚು ಸೇರಿ ಒಟ್ಟು 7 ಪದಕ ಲಭಿಸಿವೆ. ಬಳ್ಳಾರಿ ಜಿಲ್ಲೆಯನ್ನು ಪ್ರತಿನಿಧಿಸಿ, ಈಜು ಸ್ಪರ್ಧಿಗಳಾದ ಸಾಯಿ ನಿಖಿಲ್, ಗೋಪಿಚಂದ್, ಬೇಬಿ ಸಾಯಿ, ಕವಿತಾ ಅವರು ಭಾಗವಹಿಸಿದ್ದರು. ಈಜುಸ್ಪರ್ಧೆಯ ವಿವಿಧ ವಿಭಾಗಗಳಲ್ಲಿ ಸಾಯಿ ನಿಖಿಲ್‌ಗೆ 1 ಚಿನ್ನ, 1 ಕಂಚು ಪದಕ, ಗೋಪಿಚಂದ್ ಅವರಿಗೆ 3 ಬೆಳ್ಳಿ ಪದಕ, ಬೇಬಿ ಸಾಯಿ ಅವರಿಗೆ 1 ಬೆಳ್ಳಿ ಪದಕ, ಮತ್ತು ಕವಿತಾ ಅವರು 1 ಕಂಚು ಪದಕ ಪಡೆದುಕೊಂಡಿದ್ದಾರೆ. ರಜನಿ ಲಕ್ಕ, ಶರತ್ ಗಾಯಕ್‌ವಾಡ್ ಇವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದುಕೊಂಡಿದ್ದರು. ಈಜುಪಟುಗಳ ಈ ಉತ್ತಮ ಸಾಧನೆಗೆ ಶಾಸಕರಾದ ಬಿ.ನಾಗೇಂದ್ರ, ನಾರಾ ಭರತ್ ರೆಡ್ಡಿ, ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭರಾಣಿ.ವಿ.ಜೆ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ, ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಕೆ.ಗ್ರೇಸಿ ಅವರು ಅಭಿನಂದನೆ ವ್ಯಕ್ತಪಡಿಸಿದ್ದಾರೆ. --------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ